ಹೊನ್ನಾಳಿಯಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಲು ಮನವಿ.

 ಹೊನ್ನಾಳಿ.ಏ.೮;  ಸರಕಾರದ ಆದೇಶದಂತೆ ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಿ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿರುವುದು ಉತ್ತಮ ಕಾರ್ಯ.ಅದರಂತೆ  ಗ್ರಾಮಗಳ ಜತೆಗೆ ಹೊನ್ನಾಳಿ ಪಟ್ಟಣದಲ್ಲಿ ಜನಸ್ಪಂದನೆ ನಡೆಸಬೇಕು ಎಂದು ರಕ್ಷಣಾ ವೇದಿಕೆ  ಹಾಗೂ ಯುವಶಕ್ತಿ ಒಕ್ಕೂಟದವರು ಮನವಿ ಮಾಡಿದ್ದಾರೆ. ಹೊನ್ನಾಳಿಯಲ್ಲಿಅನೇಕ ರೀತಿಯ ಸಮಸ್ಯೆಗಳಿದ್ದು ಪರಿಹಾರ ಕಾಣದೆ ಜನ ತತ್ತರಿಸಿದ್ದಾರೆ ಹಾಗೂ  ರಾಜಕಾರಣಿಗಳು ಹಾಗೂ ತಾಲ್ಲೂಕಿನ ಶಾಸಕರು ದಾವಣಗೆರೆ ಜಿಲ್ಲೆಯ ಸಂಸದರು ಇದುವರೆಗೂ ಹೊನ್ನಾಳಿ ಪಟ್ಟಣದಲ್ಲಿ ಯಾವುದೇ ರೀತಿ ಕುಂದುಕೊರತೆಯ ಬಗ್ಗೆ  ಸಂಬಂಧಿಸಿದಂತೆ ಜನರ ಸಮಸ್ಯೆಗಳನ್ನು ಆಲಿಸುವುದಿಲ್ಲ.
ರಾಜಕಾರಣಿಗಳು ಮಾಡುವ ಕೆಲಸವನ್ನು ಜಿಲ್ಲಾಧಿಕಾರಿಗಳಾದ ತಾವು ಅಧಿಕಾರಿಗಳ ಸಹಕಾರದೊಂದಿಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ವನ್ನು ನೀಡುತ್ತಿದ್ದೀರಿ ದಯಮಾಡಿ ತಾವುಗಳು ಹೊನ್ನಾಳಿ ನಗರದಲ್ಲಿಯೂ  ವಾಸ್ತವ್ಯ ಮಾಡುವ ಮೂಲಕ ಜನರಿಗೆ ಆಗುತ್ತಿರುವ ಅನೇಕ ಕೊರತೆಗಳಾದ ಶುದ್ಧ ಕುಡಿಯುವ ನೀರಿನ ಕೊರತೆ, ಚರಂಡಿ ಸ್ವಚ್ಛತೆ, ಸಮರ್ಪಕ ರಸ್ತೆ ವ್ಯವಸ್ಥೆ ವೃದ್ಧಾಪ್ಯವೇತನ ಅಂಗವಿಕಲರ ಚೇತನಾ ಆಧಾರ್ ಕಾರ್ಡ್ ರೇಷನ್ ಕಾರ್ಡು ಪಟ್ಟಣ ಪಂಚಾಯಿತಿಯಲ್ಲಿ ಈ ಆಸ್ತಿ ಖಾತೆ ಬದಲಾವಣೆಯ ಸ್ವತ್ತನ್ನು ಅಳತೆ ಮಾಡುವುದರ ಸಮಸ್ಯೆ ಮತ್ತು ಎಚ್ ಕಡದಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಟಿಬಿ ಸರ್ಕಲ್ ದೇವನಾಯಕನಹಳ್ಳಿ ಯಾವುದೇ ಜಂಗಲ್ ಕಟಿಂಗ್ ಆಗಿರುವುದಿಲ್ಲ ಹಾಗೂ ಚರಂಡಿ ವ್ಯವಸ್ಥೆ ಸರಿಯಾಗಿ ಇರುವುದಿಲ್ಲ ಬೀದಿ ದೀಪ ವ್ಯವಸ್ಥೆ ಇಲ್ಲ ಸ್ವಚ್ಛತೆ ಇಲ್ಲ ನೀರಿನ ಸಮಸ್ಯೆ ಇವುಗಳ ಜೊತೆಗೆ ಜನರಿಗೆ ಅನಕೂಲವಾಗುವ ರೀತಿಯಲ್ಲಿ ಬ್ಯಾಂಕ್ ಗಳು ಸ್ಪಂದಿಸುವಂತೆ ತಾವುಗಳು ತಿಂಗಳಲ್ಲಿ 1ದಿನವಾದರೂ ಹೊನ್ನಾಳಿ ನಗರದಲ್ಲಿ ವಾಸ್ತವ್ಯ ಮಾಡಬೇಕು ಎಂದು ಒತ್ತಾಯಿಸಿ ದಂಡಾಧಿಕಾರಿ ಬಸವರಾಜ ಕೋಟೂರ  ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ  ಕತ್ತಗಿ ನಾಗರಾಜ್ ಶ್ರೀನಿವಾಸ್ ಎಸ್ ಯೋಗೀಶ್, ಮಂಜು ರಾಖಿ ರಾಕೇಶ್ ಇನ್ನು ಮುಂತಾದವರಿದ್ದರು.