ಹೊನ್ನಾಳಿ ತಾಲೂಕಿನ ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಸೇರ್ಪಡೆ

ಸಂಜೆವಾಣಿ ವಾರ್ತೆದಾವಣಗೆರೆ.ಏ.೨೦: ಹೊನ್ನಾಳಿ ತಾಲೂಕಿನ ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ಪಕ್ಷ ತೊರೆದು ಸಂಸದ ಜಿ.ಎಂ.ಸಿದ್ಧೇಶ್ವರ್ ಅಧ್ಯಕ್ಷತೆಯಲ್ಲಿ ಬಿಜೆಪಿ ಸೇರ್ಪಡೆಗೊಂಡರು. ಕೆಂಗಲಹಳ್ಳಿಯ ಜಿ.ಎಂ.ಬಸವಲಿಂಗಪ್ಪ, ಜಿ.ಸಿ.ಬಸವರಾಜ್, ಕೆ.ಎಂ.ಪಂಚಯ್ಯ, ಮುಕ್ತೇನಹಳ್ಳಿಯ ಮಂಜುನಾಥ್ ಪಾಟೀಲ್, ಎಂ.ಎಂ.ಮಹಿಮಾ, ತಿಮ್ಮೇನಹಳ್ಳಿಯ ವೈ.ಜಿ.ತಿಪ್ಪಣ್ಣ ಶುಕ್ರವಾರ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು. ಸಂಸದ ಜಿ.ಎಂ.ಸಿದ್ದೇಶ್ವರ್, ಜಿಲ್ಲಾಧ್ಯಕ್ಷ ಎನ್.ರಾಜಶೇಖರ್ ಮತ್ತಿತರರು ಇದ್ದರು.