ಹೊನ್ನಾಳಿ ತಾಲ್ಲೂಕಿನಲ್ಲಿ 31 ಅಭ್ಯರ್ಥಿಗಳು ಅವಿರೋಧ ಆಯ್ಕೆ

ಹೊನ್ನಾಳಿ.ಜ.೧; ತಾಲೂಕಿನ 28 ಗ್ರಾಮ ಪಂಚಾಯಿತಿಗಳಿಗೆ ಡಿ.22ರಂದು ಚುನಾವಣೆ ನಡೆದಿತ್ತು. ಮತ ಎಣಿಕೆ ಕಾರ್ಯ ಡಿ.30ರಂದು ಬುಧವಾರ ಶಾಂತಿಯುತವಾಗಿ ನೆರವೇರಿತು. ಅದಕ್ಕಾಗಿ ಶ್ರಮಿಸಿದ ಚುನಾವಣಾ ಸಿಬ್ಬಂದಿ, ಕಂದಾಯ ಇಲಾಖೆಯ ಸಿಬ್ಬಂದಿ, ಪೊಲೀಸ್ ಇಲಾಖೆ, ಹೊನ್ನಾಳಿ ಪುರಸಭಾ ಅಧಿಕಾರಿಗಳು-ಸಿಬ್ಬಂದಿಗೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಸಿಬ್ಬಂದಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಹಸೀಲ್ದಾರ್ ತುಷಾರ್ ಬಿ. ಹೊಸೂರ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ಅವರು, 28 ಗ್ರಾಪಂಗಳ ಪೈಕಿ 110 ಕ್ಷೇತ್ರಗಳ 323 ಸ್ಥಾನಗಳಿಗೆ 811 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅವುಗಳ ಪೈಕಿ 31 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 292 ಅಭ್ಯರ್ಥಿಗಳ ಫಲಿತಾಂಶ ಬುಧವಾರ ತಡರಾತ್ರಿ ಲಭ್ಯವಾಯಿತು ಎಂದು ತಿಳಿಸಿದರು.ತಾಲೂಕಿನಲ್ಲಿ 259 ಅಂಚೆ ಮತಪತ್ರ ಇದ್ದು, ಅವುಗಳ ಪೈಕಿ 198 ಸ್ವೀಕೃತವಾಗಿದ್ದವು. ವಿವಿಧ ಕಾರಣಗಳಿಂದಾಗಿ 23 ತಿರಸ್ಕೃತವಾಗಿವೆ. 175 ಮತಪತ್ರಗಳು ಅಂಗೀಕೃತವಾಗಿವೆ ಎಂದು ಮಾಹಿತಿ ನೀಡಿದರು.