ಹೊನ್ನಾಳಿ ಏ.30; ಚುನಾವಣಾ ಆಯೋಗದ ಆದೇಶದ ಹಾಗೂ ಮಾರ್ಗದರ್ಶನದಂತೆ ಪುರಸಭೆ ವತಿಯಿಂದ ಮತದಾನ ಆಂದೋಲನ ಹಾಗೂ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ ಹಾಗೂ ಚುನಾವಣಾ ಆಯೋಗದ ಧ್ವಜರೋಹಣ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ಸಹಯೋಗದೊಂದಿಗೆ ಪುರಸಭೆ ಆವರಣದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ರಾಮ್ ಬೋವಿ ಮಾತನಾಡಿ ಮತದಾನ ಪ್ರತಿಯೊಬ್ಬರ ಹಕ್ಕು ಮತದಾನವನ್ನು ಪ್ರತಿಯೊಬ್ಬರು ಹಾಕಬೇಕೆಂಬುದೇ ನಮ್ಮ ಈ ಜಾತದ ಉದ್ದೇಶ ಏಕೆಂದರೆ ಒಬ್ಬ ಅಭ್ಯರ್ಥಿ ಗೆಲ್ಲಲು ಒಂದು ಮತ ಸಾಕು ಹಾಗಾಗಿ ಪ್ರತಿಯೊಂದು ಮತಗಟ್ಟೆಗಳಲ್ಲಿ ಪ್ರತಿಯೊಬ್ಬ ಮತದಾರರು ಆಗಮಿಸಿ ಮತ ಹಾಕಬೇಕು ನೂರರಷ್ಟು ನಾವು ಮತ ಹಾಕಿಸುವಲ್ಲಿ ಶ್ರಮಿಸಬೇಕು ಎಂದರು. ಪುರಸಭೆ ಪ್ರಭಾರ ಮುಖ್ಯಾಧಿಕಾರಿ ರಂಜಿನಿ ಮಾತನಾಡಿ ಪ್ರತಿಯೊಬ್ಬರು ಮತ ಹಾಕುವಂತೆ ನಾವು ಈ ಬೈಕ್ ಜಾತದಲ್ಲಿ ಮತದಾರರಿಗೆ ಜಾಗೃತಿ ಮೂಡಿಸಬೇಕು ಹಾಗೆ ತುಂಗಭದ್ರಾ ಬಡಾವಣೆಯಲ್ಲಿ ಮತದಾನದ ಬೀದಿ ನಾಟಕವನ್ನು ಆಯೋಜಿಸಿದ್ದು ಮತದಾರರು ಈ ಬೀದಿ ನಾಟಕ ನೋಡುವ ಮೂಲಕ ಜಾಗೃತಿಯಾಗಿ ಮತವನ್ನು ಹಾಕಬೇಕೆಂಬುದೇ ಈ ಬೀದಿ ನಾಟಕದ ಉದ್ದೇಶ ಎಂದರು. ತಾಲೂಕು ಪಂಚಾಯಿತಿ ಪಿಂಕ್ ಬೂತ್ ಬಳಿ ಜಾಥಾ ಪ್ರಾರಂಭಿಸಿ ತುಂಗಭದ್ರ ಬಡಾವಣೆ ಹಾಗೂ ಸಂಗೊಳ್ಳಿ ರಾಯಣ್ಣನ ಸರ್ಕಲ್ ಮೂಲಕ ಪುರಸಭೆಗೆ ಆಗಮಿಸಿದ ಬೈಕ್ ಜಾಥಾ ಈ ಸಂದರ್ಭದಲ್ಲಿ ತಾಲೂಕು ಆಡಳಿತ ಸಿಬ್ಬಂದಿ ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿ ಪುರಸಭೆ ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರು ಅಂಗನವಾಡಿ ಆಶಾ ಕಾರ್ಯಕರ್ತರು ವಿವಿಧ ಸಂಘ ಸಂಸ್ಥೆಯ ಮಹಿಳಾ ಕಾರ್ಯಕರ್ತೆಯರು ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.