
ಬೀದರ, ಏ. 21: ಬೀದರ ತಾಲ್ಲೂಕಿನ ಹೊನ್ನಿಕೇರಿ ಅರಣ್ಯ ಪ್ರದೇಶದಲ್ಲಿ ಚಿರತೆ ಇರುವುದು ಕ್ಯಾಮರಾ ಟ್ರಾಪ್‍ನಲ್ಲಿ ಸೆರೆಯಾಗಿದ್ದು. ಈ ಅರಣ್ಯ ಪ್ರದೇಶದ ಅಕ್ಕಪಕ್ಕದ ಹಳ್ಳಿಯ ಜನರು ಎಚ್ಚರ ವಹಿಸಬೇಕು ಎಂದು ಬೀದರ ಉಪ ಅರಣ್ಯ ಸಂರಕ್ಷಾಣಾಧಿಕಾರಿ ವಾನತಿ ಎಂ.ಎಂ ತಿಳಿಸಿದ್ದಾರೆ
ಅವರು ಗುರುವಾರ ನಗರದ ಜಿಲ್ಲಾ ಅರಣ್ಯ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕೆಲವು ದಿನಗಳ ಹಿಂದೆಯೇ ಹೊನ್ನಿಕೇರಿ ಅರಣ್ಯ ಪ್ರದೇಶದ ಸುತ್ತಮುತ್ತಲಿನ ಜನರು ಇಲ್ಲಿ ಚರತೆ ಕಾಣಿಸಿಕೊಂಡಿದೆ ಎಂದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕ್ಯಾವiರ ಟ್ರಾಪ್‍ಗೆ ಮುಂದಾಗಿತ್ತು ಈಗ ಈ ಭಾಗದಲ್ಲಿ ಚಿರತೆ ಸಂಚರಿಸುತ್ತಿರುವುದ ಖಚಿತವಾಗಿದೆ ಎಂದರು.
ಈ ಪ್ರದೇಶದ ಜನರು ಆತಂಕ ಪಡುವ ಅಗತ್ಯ ಇಲ್ಲಾ ಈಗಾಗಲೇ ಅರಣ್ಯ ಇಲಾಖೆಯ ಸಿಬ್ಬಂದಿಗಳು ಇದರ ಪತ್ತೆಗೆ ಕಾರ್ಯಪ್ರವೃತ್ತರಾಗಿದ್ದಾರೆ. ಆದರೂ ಇಲ್ಲಿನ ಜನರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಅದರಲ್ಲು ಮುಖ್ಯವಾಗಿ ಬೇಸಿಗೆ ಕಾಲ ಇರುವುದರಿಂದ ರಾತ್ರಿ ಹೊತ್ತು ಗ್ರಾಮಿಣ ಭಾಗದ ಜನರು ಮನೆಯ ಅಂಗಳದಲ್ಲಿ ಮಲಗುವ ಅಭ್ಯಾಸವಿರುತ್ತದೆ ಆದರಿಂದ ಕೆಲವು ದಿನ ಇದನ್ನು ನಿಲ್ಲಿಸಬೇಕು, ಚಿಕ್ಕ ಮಕ್ಕಳಿಗೆ ಒಂಟಿಯಾಗಿ ಬಿಡಬಾರದು, ಹಾಗೂ ಎಲ್ಲರೂ ಮುಂಜಾಗೃತೆಯನ್ನು ವಹಿಸಬೇಕು ಎಂದು ತಿಳಿಸಿದರು.
ಕಳೆದ ವರ್ಷವು ಇಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ವರದಿಯಾಗಿತ್ತು. ಬಹುಶ: ಇದು ಅದೇ ಚಿರತೆಯಾಗಿರಬಹುದು ಎಂದು ಅನುಮಾನವಿದೆ. ಇದರ ವಯಸ್ಸು ಅಂದಾಜು 4-5 ವರ್ಷವಾಗಿದೆ. ಹಾಗೂ ಕೆಲವು ಪ್ರಾಣಿಗಳ ಮೇಲೆ ದಾಳಿ ಮಾಡಿದೆ ಎಂದು ಮಾಹಿತಿ ಬಂದಿದೆ ಎಂದು ಹೇಳಿದ ಅವರು ಈ ಚಿರತೆಯು ಯಾರಿಗಾದರು ಕಂಡು ಬಂದಲ್ಲಿ ಮಹೇಂದ್ರ ಆರ್.ಎಫ್.ಓ ಬೀದರ 9448038774 ಅಥವಾ ಅಶೋಕ ಡೆಪ್ಯೂಟಿ ರೇಂಜರ ಬೀದರ 9916387255 ಇವರನ್ನು ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಕೋರಿದ್ದಾರೆ.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂಧಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.