ಹೊರಗುತ್ತಿಗೆ ನೌಕರರ ಹಸ್ತಾಂತರ ಬೇಡ

ಕಲಬುರಗಿ,ಜೂ.10- ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಹೊರಗುತ್ತಿಗೆ ಸಿಬ್ಬಂದಿಗಳಿಗೆ ಎಲ್.ಆಂಡ್ ಟಿ ಕಂಪನಿಗೆ ಹಸ್ತಾಂತರಿಸದೇ ಮಂಡಳಿಯಲ್ಲಿ ಉಳಿಸಿಕೊಂಡು ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹೊರ ಗುತ್ತಿಗೆ ನೌಕರರ ಸಂಘ ಮನವಿ ಮಾಡಿದೆ.
ಈ ಸಂಬಂಧ ಪ್ರಾದೇಶಿಕ ಆಯುಕ್ತರು, ಕಲಬುರಗಿ ವಲಯ ಹಾಗೂ ಮಹಾನಗರ ಪಾಲಿಕೆ ಆಡಳಿತಾಧಿಕಾರಿಗಳಾದ ಡಾ.ಎನ್.ವಿ.ಪ್ರಸಾದ್ ಅವರಿಗೆ ಸಂಘದ ಕಲಬುರಗಿ ವಲಯದ ಅಧ್ಯಕ್ಷ ಸುನೀಲ ಮಾರುತಿ ಮಾನ್ಪಡೆ, ಜಿಲ್ಲಾಧ್ಯಕ್ಷ ವೆಂಕಟೇಶ ಬಿಕ್ಕಿ, ಖಜಾಂಚಿ ನಾರಾಯಣ ರಂಗದಾಳ, ಜಿಲ್ಲಾ ಕಾರ್ಯದರ್ಶಿ ನಾಗರಾಜ ಗೋಗಿ, ರಾಜು ಬನ್ನಿ, ಅನಿಲ ಮಂಗಾ, ಚಂದ್ರು ಹತಗುಂದಿ, ಶಿವರಾಜ ಸಿಂಧೆ ಮತ್ತು ತವರು ರಾಠೋಡ್ ಅವರು ಮನವಿಪತ್ರ ಸಲ್ಲಿಸಿ ಎಲ್.ಆಂಡ್ ಟಿ ಕಂಪನಿಗೆ ನೀರು ಸರಬುರಾಜು ನಿರ್ವಹಣೆಯನ್ನು ವಹಿಸಿಕೋಡುವ ಮುನ್ನ ಹೊರಗುತ್ತಿಗೆ ನೌಕರರ ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ಬಗ್ಗೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಹಾಗೂ ಸಂಘದ ಪ್ರತಿನಿಧಿಗಳ ಜೊತೆ ಸಮಸ್ಯೆಯ ಬಗ್ಗೆ ಚರ್ಚಿಸಬೇಕೆಂದು ಮನವಿ ಮಾಡಿದ್ದಾರೆ. ಹೊರ ಗುತ್ತಿಗೆ ನೌಕರರನ್ನು ಸರ್ಕಾರ ಐ&ಖಿ ಕಂಪನಿಗೆ ಹಸ್ತಾಂತರ ಮಾಡುವದು ನಿಲ್ಲಿಸಿ ಮಂಡಳಿಯಲ್ಲಿಯೇ ಉಳಿಸಿಕೊಂಡು ವೇತನ ಪಾವತಿ ಮಾಡಬೇಕು, ಹೊರಗುತ್ತಿಗೆ ನೌಕರರನ್ನು ಮಾರಾಟದ ಸರಕ್ಕಾಗಿ ನೋಡುತ್ತಿರುವ ಸರ್ಕಾರದ ದೊರಣೆಯನ್ನು ನೌಕರರ ಹಿತದೃಷ್ಟಿಯಿಂದ ವಾಪಸ್ ಪಡೆಯಬೇಕು, ಒಂದು ವೇಳೆ ಹೊರಗುತ್ತಿಗೆ ಸಿಬ್ಬಂದಿಯನ್ನು ಐ&ಖಿ ಕಂಪನಿಯವರಿಗೆ ಹಸ್ತಾಂತರಿಸಿದ್ದಲ್ಲಿ ನೌಕರರ ಮೇಲೆ ಇಲ್ಲ ಸಲ್ಲದ ಕಾರಣಗಳನ್ನು ನೀಡಿ ಕೆಲಸದಿಂದ ತೆಗೆಯಲು ಮುಂದಾದಲಿ ಅಂತಹ ನೌಕರರುಗಳನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಕಲಬುರಗಿಯ ಮಹಾನಗರ ಪಾಲಿಕೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡುಬೇಕು, ಎಲ್.ಆಂಡ್ ಟಿ ಕಂಪನಿಯವರು ಸುಮಾರು ವರ್ಷಗಳಿಂದ ದುಡಿದ ಅಂಗವಿಕಲ ಹಾಗೂ ಮಹಿಳಾ ಹೊರಗುತ್ತಿಗೆ ನೌಕರರನ್ನು ಅನಾವಶ್ಯಕ ಕಾರಣಗಳನ್ನು ನೀಡಿ ಕೆಲಸದಿಂದ ತೆಗೆಯುವ ಸಂದರ್ಭ ಬಂದಲ್ಲಿ ಅವರ ಕುಟುಂಬ ಸದಸ್ಯರೊಬ್ಬರಿಗೆ ನೌಕರಿ ನೀಡಬೇಕು, ಹೊರಗುತ್ತಿಗೆ ಸಿಬ್ಬಂದಿ ಸೇವೆಯಲ್ಲಿರುವಾಗಲೇ ನಿಧನ ಹೊಂದಿದರೆ ಅವರ ಕುಟುಂಬದ ಒಬ್ಬ ಸದಸ್ಯರಿಗೆ ನೌಕರಿಯನ್ನು ನೀಡಬೇಕು, ನೌಕರರಿಗೆ ಪ್ರತಿ ತಿಂಗಳು 5 ನೇ ತಾರೀಕಿನ ಒಳಗಾಗಿ ವೇತನ ನೀಡಬೇಕು, ಸರ್ಕಾರದ ಆದೇಶದಂತೆ ವೇತನ ಸಹಿತ ರಜೆ ನೀಡಬೇಕು ಮತ್ತು ಕೆಲಸ ಮಾಡುವ ಸಮಯದಲ್ಲಿ ಅವಘಡಗಳು ಸಂಭವಿಸಿದ್ದಲ್ಲಿ ಹಾಗೂ ಅಕಾಲಿಕ ಮರಣ ಹೊಂದಿದ ಸಮಯದಲ್ಲಿ ಆರ್ಥಿಕ ನೆರವು ನೀಡಬೇಕು, ಹೊರಗುತ್ತಿಗೆ ನೌಕರರ ಆರೋಗ್ಯ ಏರು-ಪೇರಾದರೆ (ಲಕ್ವಾ, ಹೃದಯಘಾತ, ದೀಘ್ರ ಅನಾರೋಗ್ಯ ಇತ್ಯಾದಿ) ಅವರ ಕುಟುಂಬದ ಸದಸ್ಯರೊಬ್ಬರಿಗೆ ಬದಲಿ ವ್ಯವಸ್ಥೆ ಕಲ್ಪಿಸಬೇಕು, ಹೊರಗುತ್ತಿಗೆ ನೌಕರರಿಗೆ ಸಂಬಂಧಿಸಿದಂತೆ ಅವರು ಪಡೆಯುವ ವೇತನದ ಬಗ್ಗೆ ಮಾಹಿತಿ ಅರಿಯಲು ಪ್ರತಿ ತಿಂಗಳು ವೇತನ ಚೀಟಿಯ ಒಂದು ಪ್ರತಿಯನ್ನು ನೀಡಬೇಕು. ಕಲಬುರಗಿ ವಲಯದಲ್ಲಿ ಹೊರಗುತ್ತಿಗೆ ನೌಕರರು ಗರಿಷ್ಠವಾಗಿ ಎಷ್ಟು ಜನ ನೌಕರರು ಯಾವ -ಯಾವ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂಬುದರ ಬಗ್ಗೆ ಖಚಿತ ಪಡೆಸಿಕೊಳ್ಳಲು ತನಿಖೆ ನಡೆಸಿ ನಕಲಿ ಹೊರಗುತ್ತಿಗೆ ನೌಕರರ ಹೆಸರಿನಲ್ಲಿ ಹಣ ಪೆÇೀಲಾಗುವದನ್ನು ತಡೆಯಬೇಕು, ಹಲವು ವರ್ಷಗಳಿಂದ ಟೆಂಡರ್ ನಲ್ಲಿ ಕಡಿಮೆ ನೌಕರರನ್ನು (225) ತೋರಿಸಿ ನಂತರ 75 ಜನ ನೌಕರರು ಇನ್ನು ಹೆಚ್ಚುವರಿ ಇದ್ದಾರೆ ಎಂದು ಹೇಳಿ ನಮ್ಮ ವೇತನದಲ್ಲಿ 2000 ರಿಂದ 2500 ಸಾವಿರ ರೂಪಾಯಿ ಕಡಿತ ಗೊಳಿಸಿ ಈ ಹೆಚ್ಚು ನೌಕರರಿಗೆ ಸಂಬಳ ನೀಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ ಅದರಿಂದ ದುಡಿಯುವ ನಮಗೆ ಬರುವ ಸಂಬಳದಲ್ಲಿ ಭಾರಿ ನಷ್ಟ ಸಂಭವಿಸುತ್ತಿದೆ ಇದರ ಬಗ್ಗೆ ಕೂಡಲೇ ತನಿಖೆ ನಡೆಸಿ ನ್ಯಾಯ ಒದಗಿಸಬೇಕು.
ಹೊರಗುತ್ತಿಗೆ ನೌಕರರು ಪ್ರತಿ ದಿನವು ಕೆಲಸ ಮಾಡಿದರು ತಿಂಗಳಲ್ಲಿ ಕನಿಷ್ಠ ಮೂರು – ನಾಲ್ಕು ರಜೆ ಹಾಕಿ ಅನ್ಯಾಯ ಮಾಡುತ್ತಿದ್ದು ಕೂಡಲೇ ಹಾಜರಿ ಪುಸ್ತಕದಲ್ಲಿ ನೌಕರರಿಂದಲೇ ಸಹಿ ಮಾಡಿಕೊಂಡು ಅದರ ಒಂದು ಪ್ರತಿ ನೌಕರರಿಗೆ ತಿಂಗಳ ಕೊನೆಯಲ್ಲಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ..