ಹೊರರಾಜ್ಯದಿಂದ ಬಂದವರಿಗೆ ಕಡ್ಡಾಯ ತಪಾಸಣೆ

ಚಳ್ಳಕೆರೆ.ಡಿ.೧;  ವಿದೇಶಗಳಲ್ಲಿ ಹಾಗು ರಾಜ್ಯದ ಲ್ಲಿ  ಕೋವಿಡ್ ಹೊಸ ವೈರಸ್ ಒಮಿಕ್ರಾನ್  ನಿಯಂತ್ರಿಸಲು ಶಾಲಾ ಮತ್ತು ಕಾಲೇಜ್ ಗಳಲ್ಲಿ ಹೊರ ರಾಜ್ಯದಿಂದ ಬಂದು ಹೋಗುವ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಕಡಿವಾಣ ಹಾಕಬೇಕು ಇಲ್ಲದಿದ್ದರೆ  ಕಠಿಣ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಎನ್ ರಘುಮೂರ್ತಿ ತಿಳಿಸಿದರು  ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳಿಗೆ ಕೊರೋನ 3 ನೇ ಅಲೆ ನಿಯಂತ್ರಿಸಲು  ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ನಾಳೆಯಿಂದ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಮಾಸ್ಕ್ ಹಾಗು 2 ನೇ ಕೋವಿಡ್  ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಪ್ರವೇಶ ನೀಡಲಾಗುವುದು ಹೊರದೇಶದ, ಹೊರ ರಾಜ್ಯದಿಂದ ಬರುವ ವಿದ್ಯಾರ್ಥಿಗಳು ಮತ್ತು ನೋಡಲು ಬರುವ ಪೋಷಕರಿಗೆ  ಕೋವಿಡ್  ಚೆಕಪ್  ಕಡ್ಡಾಯವಾಗಿ  ಮಾಡಿಸಬೇಕು ಎಂದು ಸೂಚಿಸಿದರು.ಈ ವೇಳೆ ಅಧಿಕಾರಿಗಳು ಇದ್ದರು.