ಹೊರಭಾಗದಿಂದ ಬಂದವರಿಗೆ ತಪಾಸಣೆ ಮಾಡಲು ಸಲಹೆ

ಹೊನ್ನಾಳಿ.ಏ.೨೯; ಬೆಂಗಳೂರು ಹಾಗೂ ಹೊರ ರಾಜ್ಯಗಳಿಂದ ವಿಶೇಷವಾಗಿ ಗ್ರಾಮೀಣ ಪ್ರದೇಶಕ್ಕೆ ಬರುವ ಸಾರ್ವಜನಿಕರನ್ನು ಗುರ್ತಿಸಿ ಅವರನ್ನು ಒಂದು ವಾರಗಳ ಕಾಲ ಮನೆಯಲ್ಲೇ ಇರುವಂತೆ ಹಾಗೂ ಕೋವಿಡ್ ಟೆಸ್ಟ್ ಮಾಡಿಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಿದರು.ತಾಲೂಕು ಕಚೇರಿಯಲ್ಲಿ ನಡೆದ ಕೋವಿಡ್ ನಿರ್ವಹಣಾ ಸಭೆಯಲ್ಲಿ ಅವರು ಮಾತನಾಡಿದರು.ಎಲ್ಲಾ ಇಲಾಖೆಗಳು ಒಟ್ಟಾಗಿ ಕೋವಿಡ್ ವಿರುದ್ದ ಕೆಲಸ ಮಾಡಿ ಈ ಕೆಲಸ ನನ್ನ ಇಲಾಖೆಗೆ ಸಂಬಂಧಿಸಿದ್ದಲ್ಲ ಎಂದು ಯಾರು ಮೈ ಮರೆಯಬೇಡಿ,ಅಧಿಕಾರಿಗಳು ಕಳೆದ ಬಾರಿ ಕೋವಿಡ್ ಸಂಬಂಧ ಬಾರೀ ಎಚ್ಚರಿಕೆಯಿಂದ ಕೆಲಸ ಮಾಡಿದ್ದಿರಿ ಆದರೆ ಈ ಬಾರಿ ಅಂತಹ ಉತ್ಸುಕತೆ ಅಧಿಕಾರಿಗಳಲ್ಲಿ ಕಾಣುತ್ತಿಲ್ಲ ಈ ಕ್ಷಣದಿಂದ ಅಧಿಕಾರಿಗಳು ಎಚ್ಚೆತ್ತು ಕೆಲಸ ಮಾಡಿ ಸಾರ್ವಜನಿಕರಿಂದ ದೂರು ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷೀಣವಾಗಿ ಕ್ರಮ ಕೈಗೊಳ್ಳುವುದಕ್ಕೆ ಶಿಫಾರಸ್ಸು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಅನಾವಶ್ಯಕವಾಗಿ ಅಥವಾ ಏನೇ ಕೆಲಸ ಇಲ್ಲದಿದ್ದರೂ ಸುಖಾಸುಮ್ಮನೆ ರಸ್ತೆಗಿಳಿಯುವವರ ವಿರುದ್ದ ಕ್ರಮ ಕೈಗೊಳ್ಳಿ, ಆದರೆ ಕೃಷಿ ಚಟುವಟಿಕಗೆ ಹೋಗುವ ಅಥವಾ ಕೃಷಿ ಸಂಬಂಧ ಗೊಬ್ಬರ ಅಥವಾ ಪರಿಕರಗಳನ್ನು ಕೊಂಡೋಯ್ಯಲು ಬರುವ ರೈತರಿಗೆ ತೊಂದರೆ ಕೊಡಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.ಎರಡನೇ ಹಂತದ ಕರೋನಾ ವ್ಯಾಕ್ಷಿನ್ ಹಾಕಿಸಿಕೊಳ್ಳಲ್ಲು ಬರುವವರಿಗೆ ಮೊದಲೇ ದೂರಾವಾಣಿ ಮುಖಾಂತರ ಮಾತನಾಡಿ ಯಾವ ದಿನಾಂಕದಂದು ಬರಬೇಕು ಎಂಬುದನ್ನು ತಿಳಿಸಿದರೆ ಆಸ್ಪತ್ರೆಗಳಲ್ಲಿ ಕ್ರೌಡ್ ಆಗುವುದಿಲ್ಲ ಆ ಕೆಲಸವನ್ನು ಆಶಾ ಹಾಗೂ ಆರೋಗ್ಯ ಸಹಾಯಕಿಯರು ಹಾಗೂ ಸಿಬ್ಬಂಧಿಗಳ ಮುಖಾಂತರ ಮಾಡಿಸಿ ಎಂದರು.ಎಲ್ಲರಿಗೂ ಉಚಿತ ಲಸಿಕೆ ನೀಡಲು ಸರ್ಕಾರವೇ 400 ಕೋಟಿ ವೆಚ್ಚದಲ್ಲಿ 1 ಕೋಟಿ ಲಸಿಕೆಯನ್ನು ತರಿಸುತ್ತಿದೆ,ಬೇಡಿಕೆಗಿಂತ ಹೆಚ್ಚುವರಿಯಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುತ್ತದೆ ಯಾರೂ ಸಹ ಆತಂಕಪಡುವ ಅಗತ್ಯ ಇಲ್ಲ,18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಸಿಗಲಿದೆ, ನೊಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ ಎಲ್ಲರೂ ನೊಂದಣಿ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದರು.ಮಾನವಿಯತೆ ಮೆರೆಯಿರಿ ; ಎಲ್ಲರಿಗೂ ಜೀವ ಹಾಗೂ ಜೀವನ ಇದೆ,ಯಾರೇ ರೋಗಿಗಳು ಆಸ್ಪತ್ರೆಗೆ ಬಂದರೆ ಮಾನವಿಯತೆಯಿಂದ ಮಾತನಾಡಿಸಿ ಕೋವಿಡ್ ನೆಪದಲ್ಲಿ ಇನ್ನೀತರ ಚಿಕಿತ್ಸೆ ನೀಡುವುದನ್ನು ಮರೆಯಬೇಡಿ,ಯಾರಿಗೆ ಯಾವಾಗ ಶಸ್ತçಚಿಕಿತ್ಸೆ ಮಾಡುತ್ತೇವೆ ಎಂದು ಹೇಳುತ್ತಿರೋ ಅಂದೇ ಶಸ್ತçಚಿಕಿತ್ಸೆ ಮಾಡಿ,ರೋಗಿಗಳನ್ನು ಅಲೆಯುವಂತೆ ಮಾಡಬೇಡಿ ಎಂದು ವೈದ್ಯರಿಗೆ ಕಿವಿಮಾತು ಹೇಳಿದರು.ಹೆಡ್‌ಕ್ವಾರ್ಟಸ್‌ನಲ್ಲೇ ಇರಬೇಕು ; ಕೆಲ ಅಧಿಕಾರಿಗಳು ಜಿಲ್ಲಾ ಕೇಂದ್ರದಿಂದ ಓಡಾಡುತ್ತಿದ್ದಾರೆ,ಅಂತಹವರು ತಾಲೂಕು ಕೇಂದ್ರದಲ್ಲೇ ಮನೆ ಮಾಡಿ ವಾಸ ಮಾಡಬೇಕು,ಇಂತಹ ಸಮಯದಲ್ಲಿ ತಕ್ಷಣಕ್ಕೆ ಸೇವೆಗೆ ಲಭ್ಯವಾಗಬೇಕು, ಇದು ಕೊನೆ ವಾರ್ನಿಂಗ್ ತಾಲೂಕು ಕೇಂದ್ರದಲ್ಲಿ ಮನೆ ಮಾಡಿ ಇರಬೇಕು ಇಲ್ಲದಿದ್ದರೆ ನಿಮ್ಮ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳಿಗೆ ಖಡಕ್‌ಆಗಿ ಎಚ್ಚರಿಕೆ ನೀಡಿದರು. 139 ಜನರಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ,ಅವರಲ್ಲಿ 100 ಜನ ಹೋಂ ಐಶೋಲೇಷನ್ ನಲ್ಲಿದ್ದರೆ,12 ಜನ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ,14 ಜನ ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದಾರೆ,13 ಜನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಜನವರಿ 16 ರಿಂದ ಏಪ್ರಿಲ್ 28 ರ ವರೆಗೆ 3593 ಜನರಿಗೆ ಲಸಿಕೆ ಹಾಕಲಾಗಿದೆ ಎಂದು ವಿವರಿಸಿದರು.ಪುರಸಭಾಧ್ಯಕ್ಷ ಶ್ರೀಧರ್ ಕೆ.ವಿ.ತಹಸೀಲ್ದಾರ್ ಬಸನಗೌಡ ಕೋಟುರ,ನ್ಯಾಮತಿ ತಹಸೀಲ್ದಾರ್ ತನುಜಾಸೌದತ್ತಿ,ತಾಲೂಕು ವೈದ್ಯಾಧಿಕಾರಿ ಡಾ.ಕೆಂಚಪ್ಪ,ಹೊನ್ನಾಳಿ ಇಒ ಗಂಗಾಧರಮೂರ್ತಿ,ನ್ಯಾಮತಿ ಇಒ ರಾಮಾಬೋವಿ,ಬಿಇಒ ರಾಜೀವ್,ಕೃಷಿ ಸಹಾಯಕ ನಿರ್ದೇಶಕ ಸುರೇಶ್,ಗ್ರೇಡ್ 1 ತಹಸೀಲ್ದಾರ್ ಸುರೇಶ್,ನ್ಯಾಮತಿ ಉಪತಹಸೀಲ್ದಾರ್ ನಾಗರಾಜ್,ನ್ಯಾಮತಿ ಪಿಎಸೈ ರಮೇಶ್,ಎಎಸೈ ಮಾಲ್ತೇಶ್ ಸೇರಿದಂತೆ ಅನೇಕ ತಾಲೂಕುಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.