ಹೊರಾಂಗಣ ವ್ಯಾಯಾಮ ಘಟಕ ಉದ್ಘಾಟನೆ

ಕೆ.ಆರ್.ಪುರ,ಮಾ.೨೩- ಸರ್ಕಾರ ಸಾರ್ವಜನಿಕರ ಅನುಕೂಲಕ್ಕಾಗಿ ಉದ್ಯಾನವನ ಹಾಗೂ ರಸ್ತೆಗಳನ್ನು ಅಭಿವೃದ್ಧಿ ಮಾಡುತ್ತಿದೆ,ಅಭಿವೃದ್ಧಿಯ ಜೋತೆಗೆ ನಿರ್ವಹಣೆ ಅಗತ್ಯವಾಗಿದೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು
ಹೇಳಿದರು.
ಕ್ಷೇತ್ರದ ಬಸವನ ಪುರ ವಾರ್ಡನಲ್ಲಿ ಹೊರಂಗಣ ವ್ಯಾಯಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ಒತ್ತಡದ ಜೀವನದಿಂದ ಆರೋಗ್ಯಕ್ಕೆ ಹಲವು ಸಮಸ್ಯೆಗಳು ಎದುರಾಗುತ್ತಿವೆ, ಸಾರ್ವಜನಿಕರ ಉತ್ತಮ ಆರೋಗ್ಯಕ್ಕೆ ಉದ್ಯಾನವನಗಳು ಹೆಚ್ಚು ಅವಶ್ಯಕವಾಗಿದೆ ಎಂದು ನುಡಿದರು.

ಉದ್ಯಾನವನಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡುವ ಜವಾಬ್ದಾರಿ ನಮ್ಮ ಮೇಲಿದ್ದು,ನಮ್ಮ ಮುಂದಿನ ಪೀಳಿಗೆಯ ಉತ್ತಮ ಆರೋಗ್ಯಕ್ಕಾಗಿ ಉದ್ಯಾನವನಗಳ ರಕ್ಷಣೆ ಸಹ ಮಾಡಬೇಕೆಂದು ಕಿವಿಮಾತು ಹೇಳಿದರು.

ಈ ಸಂಧರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಜಯಪ್ರಕಾಶ್, ಶ್ರೀಕಾಂತ್ ಗೌಡ,ಕ್ಷೇತ್ರದ ಪ್ರಧಾನಕಾರ್ಯದರ್ಶಿ ಶ್ರೀರಾಮ್ ಇದ್ದರು.

ಸುದ್ದಿಚಿತ್ರ:ಕೆ.ಆರ್.ಪುರ ಕ್ಷೇತ್ರದ ಬಸವನಪುರ ವಾರ್ಡನನಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ವ್ಯಾಯಾಮ ಮಾಡುವ ಮೂಲಕ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಉದ್ಘಾಟಿಸಿದರು. ಮಾಜಿ ಪಾಲಿಕೆ ಸದಸ್ಯರಾದ ಜಯಪ್ರಕಾಶ್, ಶ್ರೀಕಾಂತ್ ಗೌಡ ಇದ್ದರು.