ಹೊರರಾಜ್ಯದ ಕ್ಷೌರದ ಅಂಗಡಿಗಳ ಪರೀಶೀಲನೆ ಮಾಡಿ ವಾರಿಕ ಆಗ್ರಹ

ಸೇಡಂ, ಜು,24: ಹಲವಾರು ವರ್ಷಗಳಿಂದ ತಲೆತಲಾಂತರದಿಂದ ಗ್ರಾಮೀಣ ಹೋಬಳಿ ತಾಲ್ಲೂಕಾ ಜಿಲ್ಲಾ ಮಟ್ಟಗಳಲ್ಲಿ ಕ್ಷೌರಿಕ ವೃತ್ತಿಯನ್ನು ಮಾಡುತ್ತಾ ಬಂದಿರುವ ಸ್ಥಳೀಯ ಕ್ಷೌರಿಕ ವೃತ್ತಿಯನ್ನು ಮಾಡುತ್ತಾ ಬಂದಿರುವ ಸ್ಥಳೀಯ ಸವಿತಾ ಸಮಾಜದ ಕ್ಷೌರಿಕ ವೃತ್ತಿಯನ್ನು ಕಸಿದುಕೊಂಡ ಹೊರ ರಾಜ್ಯದ ಅಕ್ರಮ ವಲಸಿಗರಿರುವ ಕ್ಷೌರಿಕರು ರಾಜ್ಯದ ಇತರೆ ಭಾಗಗಳಲ್ಲಿ ಅನೈತಿಕ ಚಟುವಟಿಕೆಗಳು ದಬ್ಬಾಳಿಕೆ ಮೋಸ ವಂಚನೆ ಮಾಡುತ್ತಿರುವ ಘಟನೆಗಳು ಸ್ಥಳೀಯ ಕ್ಷೌರಿಕ ವೃತ್ತಿಯನ್ನು ಮಾಡುವ ಕ್ಷೌರಿಕರ ಬದುಕಿಗೆ ತೊಂದರೆಯಾಗುತ್ತಿದೆ
ಹೊರ ರಾಜ್ಯದವರಿಗೆ ಅಂಗಡಿ ಪರವಾನಗಿ ನೀಡಬಾರದೆಂದು ಜಿಲ್ಲೆಯ ಸುತ್ತಮುತ್ತಲಿನ ತಾಲ್ಲೂಕಿನ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ಇತ್ತೀಚಿನ ದಿನಗಳಲ್ಲಿ ಅವರ ಉಪಟಳ ಹೆಚ್ಚಾಗಿದ್ದು ಕಂಡುಬಂದಿದ್ದು ಹೊರ ರಾಜ್ಯದವರು ಅಕ್ರಮ ವಲಸಿಗರಿರುವ ಕ್ಷೌರಿಕರ ಅಂಗಡಿಗಳನ್ನು ನಗರ ತಾಲೂಕು ಗ್ರಾಮೀಣ ಪ್ರದೇಶಗಳಲ್ಲಿ ಅವರ ಚಲನವಲನಗಳನ್ನು ಪರೀಶೀಲನೆ ಮಾಡಲು ಅಧೀಕಾರಿಗಳಿಗೆ ಸೂಚಿಸಬೇಕು ಅಂತವರ ಕ್ಷೌರದ ಅಂಗಡಿಗಳು ಬಂದ ಮಾಡಿಸಬೇಕು ಎಂದು ಕರ್ನಾಟಕ ರಾಜ್ಯ ಸವಿತಾ ಸಮಾಜದ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಆನಂದ ವಾರಿಕ ಮಾನ್ಯ ಜಿಲ್ಲಾಧಿಕಾರಿಗಳಿಗೆ ಪೆÇೀಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಸವಿತಾ ಪೀಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಸವಿತಾನಂದ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ಬೃಹತ್ ಮಟ್ಟದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದಾರೆ.