ಹೊನ್ನಾಳಿಯಲ್ಲಿ ದೀಪಾವಳಿ ಸಡಗರ


ಹೊನ್ನಾಳಿ.ನ.೧೭; ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ಪಟ್ಟಣದ ವಿವಿಧೆಡೆ ಹಾಗೂ ತಾಲೂಕಿನ ಅನೇಕ ಗ್ರಾಮಗಳಲ್ಲಿ ಸಂಪತ್ತಿನ ಅಧಿದೇವತೆ ಲಕ್ಷ್ಮೀ ಪೂಜೆ ನೆರವೇರಿಸಲಾಯಿತು. ದೀಪಾವಳಿ ಹಬ್ಬದ ವೇಳೆ ಪ್ರಸಕ್ತ ಸಾಲಿನಲ್ಲಿ ಎರಡು ದಿನಗಳ ಕಾಲ ಅಮಾವಾಸ್ಯೆ ಬಂದಿದ್ದು, ಸಾಮಾನ್ಯವಾಗಿ ಪಟ್ಟಣದ ಹಿರೇಕಲ್ಮಠದಲ್ಲಿ ಎರಡನೇ ದಿನ ಅಮಾವಾಸ್ಯೆ ಆಚರಿಸಲಾಗುತ್ತದೆ. ಭಕ್ತರೂ ಹಿರೇಕಲ್ಮಠದ ಪದ್ಧತಿಯನ್ನೇ ಅನುಸರಿಸುತ್ತಾರಾದ ಕಾರಣ ಲಕ್ಷ್ಮೀ ಪೂಜೆ ನೆರವೇರಿಸಿದರು. ಮೆಕ್ಕೆಜೋಳ, ಭತ್ತದ ವರ್ತಕ ಬೆನಕನಹಳ್ಳಿ ಟಿ.ಜಿ. ಮಲ್ಲೇಶಪ್ಪ ಅವರ ಹೊನ್ನಾಳಿಯ ಎಪಿಎಂಸಿ ಪ್ರಾಂಗಣದ ಗೋಡೌನ್‌ನಲ್ಲಿ ಲಕ್ಷ್ಮೀ ಪೂಜೆ ನೆರವೇರಿಸಲಾಯಿತು. ವರ್ತಕ ಟಿ.ಜಿ. ಮಲ್ಲೇಶಪ್ಪ, ರೇಷ್ಮಾ, ಎಪಿಎಂಸಿ ಪ್ರಾಂಗಣದಲ್ಲಿನ ಹಮಾಲರು ಪೂಜೆಯಲ್ಲಿ ಪಾಲ್ಗೊಂಡರು.