ಹೊನ್ನ ಕಿರಣಗಿಯಲ್ಲಿ ಕೂಡಲೂರು ಬಸವಲಿಂಗೇಶ್ವರ ಜಾತ್ರೆ

ಫರತಾಬಾದ:ಮಾ.25: ತಾಲೂಕಿನ ಹೊನ್ನ ಕಿರಣಗಿ ಗ್ರಾಮದಲ್ಲಿ ಮಾರ್ಚ್ 26ರಂದು ರವಿವಾರ ಶ್ರೀ ಕೂಡಲೂರು ಬಸವಲಿಂಗೇಶ್ವರರ 41ನೇ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ವೀರಣ್ಣ ಮಲ್ಲೇಶಪ್ಪ ಯಳಸಂಗಿ ತಿಳಿಸಿದ್ದಾರೆ.
ದಿ.25ರಂದು ಮಧ್ಯಾಹ್ನ 2ಗಂಟೆಗೆ ಗ್ರಾಮದಲ್ಲಿ ಪಲ್ಲಕ್ಕಿಯ ಮೆರವಣಿಗೆ ಮತ್ತು ಪುರವಂತರ ಸೇವಾ, ರಾತ್ರಿ ಅಖಂಡ ಭಜನೆ ನಡೆಯೋದು, 26ರ ಬೆಳಿಗ್ಗೆ ಕೂಡಲೂರು ಬಸವಲಿಂಗೇಶ್ವರ ಕತೃ ಗದ್ದುಗೆಗೆ ರುದ್ರಾಭಿಷೇಕ ಮತ್ತು ಸಹಸ್ರ ಬಿಲ್ವಾರ್ಚನೆ ಆದನಂತರ ಮಹಾಪ್ರಸಾದ ವಿತರಣೆ ಮಾಡಲಾಗುವುದು. ಅಂದು ಸಾಯಂಕಾಲ 6ಗಂಟೆಗೆ ಅದ್ದೂರಿಯ ರಥೋತ್ಸವ ಬಹು ವಿಜೃಂಭಣೆಯಿಂದ ನಡೆಯುವುದು. ದಿ.27ರಂದು ಬೆಳಗ್ಗೆ 8ಗಂಟೆಗೆ ಹಾಗೂ ಮಧ್ಯಾಹ್ನ 3 ಗಂಟೆಯಿಂದ 6ಗಂಟೆಯವರೆಗೆ ಸುಪ್ರಸಿದ್ದ ಪೈಲ್ವಾನ್‍ರ ಜಂಗಿ ಕುಸ್ತಿಗಳು ನಡೆಯುತ್ತವೆ.
ಸಕಲ ಸದ್ಬಕ್ತರು ತನು ಮನ ಧನದಿಂದ ಈ ಕಾರ್ಯಕ್ರಮಕ್ಕೆ ಭಾಗವಹಿಸಿ ಪುನೀತರಾಗಬೇಕೆಂದು ಮನವಿ. ರಥೋತ್ಸವದ ರಾತ್ರಿ ಸುಪ್ರಸಿದ್ದ ಅಮೋಘಸಿದ್ದೇಶ್ವರ ಡೊಳ್ಳಿನ ಗಾಯನ ಸಂಘ ಸಾ.ಮನಗೂಳಿ, ಗಾಯಕರಾದ ಐಶ್ವರ್ಯ ಮನಗೂಳಿ, ಗುರುಲಿಂಗ ಮಾಸ್ತರ್, ಮುದಕಣ್ಣ ಮಾಸ್ತರ್, ಪರಶು ಮನಗೂಳಿ ಅವರಿಂದ ಜರುಗುತ್ತವೆ ಎಂದು ಯಳಸಂಗಿಯವರು ತಿಳಿಸಿದ್ದಾರೆ.