ಹೊನ್ನಾಳಿಯಲ್ಲಿ ಕಾಲ್ನಡಿಗೆ ಜಾಥಾ

ಹೊನ್ನಾಳಿ.ಏ.೨; ಆಗಸ್ಟ್ 15 ಕ್ಕೆ ಸ್ವಾತಂತ್ರ್ಯ ಗಳಿಸಿ 75 ವರ್ಷ ತುಂಬುತ್ತಿರುವ ಹಿನ್ನಲೆಯಲ್ಲಿ ತಾಲೂಕು ಆಡಳಿತ 75 ವಾರಗಳ ಕಾಲ ಸೂದೀರ್ಘ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ, ಸಾಂಕೇತಿಕವಾಗಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥವನ್ನು ಶಾಸಕ ಎಂ.ಪಿ.ರೇಣುಕಾಚಾರ್ಯ ಪ್ರವಾಸಿ ಮಂದಿರದಲ್ಲಿರುವ ಗಾಂಧೀಜಿ ಪ್ರತಿಮೆಗೆ ಹಾರ ಹಾಕಿ ಉದ್ಘಾಟಿಸಿದರು.ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಸ್ವಾತಂತ್ರ ಕೇವಲ ಹೋರಾಟ ಮಾಡಿದ್ದರಿಂದ ಬರಲಿಲ್ಲ ಲಕ್ಷಾಂತರ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಸೇನಾನಿಗಳು ತಮ್ಮ ಪ್ರಾಣಗಳನ್ನು ಬಲಿದಾನ ಮಾಡಿದ್ದರಿಂದ ಭಾರತಕ್ಕೆ ಸ್ವಾತಂತ್ರ ಸಿಕ್ಕಿತು ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಬಾಲಗಂಗಾದರ್ ತಿಲಕ್,ಲಾಲ್ ಲಜಪತರಾಯ್,ಮದನಲಾಲ್ ಧೀಂಗ್ರಾ,ಭಗತ್‌ಸಿಂಗ್,ಚಂದ್ರಶೇಖರ್ ಅಜಾದ್,ಮದನಮೋಹನ ಮಾಳವಿಯ,ಸುಭಾಶ್ ಚಂದ್ರಬೋಸ್,ಗಾಂಧೀಜಿ ಸೇರಿದಂತೆ ಅನೇಕ ಮಹಾನಿಯರು ಸ್ವತಂತ್ರಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಹೋರಾಡಿದ್ದರ ಫಲ ಇಂದು ನಾವು ಸರ್ವ ಸ್ವತಂತ್ರರಾಗಿದ್ದೇವೆ ಎಂದರು.ಕಳೆದ ವರ್ಷ ಕರೋನಾ ನಮ್ಮನ್ನು ಕರಾಳವಾಗಿ ಕಾಡಿತು, ಆದರೂ ಈ ವರ್ಷ ಮತ್ತೆ ನಮ್ಮನನು ಕಾಡುವ ಎಲ್ಲಾ ಲಕ್ಷಣಗಳು ಕಾಣುತ್ತೇವೆ ಆದ್ದರಿಂದ ಮನೆಯಿಂದ ವೃದ್ಧರನ್ನು ಮತ್ತು ಮಕ್ಕಳನ್ನು ಹೊರಗೆ ಕಳುಹಿಸಬೇಡಿ,ಮಕ್ಕಳ ಬಗ್ಗೆ ಜಾಗ್ರತೆ ಇರಲಿ,ನಾವು ಎಲ್ಲೇ ಹೋದರೂ ಮಾಸ್ಕ್ ಧರಿಸೋಣ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳೋಣ ಎಂದು ತಿಳಿಸಿದರು.ತಾ.ಪಂ. ಇಒ ಗಂಗಾಧರಮೂರ್ತಿ ಮಾತನಾಡಿ,75 ವಾರಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಸ್ವಚ್ಚ ಭಾರತ ಅಭಿಯಾನ,ನೀರಿನ ಮಹತ್ವ ಮತ್ತು ಸಂರಕ್ಷಣೆ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಯೋಗ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.ಪುರಸಭಾಧ್ಯಕ್ಷ ಶ್ರೀಧರ್ ಕೆ.ವಿ.ಉಪಾಧ್ಯಕ್ಷೆ ರಂಜಿತಾ ಚನ್ನಪ್ಪ, ಪುರಸಭಾ ಸದಸ್ಯ ಬಾಬು,ಸಿಪಿಐ ದೇವರಾಜ್,ಬಿಇಒ ರಾಜಿವ್,ಜಿ.ಪಂ. ಎಇಇ ಅಜ್ಜಪ್ಪ, ತಾಲೂಕು ವೈದ್ಯಾಧಿಕಾರಿ ಡಾ.ಕೆಂಚಪ್ಪ,ಗ್ರೇಡ್ 2 ತಹಶೀಲ್ದಾರ್ ಸುರೇಶ್,ರವಿಕುಮಾರ್ ಸೇರಿದಂತೆ ಅನೇಕ ಅಧಿಕಾರಿಗಳು ಹಾಗೂ ಜನಪ್ರೆತಿನಿಧಿಗಳು ಉಪಸ್ಥಿತರಿದ್ದರು.