ಹೊನ್ನಾಳಿಯಲ್ಲಿ ಸಿಟಿ ಸ್ಕ್ಯಾನ್ ಸೆಂಟರ್ ಪ್ರಾರಂಭ

ಹೊನ್ನಾಳಿ.ಜೂ.೮;  ಶೀಘ್ರದಲ್ಲೇ ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ ಸಿಟಿ ಸ್ಕ್ಯಾನ್ ಸೆಂಟರ್ ಪ್ರಾರಂಭಿಸಲಾಗುವುದು ಎಂದು ಸಿಎಂ.ರಾಜಕೀಯ ಕಾರ್ಯದರ್ಶಿ, ಪ ಎಂಪಿ.ರೇಣುಕಾಚಾರ್ಯ ಹೇಳಿದರು.ತಾಲೂಕಿನ ಅರಬಗಟ್ಟೆ ವಸತಿ ಕೇಂದ್ರದಲ್ಲಿರುವ ಕರೋನಾ ಆರೈಕೆ ಕೇಂದ್ರದಲ್ಲಿ ಸೋಂಕಿತರಿಗೆ ಯೋಗಾ ಕಲಿಸಿ ಹಾಗೂ ಉಪಹಾರ ನೀಡಿ ಸುದ್ಧಿಗಾರರೊಂದಿಗೆ ಮಾತನಾಡಿದರು.ಸಿಟಿ ಸ್ಜಾö್ಯನ್ ಸೆಂಟರ್ ಪ್ರಾರಂಭಿಸುವ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿ ಲತಾಕುಮಾರಿ ಜೊತೆ ಚರ್ಚಿಸಿದ್ದೇನೆ,ಶೀಘ್ರ ಸಿಟಿ ಸ್ಜಾö್ಯನ್ ಸೆಂಟರ್‌ಗೆ 1.50 ಕೋಟಿ ಹಣ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.ಸಿಟಿ ಸ್ಜಾö್ಯನ್ ಸೆಂಟರ್‌ನ್ನು ಕೇವಲ ಜಿಲ್ಲಾ ಆಸ್ಪತ್ರೆಗಳಿಗೆ ಮಾತ್ರ ಕೊಡುತ್ತಾರೆ,ನಮ್ಮ ಜಿಲ್ಲಾ ಆಸ್ಪತ್ರೆಯಲ್ಲಿ ಮಾತ್ರ ಇತ್ತು ಇದರಿಂದ ನಮ್ಮ ಅವಳೀ ತಾಲೂಕಿನ ಬಡ ಜನತೆ ಶಿವಮೊಗ್ಗ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ನೀಡಿ ಸಿಟಿ ಸ್ಜಾö್ಯನ್ ಮಾಡಿಸಿಕೊಂಡು ಬರುತ್ತಿದ್ದರು, ಈಗ ಸಿಟಿ ಸ್ಜಾö್ಯನ್ ಸೆಂಟರ್‌ನ್ನು ಹೊನ್ನಾಳಿಯಲ್ಲೇ ಪ್ರಾರಂಭಿಸಿದರೆ ಬಡವರಿಗೆ ನುಕೂಲವಾಗಲಿದೆ ಹಾಗೂ ಸಿಟಿ ಸ್ಜಾö್ಯನ್ ಸೆಂಟರ್ ಹೊನ್ನಾಳಿಯಲ್ಲೇ ಪ್ರಾರಂಭ ಆದರೆ ಎಲ್ಲಾ ರೋಗಗಳ ಪತ್ತೆ ಹಾಗೂ ಬಹುಮುಖ್ಯವಾಗಿ ಕರೋನಾ ಸೋಂಕುವಿನ ಪತ್ತೆ ಅಧಿಕೃತವಾಗಿ ಪತ್ತೆಯಾಗಲಿದೆ,ಇದರಿಂದ ಕರೋನಾ ಸೋಂಕಿತರಿಗೂ ಸೂಕ್ತ ಚಿಕಿತ್ಸೆ ನೀಡಲಿಕ್ಕೆ ಅನುಕೂಲವಾಗಲಿದೆ, ಅವಳಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವುದಕ್ಕೆ 495 ಕೋಟಿ ಅನುದಾನಕ್ಕೆ ಡಿಪಿಆರ್ ಆಗಿದೆ ಶೀಘ್ರವೇ ಸಚಿವ ಸಂಪುಟಕ್ಕೆ ಬರಲಿದೆ ನಂತರ ಟೆಂಡರ್ ಕರೆಯಲಾಗುವುದು,ಹೊನ್ನಾಳಿ ನಗರದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ 20 ಕೋಟಿ ಹಾಗೂ ಯುಜಿಡಿ ಕಾಮಗಾರಿಗೆ 60 ಕೋಟಿಗೆ ಮಂಜೂರಾತಿ ದೊರೆತಿದ್ದು,ಶೀಘ್ರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.ಈ ವೇಳೆ ಹೊನ್ನಾಳಿ ನಗರದ ಗಿರೀಶ್,ಹರೀಶ್,ಜಗದೀಶ್ ಹಾಗೂ ನಂದೀಶ್ ಗೆಳೆಯರ ಬಳಗದಿಂದ ಸೋಂಕಿತರಿಗೆ ಪ್ರತಿಯೊಬ್ಬರಿಗೂ ಒಂದು ಕೇಜಿ ಹಣ್ಣನ್ನು ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಮೂಲಕ ಕೊಡಿಸಿದರು.
ಸುಮಾ ರೇಣುಕಾಚಾರ್ಯ, ಗಿರೀಶ್,ಹರೀಶ್,ಜಗದೀಶ್ ಹಾಗೂ ನಂದೀಶ್ ಇದ್ದರು.