ಹೊನ್ನಾಳಿಯಲ್ಲಿ ಸ್ಯಾನಿಟೈಸ್ ಕೈಗೊಂಡ ಶಾಸಕ ಎಂಪಿಆರ್

ದಾವಣಗೆರೆ.ಮೇ.೨೯; ನಗರದ ಖಾಸಗೀ‌ ಬಸ್‌ ನಿಲ್ದಾಣ ಸೇರಿದಂತೆ, ಪ್ರಮುಖ ರಸ್ತೆಗಳಲ್ಲಿ ಇಂದು ಬೆಳಂಬೆಳಗ್ಗೆ ಶಾಸಕ ಎಂ.ಪಿ ರೇಣುಕಾಚಾರ್ಯ ಪೈಪ್ ಹಿಡಿದು ಸ್ಯಾನಿಟೈಸ್ ಮಾಡಿದ್ದಾರೆ.ಪ್ರತಿನಿತ್ಯ ಕ್ಷೇತ್ರದಲ್ಲಿ ಒಂದಲ್ಲಾ ಒಂದು ರೀತಿ ಜನ ಸೇವೆ ಮಾಡುತ್ತಿದ್ದಾರೆ.ಕೊವಿಡ್ ವಾರ್ಡ್ ಭೇಟಿ,ಉಪಹಾರ ವಿತರಣೆ,ಲಸಿಕೆ ಕೇಂದ್ರ ಭೇಟಿ ಹೀಗೆ ಹೊನ್ನಾಳಿಯ ತಮ್ಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇಂದು ಬೆಳಗ್ಗೆಯೂ ಕೂಡತಾವೇ  ಫೈರ್ ಎಂಜಿನ್ ಚಲಾಯಿಸಿ ನಂತರ ಪಟ್ಟಣದೆಲ್ಲೆಡೆ ಪೈಪ್ ಹಿಡಿದು ಸ್ಯಾನಿಟೈಸ್ ಮಾಡಿದ್ದಾರೆ.ಶಾಸಕ ರೇಣುಕಾಚಾರ್ಯರಿಗೆ ಪುರಸಭೆ ಸದಸ್ಯರು, ಅಧ್ಯಕ್ಷರು, ಅಗ್ನಿಶಾಮಕ ದಳದ ಸಿಬ್ಬಂದಿ ಸಾಥ್ ನೀಡಿದ್ದಾರೆ.