ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ಕಲ್ಪಿಸಲು ಒತ್ತಾಯ

ಚಿಂಚೋಳಿ,ಜು.28- ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಮತ್ತು ನಿಗಮ ಮಂಡಳಿಗಳಲ್ಲಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಹೊರ ಮೂಲ ಸಂಸ್ಥೆ (ಎನ್‍ಜಿಓ) ವತಿಯಿಂದ ಸಿಬ್ಬಂದಿಗಳ ನೇಮಕ ಮಾಡಿಕೊಳ್ಳುವತ್ತಿರುವುದಾಗಿದೆ.
ಈ ಪದ್ಧತಿ ಜಾರಿಯಲ್ಲಿ ಇರುವುದ್ದರಿಂದ ಹೊರ ಮೂಲ ಸಂಸ್ಥೆಯವರು ಒದಗಿಸುವ ಸಿಬ್ಬಂದಿಗಳ ನೇಮಕಾತಿಯಲ್ಲಿ ಮೀಸಲಾತಿ ನಿಯಮಗಳನ್ನು ಪಾಲಿಸಿರುವುದಿಲ್ಲಾ. ಅಯಾ ಹೊರ ಮೂಲ ಸಂಸ್ಥೆಗಳು ನೇಮಕ
ಮಾಡುವ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಕೂಡ ಇರಲಾರದು. ಅವರ ಈ ರೀತಿ ಸೇವೆಗೆ ಕಮಿಷನ್ ನೀಡಲಾಗುತ್ತದೆ. ಇದರಲ್ಲಿ ಆ ಸಂಸ್ಥೆಯವರು ಸರ್ಕಾರ ನಿಗದಿಪಡಿಸುವ ಕನಿಷ್ಠ ವೇತನ ಕಾಯ್ದೆ ಪ್ರಕಾರ ಕೂಲಿ ಮತ್ತು ದಿನ ಭತ್ಯೆ ಪಿ.ಎಫ್, ಹಾಗೂ ಇ.ಎಸ್.ಐ ಹಣ ತೊಡಗಿಸದಿರುವ ಅನೇಕ ಉದಾಹರಣೆಗಳುಂಟು. ಇದರಿಂದ ಸಿಬ್ಬಂದಿಗಳಿಗೆ ಶೋಷಣೆ ಮಾಡಲಾಗುತ್ತದೆ.
ಅಲ್ಲದೆ ಈ ರೀತಿ ನೇಮಕಾತಿಗಾಗಿ ಹೊರ ಮೂಲ ಸಂಸ್ಥೆಯವರು ಮುಂಗಡ ಕಮಿಷನ್ ಹಣ ಪಡೆದುಕೊಂಡು ನೇಮಕ ಮಾಡುತ್ತಾರೆ. ಇದಲ್ಲದೇ ಯಾರು ಹೆಚ್ಚಿನ ಕಮಿಷನ್ ಕೊಡುತ್ತಾರೆ ಅವರನ್ನೇ ಕೆಲಸದಲ್ಲಿ ಮುಂದುವರೆಸುತ್ತಾರೆ. ಇಲ್ಲವಾದರೆ ಈ ಸಿಬ್ಬಂದಿಗಳ ಸೇವೆಯನ್ನು ಮುಟಕುಗೊಳಿಸಿ ಮತ್ತೊಬ್ಬರನ್ನು ನಿಯೋಜಿಸಿರುತ್ತಾರೆ. ಇಂತಹ ಪದ್ಧತಿಯಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ವಿದ್ಯಾವಂತ ನಿರುದ್ಯೋಸ್ಥರ ಸಂಖ್ಯೆ ಹೆಚ್ಚಾಗುತ್ತದೆ. ಅಲ್ಲದೇ ಅವರ ನೇಮಕಾತಿಯ ಅರ್ಹ ವಯಸ್ಸು ಮಿತಿ ಮೀರಿ ಹೋಗಿರುತ್ತದೆ.
ಹೀಗಾಗಿ ರಾಜ್ಯದಲ್ಲಿ ಪಧವಿದಾರರು ಹಾಗೂ ವ್ಯದಕೀಯ ಇಂಜನಿಯರಿಂಗ್ ಕೋರ್ಸ್‍ಗಳು ಮುಗಿಸಿದ ಅನೇಕರು ವಿದ್ಯಾರ್ಹತೆಯ ಪ್ರಮಾಣ ಪತ್ರಗಳು ನಿರುಪಯುಕ್ತವಾಗುತ್ತವೆ. ಹೀಗಾಗಿ ಖಾಯಂ ಸಿಬ್ಬಂದಿಗಳನ್ನು ಸಾಧ್ಯವಾದಷ್ಟು
ಮಟ್ಟಿಗೆ ಅಯಾ ಇಲಾಖೆಗಳಲ್ಲಿ ನೇರ ನೇಮಕಾತಿ ಪ್ರಕ್ರಿಯೆಗಳು ಜಾರಿಯಲ್ಲಿಡುವುದು ಸೂಕ್ತ. ಅತೀ ಜರೂರ ಸಂದರ್ಭದಲ್ಲಿ
ಅಯಾ ಇಲಾಖೆಗಳವತಿಯಿಂದ ಇಲಾಖೆ ಮುಖ್ಯಸ್ಥರೆ ಅಭ್ಯರ್ಥಿಳನ್ನು ಗುತ್ತಿಗೆ ಆಧಾರದ ಮೇಲೆ ನಿಗದಿತ ಅವಧಿಗಾಗಿ ನೇಮಕ ಮಾಡಿಕೊಳ್ಳುವ ನಿಯಮ ಜಾರಿಗೆ ತರುವುದು ಸೂಕ್ತವಾದದ್ದು. ಅದ್ದರಿಂದ ಸರ್ಕಾರ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು ಈಗಾಗಲೇ ಹೊರ ಮೂಲ ಸಂಸ್ಥೆಗಳಿಂದ ನೇಮಕವಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಮೀಸಲಾತಿ
ಯಮಗಳಂತೆ ಅವರ ಸೇವೆಗಳನ್ನು ಸರ್ಕಾರ ಸಕ್ರಮಗೊಳಿಸಿ ಖಾಯಂ ನೌಕರರನ್ನಾಗಿ ಸೇವೆಯಲ್ಲಿ ಮುಂದುವರೆಸುವುದು ಕೂಡ ಸೂಕ್ತವಾದದ್ದು. ಒಟ್ಟಾರೆ ಹೊರ ಮೂಲ ಸಂಸ್ಥೆ ರವರಿಗೆ ಕಮಿಷನ್ ಆಧಾರದ ಮೇಲೆ ಸಿಬ್ಬಂದಿಯನ್ನು ಒದಗಿಸುವ ಈ ನಿಯಮ ಸರ್ಕಾರ ರದ್ದುಪಡಿಸುವಂತೆ ಕೋರಿ ಈ ಮನವಿ ಸಲ್ಲಿಸಿದೆ, ಸಮಾಜ ಜಾಗೃಣ ಮಂಚ್ ಸಂಚಾಲಕರಾದ ರಮೇಶ ಯಾಕಾಪೂರ, ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.