ಹೊನ್ನಾಳಿಯಲ್ಲಿ ಜನ ಸಂಚಾರ ಸಂಪೂರ್ಣ ಸ್ಥಗಿತ

ಹೊನ್ನಾಳಿ.ಏ.೨೫; ಕೊವೀಡ್ 2ನೇ ಅಲೆ ನಿಯಂತ್ರಣಕ್ಕೆ ಸರಕಾರದ ಆದೇಶದಂತೆ    ಮಾರ್ಗ ಸೂಚಿಯಂತೆ ಹೊನ್ನಾಳಿ ತಾಲೂಕಿನಾದಂತ್ಯ ಉತ್ತಮ ಬೆಂಬಲ ವ್ಯಕ್ತವಾಗಿದೆ.ಸಂಗೋಳಿ ರಾಯಣ್ಣ ವೃತ್ತದಲ್ಲಿ  ಪಟ್ಟಣದ ಎಲ್ಲಾ ವೃತ್ತಗಳು ಜನರಿಲ್ಲದೆ ಬೀಕೋ ಎನ್ನುತ್ತಿದ್ದವು.ವ್ಯಾಪಾರಸ್ಥರು ಹೆಚ್ಚಾಗಿದ್ದು ಪಟ್ಟಣದಲ್ಲಿ ಕೋವಿಡ್ 2ನೇ ಅಲೆ ತೀವ್ರತೆ ಅರ್ಥೈಸಿರುವ ಮೊದಲ ವಾರಾಂತ್ಯದ ಕರ್ಪ್ಯೂಗೆ ತಮ್ಮ ವಾಣಿಜ್ಯ ವಹಿವಾಟು ಸಂಪೂರ್ಣ ಸ್ಥಗಿತ ಮಾಡಿ ಮನೆಯಿಂದ ಹೊರಬಾರದೆ ಸರಕಾರದ ಆದೇಶ ಪಾಲನೆಯನ್ನು ಯಶಸ್ವಿಗೊಳಿಸಿದ್ದಾರೆ.ಅವಶ್ಯಕತೆ ಇರುವ ಮೇಡಿಕಲ್ ಶಾಪ್, ಆಸ್ಪತ್ರೆ ಬಿಟ್ಟು ಬಟ್ಟೆ ಅಂಗಡಿ, ಹಾರ್ಡ್ವೇರ್ ಶಾಪ್ ಸೇರಿದಂತೆ ಉಳಿದ ಎಲ್ಲಾರೀತಿಯ ಅಂಗಡಿ ಮುಂಗಟ್ಟುಗಳನ್ನು  ಮುಚ್ಚಿಸಲು ಪುರಸಭೆ ಕರೆ ನೀಡಿದ್ದ ಪ್ರಕಟಣೆಗೆ ಸಾರ್ವಜನಿಕರು ಉತ್ತಮ ಸ್ಪಂದನೆ ನೀಡಿದ್ದಾರೆ.