ಹೊನ್ನಾಳಿ ಮಂಡಲದ ಕಾರ್ಯಕಾರಣಿ ಸಭೆ

ಹೊನ್ನಾಳಿ.ಮಾ.೩೦ : ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಬಿಜೆಪಿ ಸಂಘಟನೆ ಪ್ರಭಲವಾಗಿದ್ದು ಮುಂಬವರು ಜಿಲ್ಲಾಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಕಾರ್ಯಕರ್ತರು ಸಜ್ಜಾಗುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ,ರೇಣುಕಾಚಾರ್ಯ ಕಾರ್ಯಕರ್ತರಿಗೆ ಕರೆ ನೀಡಿದರು.ತಾಲೂಕಿನ ರಾಂಪುರ ಗ್ರಾಮದ ಹಾಲಸ್ವಾಮೀ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಹೊನ್ನಾಳಿ ಮಂಡಲದ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಕೇಂದ್ರ ಹಾಗೂ ರಾಜ್ಯದಲ್ಲಿ ಸಂಘಟನೆಗೆ ಹೆಚ್ಚಿನ ಒತ್ತು ನೀಡುವ ಏಕೈಕ ಪಕ್ಷ ಎಂದರೇ ಅದು ಬಿಜೆಪಿ ಮಾತ್ರ. ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಲ್ಲಿ ಬಿಜೆಪಿ ಸಂಘಟನೆ ಪ್ರಭಲವಾಗಿರುವ ಕಾರಣ ಅವಳಿ ತಾಲೂಕಿನಲ್ಲಿ 30 ಕ್ಕೂ ಹೆಚ್ಚು ಗ್ರಾಮಪಂಚಾಯಿತಿಗಳ ಅಧಿಕಾರವನ್ನು ನಾವು ಹಿಡಿಯಲು ಸಾಧ್ಯವಾಯಿತು ಎಂದರು. ಕಾಂಗ್ರೇಸ್‌ನವರ ದುರಾಡಳಿತದಿಂದ ಬೇಸತ್ತು ಜನರು ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೇಸ್ ಅನ್ನು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಿಸಿದ್ದಾರೆಂದ ಶಾಸಕರು, ನಮಗೆ ಸಂಘಟನೆಯೇ ನಮ್ಮ ಬಲ ಎಂದರು. ನಮ್ಮಲ್ಲಿ ಸಂಘಟನೆ ಪ್ರಭಲವಾಗಿರುವ ಕಾರಣ ನಾನು ಮೂರು ಬಾರೀ ಶಾಸಕನಾಗಿ ಆಯ್ಕೆಯಾಗಿದ್ದೇನೆ ಎಂದರು.ನಮ್ಮಲ್ಲಿ ಕೆಲ ಸಣ್ಣಪುಟ್ಟಣ ವಿಚಾರಗಳಿಗೆ ಬಿನ್ನಾಭಿಪ್ರಾಯಗಳಿದ್ದು ಅವುಗಳನ್ನೇಲ್ಲಾ ಮರೆತು ಕಾರ್ಯಕರ್ತರು ಮುಖಂಡರು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡಿದ ಅಭಿವೃದ್ದಿ ಕೆಲಸಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಮುಂಬರುವ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಚುನಾವಣೆಗೆ ಸಜ್ಜಾಗುವಂತೆ ಕರೆ ನೀಡಿದರು.ಜಿಲ್ಲಾಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳನ್ನು ನಮ್ಮ ಸಂಘಟನೆ ಸವಾಲಾಗಿ ಸ್ವೀಕರಿಸು ಮೂಲಕ ಹೆಚ್ಚು ಸ್ಥಾನಗಳನ್ನು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಕರೆ ನೀಡಿದರು.ಕಾಂಗ್ರೇಸ್‌ನವರು ಕೋವಿಡ್ ಸಂದರ್ಭದಲ್ಲಿ ಮನೆಯಲ್ಲೇ ಕುಳಿತಿದ್ದರು. ಆದರೇ ನಮ್ಮ ಕಾರ್ಯಕರ್ತರು ಕೋವಿಡ್ ಸಂದರ್ಭದಲ್ಲೂ ಮನೆಯಲ್ಲಿ ಕೂರದೇ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು ಎಂದರು.ಕೋವಿಡ್ ಸಂದರ್ಭದಲ್ಲಿ ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಪ್ರತಿಯೊಂದು ಗ್ರಾಮಕ್ಕೂ ಕಲ್ಪಿಸಿಕೊಡುವ ಕೆಲಸ ಮಾಡುವ ಮೂಲಕ ಅವಳಿ ತಾಲೂಕುಗಳನ್ನು ಅಭಿವೃದ್ದಿ ಮಾಡಿದ್ದೇನೆ ಎಂದರು.ದಿನೇ ದಿನೇ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು ಜನರ ಜಾಗೃತರಾಗಿರ ಬೇಕೆಂದ ಶಾಸಕರು ನಮ್ಮ ಕಾರ್ಯಕರ್ತರು 60 ವರ್ಷ ಮೇಲ್ಪಟ್ಟವರ ಪಟ್ಟಿ ಮಾಡಿ ಅಂತಹವರಿಗೆ ಕೋವಿಡ್ ಲಸಿಕೆ ಕೊಡಿಸುವಂತೆ ತಿಳಿಸಿದರು.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್ ಲಸಿಕೆಗಳನ್ನು ಉಚಿತವಾಗಿ ನೀಡುತ್ತಿದ್ದು ಕಾರ್ಯಕರ್ತರು ಜನರಿಗೆ ಇದರ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಕೋವಿಡ್ ಲಸಿಕೆ ಕೊಡಿಸುವ ಕೆಲಸ ಮಾಡ ಬೇಕೆಂದು ಕರೆ ನೀಡಿದರು.ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಗಿ ವೀರೇಶ್, ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್, ಶಾಂತರಾಜ್ ಪಾಟೇಲ್ ಬಲಮುರಿ, ಕಾರ್ಯದರ್ಶಿ ಅರಕೆರೆ ನಾಗರಾಜ್, ಜಗದೀಶ್,ನೆಲವೊನ್ನೆ ಮಂಜುನಾಥ್, ಶಿವಾನಂದ್ ಸೇರಿದಂತೆ ಮತ್ತೀತರರಿದ್ದರು.