ಹೊನ್ನಾಳಿ: ಸಾಮೂಹಿಕ ಸತ್ಯನಾರಾಯಣ ಪೂಜೆ 

ಹೊನ್ನಾಳಿ.ಜ.೧೬:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೊಜನೆ ಬಿ ಸಿ‌ ಟ್ರಸ್ಟ್ (ರಿ) ಹೊನ್ನಾಳಿ , ಸಾಮೂಹಿಕ ಸತ್ಯನಾರಾಯಣ ಪೂಜಾ ವ್ಯವಸ್ಥಾಪನಾ ಸಮಿತಿ ಗೊವಿನಕೋವಿ ವಲಯ ಇವರ ಸಹಯೋಗದಲ್ಲಿ ತಾಲೂಕಿನ ಮರಿಗೊಂಡನಹಳ್ಳಿಯ ಫ್ರೌಢಶಾಲಾ ಆವರಣದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಆಯೊಜಿಸಲಾಯಿತು. ದಿವ್ಯಸಾನಿಧ್ಯ ವಹಿಸಿದ ಶ್ರೀ. ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮಿಜಿಗಳು ವಹಿಸಿ ಜ್ಯೋತಿ ಪ್ರಜ್ವಲಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೊಜನೆ ಮೂಲಕ ಗ್ರಾಮಗಳ ಅಭಿವೃದ್ಧಿ ಆಗುತ್ತಿದ್ದು ಮಹಿಳೆಯರ ಸಬಲಿಕರಣದೊಂದಿಗೆ ಜನರ ಆರ್ಥಿಕ ಬದುಕು ಹಸನು ಮಾಡುವಲ್ಲಿ  ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅನೆಕ ಯೊಜನೆ ರೂಪಿಸಿ ಅಭಿವೃದ್ಧಿ ಪಡಿಸಿದ್ದು ಜನರಲ್ಲಿ ಧಾರ್ಮಿಕ ಭಾವನೆಯೊಂದಿಗೆ ಶಾಂತಿಯುತ ಸಮಾಜ ನಿರ್ಮಿಸಲು ಇಂತಹ ಧಾರ್ಮಿಕ ಕಾರ್ಯಕ್ರಮ ಉಪಯುಕ್ತ ಎಂದು ಆಶಿರ್ವಚನ ನಿಡಿದರು. ತಾಲೂಕಿನ ಶಾಸಕಾರಾದ  . ಪಿ ರೆಣುಕಾಚಾರ್ಯ  ಕಾರ್ಯಕ್ರವನ್ನು ಅಡಿಕೆ ಸಿರಿ ಅರಳಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ‌ ಮಾತನಾಡುತ್ತ ಧರ್ಮಸ್ಥಳ ಗ್ರಾಮಾಭಿವೃದ್ಧಿಯು ದೇಶಕ್ಕೆ ಮಾದರಿ, ಸರಕಾರಕ್ಕಿಂತಲೂ ಹೆಚ್ಚಿನ ಅಭಿವೃದ್ಧಿ ಚಟುವಟಿಕೆಗಳನ್ನು ಮಾಡುತ್ತಿದ್ದು, ಜನರಲ್ಲಿ ಆರ್ಥಿಕ , ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಶಿಸ್ತನ್ನು ಮೂಡಿಸುತ್ತಿದೆ ಎಂದರು.ಸಭೆಯಲ್ಲಿ ಉದ್ಯಮಿಗಳಾದ ಡಿ ಎಸ್ ಸೂರೇಂದ್ರೆ, ಜಿ, ಜ, ಜಾ, ವೇದಿಕೆ ನಿಕಟರ್ಪರ್ವ ಅಧ್ಯಕ್ಷರಾದ ಸುರೆಶ್ ಹೊಸ್ಕೆರಿ, ಬಿ ಎಲ್ ಕುಮಾರಸ್ವಾಮಿ, ಗ್ರಾಮ ಪಂಚಾಯತ್ ಸದಸ್ಯರಾದ ಪರಮೇಶ್ವರಪ್ಪ, ಫ್ರೌಡಶಾಲಾ  ಮುಖ್ಯೋಪಾಧ್ಯಾಯರಾದ   ಮಂಜುನಾಥ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ  ರುದ್ರೇಶ್ , ದಯಾನಂದ ಉಪಸ್ಥಿತರಿದ್ದರು. ವಲಯ ಮೆಲ್ವಿಚಾರಕ ವಸಂತ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು, ಸೇವಾಪ್ರತಿನಿಧಿ ಶ್ರೀ ಮತಿ ಆರತಿ ವಂದಿಸಿದರು. ಪೂಜೆಯಲ್ಲಿ 51 ಜೋಡಿ ವೃತಾಧಾರಿಗಳು 700 ಜನ ಸದಸ್ಯರು , ವಲಯದ ಸೇವಾಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು.