
ದುರುಗಪ್ಪ ಹೊಸಮನಿ
ಲಿಂಗಸುಗೂರು,ಫೆ.೨೨- ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಅಧಿನದಲ್ಲಿ ನಡೆಯುತ್ತಿರುವ ತಾಲೂಕಿನ ಮೆಟ್ರಿಕ್ ಪೂರ್ವ ಬಾಲಕ, ಬಾಲಕಿಯರ ವಸತಿ ನಿಲಯದಲ್ಲಿ ಹಾಗೂ ಉಳಿದ ವಸತಿ ನಿಲಯಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವೇತನ ಇಲ್ಲದೆ ಪರದಾಡುವಂತಾಗಿದೆ ಇದರಿಂದಾಗಿ ನಿನ್ನೆಯಿಂದ ನಡೆದ ಕಾರ್ಮಿಕರ ಅಹೋರಾತ್ರಿ ಹೊರಾಟ ರಾಯಚೂರಿನಲ್ಲಿ ಮಾಡುತ್ತಿರುವ ಪರಿಣಾಮವಾಗಿ ವಸತಿ ನಿಲಯಗಳಲ್ಲಿ ಕಾರ್ಮಿಕರು ಇಲ್ಲದೆ ನಿಲಯ ಪಾಲಕರು ಆಕಾಶದ ಕಡೆ ಮುಖಮಾಡಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಲಿಂಗಸುಗೂರು ತಾಲೂಕಿನ ೧೪ ಮೆಟ್ರಿಕ್ ಪೂರ್ವ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುಂಜಾಗೃತಾ ಕ್ರಮವಾಗಿ ಸ್ವತಃ ನಿಲಯ ಪಾಲಕರು ಮಕ್ಕಳಿಗಾಗಿ ಅಡುಗೆ ಮಾಡಲು ಮುಂದಾಗಿದ್ದಾರೆ. ಅದರಂತೆ ಲಿಂಗಸುಗೂರು ನಗರದಲ್ಲಿ ಇರುವ ಅಂಬೇಡ್ಕರ್ ಬಾಲಕರ ವಸತಿ ನಿಲಯದ ವಾರ್ಡ್‌ನ ಮಲ್ಲಿಕಾರ್ಜುನ ಗೌಡ ಇವರು ತಮ್ಮ ಕರ್ತವ್ಯ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಅಡುಗೆ ಮಾಡಿ ಉಣಬಡಿಸಿದ ನಿಲಯ ಪಾಲಕ ಮಲ್ಲಿಕಾರ್ಜುನ ಗೌಡ ಅಡುಗೆ ತಯಾರಿಸುವ ಪೋಟೋ ಸಾಕ್ಷಿಯಾಗಿದೆ.
ಲಿಂಗಸುಗೂರು ತಾಲೂಕಿನ ಮೆಟ್ರಿಕ್ ಪೂರ್ವ ವಸತಿ ನಿಲಯಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಸಂಖ್ಯೆ ೧೦೦ಕ್ಕೂ ಹೆಚ್ಚು ಕಾರ್ಮಿಕರು ತಮ್ಮ ದೈನಂದಿನ ಕೇಲಸಕ್ಕೆ ತೆರಳುವ ಮೂಲಕ ಕೆಲಸ ಮಾಡುತ್ತಿದ್ದಾರೆ.
ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಳೆದ ಆರು ತಿಂಗಳಿಂದ ಕಾರ್ಮಿಕರಿಗೆ ಸಂಬಳ ಇಲ್ಲದೆ ಪರದಾಡುತ್ತಿದ್ದಾರೆ. ಏಕೆಂದರೆ, ಇವರಿಗೆ ಬಜೆಟ್ ಕೊರತೆ, ಏಕೆಂದರೆ ಹೊರ ಗುತ್ತಿಗೆ ಪಡೆದ ಎಆರ್‌ಸಿ ಗುತ್ತಿಗೆದಾರರು ವೇತನ ಪಾವತಿಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬಜೆಟ್ ಅನುದಾನ ಬಿಡುಗಡೆ ಮಾಡಿರುವುದಿಲ್ಲ. ಸರ್ಕಾರದ ವಿಳಂಬ ನೀತಿ ಧೊರಣೆಯಿಂದ ಕಾರ್ಮಿಕರ ಗೋಳು ಕೇಳುವವರಿಲ್ಲ?
ಇನ್ನು ವಸತಿ ನಿಲಯಗಳಿಗೆ ಆಹಾರ ಸರಬರಾಜು ಮಾಡುವ ಗುತ್ತಿಗೆದಾರರು ಕೂಡ ವಸತಿ ನಿಲಯಕ್ಕೆ ಆಹಾರ ಧಾನ್ಯ ಸರಬರಾಜು ಮಾಡದೆ ವಿದ್ಯಾರ್ಥಿ ವಾರ್ಡ್‌ಗಳಲ್ಲಿ ಜೀವ ಹಿಂಡುವ ಮೂಲಕ ಎಆರ್‌ಸಿ ಗುತ್ತಿಗೆದಾರರು ಕೆಲಸ ಮಾಡುವಲ್ಲಿ ತಲ್ಲಿನರಾಗಿದ್ದಾರೆ ಎಂಬುದು ವಾರ್ಡ್‌ಗಳ ವಲಯದಲ್ಲಿ ಮಾತುಗಳು ಕೇಳಿಬಂದಿದೆ. ಜಿಲ್ಲೆಯ ಮೇಲಾಧಿಕಾರಿಗಳ ಬೇಜವಾಬ್ದಾರಿ ಆಡಳಿತ ನಿರ್ಲಕ್ಷ್ಯ ಇದಕ್ಕೆ ಪ್ರಮುಖ ಕಾರಣವಾಗಿದೆ.
ಇದರಿಂದ ತಾಲೂಕಿನ ವಸತಿ ನಿಲಯದ ನಿಲಯ ಪಾಲಕರ ಗೋಳು ಕೇಳುವವರು ಯಾರೂ? ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕಿದೆ.
ಅದರಂತೆ ತಾಲೂಕಿನ ಎಲ್ಲಾ ವಸತಿ ನಿಲಯಗಳ ಸಮಸ್ಯೆಗಳು ಇದೆ ರೀತಿ ಇರುತ್ತದೆ ಆದರೂ ಕೂಡ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳ ವೈಫಲ್ಯವೇ ಎದ್ದು ಕಾಣುತ್ತದೆ.
ಇದೆ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳಿಗೆ ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾದರೆ ಅದಕ್ಕೆ ನೇರವಾಗಿ ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ ಕೂಡಲೇ ಮೇಲಾಧಿಕಾರಿಗಳು ಎಚ್ಚೆತ್ತುಕೊಂಡು ವಿದ್ಯಾರ್ಥಿಗಳಿಗೆ ಹಾಗೂ ನಿಲಯ ಪಾಲಕರಿಗೆ ಆಹಾರ ಧಾನ್ಯ ಸರಬರಾಜು ಮಾಡಿ ಮತ್ತು ಹೊರಗುತ್ತಿಗೆ ಕಾರ್ಮಿಕರಿಗೆ ವೇತನ ಪಾವತಿಗೆ ಮುಂದಾಗಬೇಕು ಎಂಬುದು ಂiuಖಿuಛಿ ಸಂಘಟನೆಯ ತಾಲೂಕು ಸಂಚಾಲಕ ಹನುಮರೇಡ್ಡಿ ಲಿಂಗಸುಗೂರು ಇವರು ಸಂಜೆ ವಾಣಿ ಪತ್ರಿಕೆಯೊಂದಿಗೆ ಮಾತನಾಡಿ ತಿಳಿಸಿದ್ದಾರೆ.
ಜಿಲ್ಲಾ ಸಮಾಜ ಉಪನಿರ್ದೇಶಕರು ಕಾರ್ಮಿಕರಿಗೆ ವೇತನ ಪಾವತಿಗೆ ಮುಂದಾಗಿ ಸಮಾಜ ಕಲ್ಯಾಣ ಇಲಾಖೆಯ ಮರ್ಯಾದೆ ಉಳಿಸಲು ಕೆಲಸ ಮಾಡಬೇಕು ಎಂಬುದು ವಿದ್ಯಾರ್ಥಿಗಳ ಒತ್ತಾಯವಾಗಿದೆ.
ಖೈರವಾಡಗಿ ವಸತಿ ನಿಲಯದ ವಾರ್ಡ್ ನ ಶರಣಪ್ಪಾ ಮಸರಕಲ್ ಇವರು ವಸತಿ ನಿಲಯದಲ್ಲಿ ಮುಸುರಿ ಪಾತ್ರೆ ತೊಳೆಯುವುದು