ಹೊನ್ನಾಳಿ: ಕಾರ್ಗಿಲ್ ವಿಜಯ ದಿವಸ್ ಆಚರಣೆ

ಹೊನ್ನಾಳಿ.ಜು. 26; 23ನೇ ವರ್ಷದ ಕಾರ್ಗಿಲ್ ವಿಜಯ ದಿವಸ್ ಆಚರಣೆಯನ್ನು ಹೊನ್ನಾಳಿ ಪಟ್ಟಣದ ದುರ್ಗಿಗುಡಿ 11ನೇ ತಿರುವಿನಲ್ಲಿ ಇರುವ ಯೋಧನ ಮೂರ್ತಿಯ ಬಳಿ ಪುರಸಭೆ ಸದಸ್ಯ ಹೊಸಕೇರಿ ಸುರೇಶ್ ಹಾಗೂ ಜನಜಾಗೃತಿ ನಿಕಟಪೂರ್ವ ಅಧ್ಯಕ್ಷರು ಮಾಲಾರ್ಪಣೆ ಮಾಡುವ ಮೂಲಕ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು. ದೇಶ ಭಕ್ತಿ ಗೀತೆಯನ್ನು ಹಾಡುವ ಮೂಲಕ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಹೊನ್ನಾಳಿ  ತಾಲೂಕಿನ ಮಾಜಿ ಸೈನಿಕರ  ಕ್ಷೇಮಾಭಿವೃದ್ಧಿ  ಸಂಘದ ಅಧ್ಯಕ್ಷ ಮಾಜಿ ಸೈನಿಕರಾದ ವಾಸಪ್ಪ ಹಾಗೂ ಪರಮೇಶ್ವರಪ್ಪ ಹಾಗೂ ಶಾಂತ ಸುರೇಶ್, ವಿದ್ಯಾ  ಸಂತೋಷ್, ಬಿ ಎಲ್ ಕುಮಾರಸ್ವಾಮಿ,  ಕತ್ತಿಗೆ ನಾಗರಾಜ್, ಕಸಬಾ ಸದಸ್ಯರು ಹಾಗೂ ವಿದ್ಯಾರ್ಥಿಗಳು  ಮಕ್ಕಳು ಸಾರ್ವಜನಿಕರು ಭಾಗವಹಿಸಿದ್ದರು.

Attachments area