ಹೊರಗಿನ ಸೌಂದರ್ಯಕ್ಕಿಂತ ಒಳಗಿನ ಸೌಂದರ್ಯ ಮುಖ್ಯ : ಬಸವರಾಜ ಪಾಟೀಲ್ ಸೇಡಂ

ಜೇವರ್ಗಿ:ಸೆ.1: ಜಗತ್ತಿನಲ್ಲಿ ಸಾಧನೆ ಮಾಡಿದವರು ಯಾವತ್ತಿಗು ಕೂಡ ಹೊರಗಿನ ಸೌಂಧರ್ಯಕ್ಕೆ ಮಹತ್ವವನ್ನು ನೀಡಿಲ್ಲ. ಅವರು ಒಳಗಿನ ಸಂಧರ್ಯಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದರಿಂದ ಇಂದು ಜಗತ್ತಿನಲ್ಲಿ ಅವರನ್ನ ಪ್ರತಿಯೋಬ್ಬರು ಗುರುತಿಸುತ್ತಾರೆ ಎಂದು ಶ್ರೀ ಕೊತ್ತಲು ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ ಸಂರಕ್ಷಕರಾದ ಶ್ರೀ ಬಸವರಾಜ ಪಾಟೀಲ್ ಸೇಡಂ ಅಭಿಮತಪಟ್ಟರು.

ಪಟ್ಟಣದ ಶ್ರೀ ನೂರಂದೇಶ್ವರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಂಗಳವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷ್ಯತ್ತು ತಾಲೂಕ ಘಟಕದ ವತಿಯಿಂದ ವಚನ ದಿನಾಚರಣೆ ಹಾಗೂ ಜಗ್ದುರು ಶ್ರೀ ಶೀವರಾತ್ರಿ ರಾಜೇಂದ್ರ ಮಾಹಾಸ್ವಮೀಜಿಯವರ ಜನ್ಮ ದಿನದ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಬಸವರಾಜ ಪಾಟೀಲ್ ಸೇಡಂ ಮಾತನಾಡಿ 6 ನೇ ಶತಮಾನದಲ್ಲಿ ಬಸವಣ್ಣನವರು, ಅಲ್ಲಮಪ್ರಭು, ಅಕ್ಕಮಹಾದೇವಿ ಸೇರಿದಂತೆ ಅನೇಕ ವಚನಕಾರರು ವಚನಗಳನ್ನ ರಚ್ಚಿಸಿ ವಚನಕ್ರಾಂತಿ ಮಾಡಿದರು. ಸುಮಾರು 800 ವರ್ಷಗಳ ಇತಿಹಾಸವನ್ನು ವಚನ ಸಾಹಿತ್ಯ ಹೋದಿದೆ. 25 ಸಾವಿರ ವಚನಗಳು ದೋರಕಿವೆ. ಫ. ಗು. ಹಳಕಟ್ಟಿ ಯವರಿಂದ ವಚನಗಳಿಗೆ ಮರು ಜನ್ಮ ಸಿಕ್ಕಿದೆ. ಫ. ಗು. ಹಳಕಟ್ಟಿ ಯವರು ತಮ್ಮ ಜೀವನದ ಆಸೆಗಳನ್ನ ಮರೆತು ವಚನಗಳ ರಕ್ಷಣೆ ಮಾಡಿದ್ದಾರೆ. ಇವರು ವಚನಗಳನ್ನ ರಕ್ಷಿಸಿದ ಕಾರಣಕ್ಕೆ ನಾವೆಲ್ಲರು ಇಂದು ವಚನಗಳನ್ನ ಕೆಳುತ್ತಿದ್ದೆವೆ ಮಾತ್ತು ಹೆಳುತ್ತಿದ್ದೆವೆ.

ಜಗ್ದುರು ಶ್ರೀ ಶೀವರಾತ್ರಿ ರಾಜೇಂದ್ರ ಮಾಹಾಸ್ವಮೀಜಿಯವರು 1986 ರಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು. ಶರಣರ ಆದರ್ಶಗಳನ್ನ ಮತ್ತು ಆಚರಣೆಗಳನ್ನ ಪ್ರಪಂಚದಾದ್ಯಂತ ಹರಡುವ ದೃಷ್ಟಿಕೋನ ಹೋದಿದ್ದರು. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನ ನೀಡಿದರು. ಶರಣರ ಸಾಹಿತ್ಯದಿಂದ ಉತ್ತಮ ಜೀವನ ರುಪಿಸಿಕ್ಕೋಳಬೇಕು. ಜೀವನದಲ್ಲಿ ವಚನಗಳಿಂದ ಉತ್ತಮ ಉತ್ತಮ ನಡತೆಯನ್ನ ಪಡೆಯಬಹುದು ಎಂದರು.

ಈ ಸಂದರ್ಭದಲ್ಲಿ ರಾಜೇಶಖರ ಸೀರಿ, ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ, ಚನ್ನಮಲ್ಲಯ್ಯ ಹಿರೇಮಠ, ಡಾ. ಪಿ. ಎಂ. ಮಠ, ಎಂ. ಎಸ್. ಹಿರೇಮಠ, ಕಲ್ಯಾಣರಾವ ಸಂಗಾವಿ, ಚಂದ್ರಶೇಖರ ತುಂಬಗಿ, ಸಂತೋಷ ಹೂಗಾರ, ವೇಂಕಟರಾವ ಮುಜುಂದಾರ, ನಿಂಬಣ್ಣ ರುದ್ರಪ್ಪಗೋಳ, ಎಸ್. ಕೆ. ಬಿರಾದಾರ, ಶಾಂತಲಿಂಗಪ್ಪಗೌಡ ಪಾಟೀಲ್, ಸೋಮಶೇಖರಗೌಡ ಪಾಟೀಲ್, ಎಂ. ಎಸ್. ಹಿರೇಮಠ, ಶಿವರಾಜ ಅಂಡಗಿ, ಶ್ರೀಹರಿ ಕರಕಳ್ಳಿ, ಬಸಯ್ಯ ಸಾಲಿಮಠ, ಹಣಮಂತ್ರಾಯಗೌಡ ಬಿರಾದಾರ, ಬಿ. ಕೆ. ನಾಯಕ, ರಾಘು ಕುಲಕರ್ಣಿ ಉಪಸ್ಥಿತರಿದ್ಗದರು. ಎಸಿ ಹರವಾಳ ಸ್ವಾಗತಿಸಿದರು, ಡಾ. ಹಣಮಂತ್ರಾಯ ರಾಂಪೂರೆ ನಿರೂಪಿಸಿದರು.