ಹೊನ್ನಾಳಿ ತಾಲೂಕು ಆಸ್ಪತ್ರೆಯಲ್ಲಿರುವಷ್ಟು ಆಮ್ಲಜನಕ ಸಾಂದ್ರಕಗಳು ಯಾವ ಜಿಲ್ಲಾಸ್ಪತ್ರೆಗಳಲ್ಲೂ ಇಲ್ಲಾ

ಹೊನ್ನಾಳಿ.ಜೂ.೧ : ಹೊನ್ನಾಳಿ ತಾಲೂಕು ಆಸ್ಪತ್ರೆಯಲ್ಲಿರುವಷ್ಟು ಆಮ್ಲಜನಕ ಸಾಂದ್ರಕಗಳು ಯಾವ ಜಿಲ್ಲಾಸ್ಪತ್ರೆಗಳಲ್ಲೂ ಇಲ್ಲಾ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ತಾಲೂಕು ಆಸ್ಪತ್ರೆಯ ಕೊರೊನಾ ಸೋಂಕಿತರ ವಾರ್ಡಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಹೊನ್ನಾಳಿ ತಾಲೂಕು ಆಸ್ಪತ್ರೆಯಲ್ಲಿ 70 ಆಮ್ಲಜನಕ ಸಾಂಧ್ರಕಗಳಿದ್ದು, ಇನ್ನು ಹತ್ತು ಆಮ್ಲಜನಕ ಸಾಂದ್ರಕಗಳು ಸದ್ಯದರಲ್ಲೇ ಬರಲಿವೆ ಎಂದ ಶಾಸಕರು ಜಿಲ್ಲಾಸ್ಪತ್ರೆಗಿಂತಲೂ ಹೆಚ್ಚಿನ ಆಮ್ಲಜನಕ ಸಾಂಧ್ರಕಗಳು ಹೊನ್ನಾಳಿ ತಾಲೂಕು ಆಸ್ಪತ್ರೆಯಲ್ಲಿವೆ ಎಂದರು.ತಾಲೂಕು ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಾಗದಂತೆ ಒಂದು ಕೋಟಿ ವೆಚ್ಚದಲ್ಲಿ ಆಸ್ಪತ್ರೆಯ ಆವರಣದಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸುತ್ತಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದ ಶಾಸಕರು, ಅವಳಿ ತಾಲೂಕಿನ ಸೋಂಕಿತರಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ ಎಂದರು.ಧರ್ಮಸ್ಥಳ ಸಂಘದಿಂದ ಎರಡು ಕಾನ್ಸಂಟೇಟರ್ ಅಸ್ಥಾಂತರ : ಧರ್ಮಸ್ಥಳ ಗ್ರಾಮಭಿವೃದ್ದಿ ಸಂಸ್ಥೆ ಎರಡು ಆಮ್ಲಜನಕ ಸಾಂಧ್ರಕಗಳನ್ನು ಸರ್ಕಾರಿ ಆಸ್ಪತ್ರೆ ನೀಡಿದ್ದು, ಶಾಸಕರ ಮೂಲಕ ಅವನ್ನು ಆಸ್ಪತ್ರೆಗೆ ಹಸ್ತಾಂತರಿಸಲಾಯಿತು. ಇದೇ ವೇಳೆ ಮಾತನಾಡಿದ ಶಾಸಕರು ಧರ್ಮಸ್ಥಳದ ಧರ್ಮಾಧಿಕಾರಿ ವಿರೇದ್ರಹೆಗ್ಡೆಯವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದ ಶಾಸಕರು ವಿರೇಂದ್ರ ಹೆಗ್ಡೆ ಅವರಿಗೆ ಧನ್ಯವಾದ ಅರ್ಪಿಸಿದರು. ಧರ್ಮಾಧಿಕಾರಿಗಳು ನಿರುದ್ಯೋಗ ನಿರ್ಮೂಲನೆ, ಆರ್ಥಿಕ ಸ್ವಾವಲಂಬನೆ ಸೇರಿದಂತೆ ಆರೋಗ್ಯ ಕರ ಸಮಾಜಕ್ಕೆ ನಿರ್ಮಾಣಕ್ಕೆ ತಮ್ಮದೇ ಆದ ಕೊಡಿಗೆಗಳನ್ನು ನೀಡುತ್ತಾ ಬಂದಿದ್ದು ಅವರ ಸೇವೆ ನಿಜಕ್ಕೂ ಶ್ಲಾಘನೀಯ ಎಂದರು.
ಈ ಸಂದರ್ಭ ಪುರಸಭಾಧ್ಯಕ್ಷ ಕೆ.ವಿ.ಶ್ರೀಧರ್, ಸದಸ್ಯ ರಂಗಪ್ಪ, ಧರ್ಮಸ್ಥಳ ಸಂಘದ ಜಿಲ್ಲಾನಿರ್ದೇಶಕ ಜಯಂತ್ ಪೂಜಾರಿ, ತಾಲೂಕು ಅಧಿಕಾರಿ ಬಸವರಾಜ್ ಅಂಗಡಿ, ಡಾ. ಹನುಮಂತಪ್ಪ, ಮುಖಂಡರಾದ ಇಂಚರಮಂಜುನಾಥ್, ಮಹೇಶ್ ಹುಡೇಡ್ ಸೇರಿದಂತೆ ಮತ್ತೀತತರಿದ್ದರು.