ಹೊರಮುನಿ ಎಂಬ ಔಷಧೀಯ ಸಸ್ಯ

ಕಲಬುರಗಿ,ಜು 29: ಇದೊಂದು ವಿಶೇಷ ಔಷಧಿಯ ಗಿಡ.ಮುಟ್ಟಿದರೆ ಮುನಿಎಲೆ ಮುಟ್ಟಿದಾಗ ಒಳಭಾಗಕ್ಕೆ ಎಲೆಗಳು ಮಡಿಸಿಕೊಂಡರೆ ಇದು ಹೊರಭಾಗಕ್ಕೆ ಮಡಿಸಿಕೊಳ್ಳುವುದು.ಆದ್ದರಿಂದ ಇದಕ್ಕೆ ಹೊರಮುನಿ(ಹೊರಮುಚುಗ) ಎನ್ನುವರು.ಸಂಸ್ಕøತದಲ್ಲಿ ಪಂಕ್ತಿಪತ್ರ,ಪೀತಪುಷ್ಪ,ಹಿಂದಿಯಲ್ಲಿ ಲಜಾಲು,ಕನ್ನಡದಲ್ಲಿ ಜಲಪುಷ್ಪ,ದೊಡ್ಡಹೊರಮುಚ್ಚಲ,ಹೊರಮುನಿ ಎಂದು ಕರೆಯುತ್ತಾರೆ.ಇದು
ಮಳೆಗಾಲ, ಚಳಿಗಾಲದಲ್ಲಿ ಕಾಣಬರುವುದು.16-29 ಡಿಸೆ ಉಷ್ಣತೆ ಇರುವ ಪ್ರದೇಶದಲ್ಲಿ ಬೆಟ್ಟಗುಡ್ಡಗಳು ಕಲ್ಲಿನ ಪೆÇಟರೆಗಳು ,ತೇವಾಂಶ ಭರಿತ ಗೋಡೆಬದಿಯಲ್ಲಿಯೂ ನೆಲ ಆರ್ಕಿಡ್ ಗಳಂತೆ ಮಳೆಗಾಲದಲ್ಲಿ ಕಾಣಬರುತ್ತದೆ.ಗುಡ್ಡಗಾಡು ಜನರು ಆಯುರ್ವೇದ ಪಂಡಿತರು ಈ ಗಿಡವನ್ನು ಅರಸುತ್ತಾ ಹೋಗುತ್ತಾರೆ.ಇದು ಆಯುರ್ವೇದ ಸಿದ್ಧ ಔಷಧಗಳಲ್ಲಿ ಪ್ರಮುಖ ಸ್ಥಾನ ಪಡೆದಿದ್ದು.ಹಲವಾರು ಟಾನಿಕ್ ಆಯುರ್ವೇದ ಔಷಧಗಳಲ್ಲಿ ಬಳಕೆಯಾಗುತ್ತಿದೆ.
ಸಮೂಲ ಅಂದರೆ ಬೇರುಸಹಿತ ಈ ಗಿಡವನ್ನು ಕಷಾಯ ಮಾಡಿ ಸೇವಿಸಿದರೆ ಕೀಲುನೋವು,ಜ್ವರ,ಮಲೇರಿಯಾ ಜ್ವರ,ಅತಿಸಾರ,ಭೇದಿ,ಹೊಟ್ಟೆನೋವು,ಉದರವ್ಯಾದಿಗಳು,ಆಲ್ಸರ್,ಗೊನ್ಹೊರಿಯಾ,ಅಸ್ತಮಾ ಗುಣವಾಗುವುದು.ಇಡೀ ಸಸ್ಯ ಆಂಟಿ ಬಯಾಟಿಕ್,ಆಂಟಿಫಂಗಲ್,ಆಂಟಿವೈರಲ್ ಗುಣವನ್ನು ಹೊಂದಿದ್ದು ಇದರ ಸೇವನೆಯಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುವುದು.( ವಿಶೇಷ ಸೂಚನೆ: ಈ ವಿಷಯ ಮಾಹಿತಿಗೆ ಮಾತ್ರ. ವೈದ್ಯರ ಸಲಹೆ ಇಲ್ಲದೇ ಇದನ್ನು ಸೇವಿಸಬಾರದು)ಇದೊಂದು ಅಮೂಲ್ಯ ಔಷಧಿಯಗುಣವನ್ನು ಹೊಂದಿರುವ ಪುಟ್ಟ ಮೂಲಿಕೆಯಾಗಿದ್ದು ಕಳೆಯಂತೆ ಕಂಡು ಮರೆಯಾಗುವುದೇ ಹೆಚ್ಚು.
-ಜಿ.ಕೆ.ಪಿ ಯಾದಗಿರಿ