ಹೊನ್ನಾಳಿಗೆ ಶೀಘ್ರದಲ್ಲೇ ಸಿಟಿ ಸ್ಕ್ಯಾನಿಂಗ್ ವ್ಯವಸ್ಥೆ

ಹೊನ್ನಾಳಿ.ಜೂ.೯;  : ತಾಲೂಕು ಆಸ್ಪತ್ರೆಯಲ್ಲಿ ಶೀಘ್ರದಲ್ಲೇ ಸಿಟಿ ಸ್ಕಾö್ಯನಿಂಗ್ ಸೆಂಟರ್ ಪ್ರಾರಂಭಿಸಲಾಗುವುದು ಎಂದು ಸಿಎಂ.ರಾಜಕೀಯ ಕಾರ್ಯದರ್ಶಿ ಎಂಪಿ.ರೇಣುಕಾಚಾರ್ಯ ಹೇಳಿದರು.ತಾಲೂಕಿನ ಅರಬಗಟ್ಟೆ ವಸತಿ ಕೇಂದ್ರದಲ್ಲಿರುವ ಕೊರೋನಾ ಆರೈಕೆ ಕೇಂದ್ರದಲ್ಲಿ ಸೋಂಕಿತರಿಗೆ ಯೋಗಾಬ್ಯಾಸ ಮಾಡಿಸಿ,ಬೆಳಗಿನ ಉಪಹಾರ ನೀಡಿ ಸುದ್ಧಿಗಾರರೊಂದಿಗೆ ಮಾತನಾಡಿದರು.ಜಿಲ್ಲಾಸ್ಪತ್ರೆಯನ್ನು ಬಿಟ್ಟರೇ ಹೊನ್ನಾಳಿ ತಾಲೂಕು ಆಸ್ಪತ್ರೆಯಲ್ಲಿ ಮಾತ್ರ ಸ್ಯಾ÷್ಕನಿಂಗ್ ಸೆಂಟರ್ ಆರಂಭವಾಗಲಿದ್ದು ಇದರಿಂದ ಅವಳಿ ತಾಲೂಕಿನ ಜನರಿಗೆ ಅನುಕೂಲವಾಗಲಿದೆ ಎಂದರು.ತಾಲೂಕು ಆಸ್ಪತ್ರೆಯಲ್ಲಿ ಸ್ಕಾö್ಯನಿಂಗ್ ಸೆಂಟರ್ ಪ್ರಾರಂಭಿಸುವ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿ ಲತಾಕುಮಾರಿ ಜೊತೆ ಚರ್ಚಿಸಿದ್ದು ಶೀಘ್ರವೇ ಸಿಟಿ ಸ್ಜಾö್ಯನ್ ಸೆಂಟರ್‌ಗೆ 1.50 ಕೋಟಿ ಹಣ ಬಿಡುಗಡೆ ಯಾಗಲಿದೆ ಎಂದರು.ಅವಳಿ ತಾಲೂಕಿನ ಬಡ ಜನರು ಸ್ಕಾö್ಯನಿಂಗ್‌ಗಾಗೀ ಶಿವಮೊಗ್ಗ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ನೀಡಿ ಸಿಟಿ ಸ್ಜಾö್ಯನ್ ಮಾಡಿಸಿಕೊಂಡು ಬರುತ್ತಿದ್ದರು. ಇದನ್ನು ಮನಗಂಡು ಸಿಟಿ ಸ್ಕಾö್ಯನಿಂಗ್ ಸೆಂಟರ್‌ನ್ನು ಹೊನ್ನಾಳಿಯಲ್ಲೇ ಪ್ರಾರಂಭಿಸಿದರೆ ಬಡವರಿಗೆ ಅನು ಕೂಲವಾಗಲಿದೆ ಎಂಬ ಉದ್ದೇಶದಿಂದ ಹೊನ್ನಾಳಿ ತಾಲೂಕು ಆಸ್ಪತ್ರೆಯಲ್ಲಿ ಸದ್ಯದರಲ್ಲದೇ ಸ್ಕಾö್ಯನಿಂಗ್ ಸೆಂಟರ್ ಆರಂಭಿಸುವುದಾಗಿ ತಿಳಿಸಿದರು.ನಿನ್ನೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅವಳಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವುದಕ್ಕೆ 495 ಕೋಟಿ ಅನುದಾನದ ಬಗ್ಗೆ ಚರ್ಚೆ ಮಾಡಿದ್ದು ಈಗಾಗಲೇ ಡಿಪಿಆರ್ ಆಗಿದ್ದು ಸದ್ಯದರಲ್ಲೇ ಟೆಂಡರ್ ಪ್ರಕ್ರಿಯೇ ಆರಂಭವಾಗಲಿದೆ ಎಂದರು. ಇನ್ನು ಹೊನ್ನಾಳಿ ನಗರಕ್ಕೆ ಶುದ್ಧ ಕುಡಿಯುವ ನೀರಿನ ಘಟಕಕ್ಕೆ 20 ಕೋಟಿ ಹಾಗೂ ಯುಜಿಡಿ ಕಾಮಗಾರಿಗೆ 60 ಕೋಟಿ ಮಂಜೂರಾಗಿದ್ದು, ಶೀಘ್ರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.ಅವಳಿ ತಾಲೂಕಿನ ಜನರ ಸೇವೆ ಮಾಡುತ್ತಿರುವುದು ನನ್ನ ಪುಣ್ಯದ ಕೆಲಸ ; ಶಾಸಕನಾಗಿ ಅವಳಿ ತಾಲೂಕಿನ ಜನತೆಯ ಸೇವೆ ಮಾಡುವುದು ನನ್ನ ಕರ್ತವ್ಯ ಹಾಗೂ ಪುಣ್ಯದ ಕೆಲಸ ಎಂದ ಶಾಸಕರು ಕೊರೋನಾ ಸೋಂಕಿನಿAದ ನಮ್ಮ ಕ್ಷೇತ್ರದ ಜನತೆ ತತ್ತರಿಸಿದ್ದು, ಇಂತಹ ಸಮಯದಲ್ಲಿ ನಾನು ಕ್ಷೇತ್ರದ ಸೇವಕನಾಗಿ ಜನತೆಯ ರಕ್ಷಣೆ ಮಾಡುತ್ತಿದ್ದೇನೆ ಎಂದ ಅವರು, ನಾನು ಶಾಸಕನಾಗೀ ಈ ಕೆಲಸ ಮಾಡುತ್ತಿಲ್ಲಾ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.ಸೋAಕು ಇಳಿಮುಖ ; ಅವಳಿ ತಾಲೂಕಿನಲ್ಲಿ ಕೊರೋನಾ ಸೋಂಕು ಸ್ವಲ್ಪ ಇಳಿಮುಖವಾಗುತ್ತಿದೆ ಆದರೂ ಯಾರೂ ಮೈಮರೆಯಬಾರದು,ಮೈಮರೆತರೆ ಮತ್ತೆ ಅಪಾಯಕಟಿಟ್ಟ ಬುತ್ತಿ ಎಂದ ಶಾಸಕರು ಎಂದಿನಿAತೆ ಪ್ರತಿನಿತ್ಯ ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಸೋಂಕಿತರಿಗೆ ಯೋಗಾಬ್ಯಾಸ ಮಾಡಿಸಿದರಲ್ಲದೇ ಬಲ್ಲವನೇ ಬಲ್ಲಾ ಬೆಲ್ಲದ ರುಚಿ ಎಂಬುವAತೆ ಪ್ರತಿಯೊಬ್ಬರೂ ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರಲ್ಲದೇ ಅಡುಗೆ ಸಹಾಯಕರೊಂದಿಗೆ ಬೆಳಗಿನ ಉಪಹಾರ ಸಿದ್ದಪಡಿಸಿ, ಸೋಂಕಿತರಿಗೆ ಉಪಹಾರ ಬಡಿಸಿ,ಅವರೊಂದಿಗೆ ಉಪಹಾರ ಸೇವಿಸಿದರು.ಕೊರೊನಾ ಸೋಂಕು ಕಡಿಮೆಯಾಗುವವರೂ ಕೋವಿಡ್ ಕೇರ್ ಸೆಂಟರ್‌ನಲ್ಲೇ ವಾಸ್ತವ್ಯ : ಕೋವಿಡ್ ಕೇರ್ ಸೆಂಟರ್‌ನಲ್ಲಿ ಮೂರು ದಿನಗಳ ಕಾಲ ವಾಸ್ತವ್ಯ ಮಾಡಿದ್ದ ಶಾಸಕರು ಇನ್ನು ಮುಂದೆ ಕೊರೊನಾ ಸೋಂಕು ಕಡಿಮೆಯಾಗುವವರೆಗೂ ಕೋವಿಡ್ ಕೇರ್ ಸೆಂಟರ್‌ನಲ್ಲೇ ವಾಸ್ತವ್ಯ ಮಾಡಲು ಸಂಕಲ್ಪ ಮಾಡಿದ್ದಾರೆ ಅಷ್ಟೇ ಅಲ್ಲದೇ ಸೋಂಕಿತರೊAದಿಗೆ ಇದ್ದು ಅವರ ಕಷ್ಟ ಸುಖ ವಿಚಾರಿಸಿ ಅವರಿಗೆ ಆತ್ಮಸ್ಥೆöÊರ್ಯ ತುಂಬುವ ಕೆಲಸ ಮಾಡುವುದಾಗಿ ಶಾಸಕರು ತಿಳಿಸಿದ್ದಾರೆ.ಯುವಕರಿಂದ ಹಣ್ಣು ಹಾಗೂ ಮಾಸ್ಕ್ ವಿತರಣೆ : ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಸೋಂಕಿತರಿಗೆ ಹೊನ್ನಾಳಿ ಪಟ್ಟಣದ ಉದ್ಯಮಿಗಳಾ ಮುರುಡಪ್ಪ ಮತ್ತು ಸುರೇಶ್ ಅವರ ಪುತ್ರರಾದ ಗಿರೀಶ್,ಹರೀಶ್,ಜಗದೀಶ್,ಆರ್.ಎಸ್.ಪ್ರಕಾಶ್ ಹಾಗೂ ಅವರ ಸ್ನೇಹಿತರ ಬಳಗದಿಂದ ಸೋಂಕಿತರಿಗೆ ವಿವಿಧ ಬಗೆಯ ಒಂದು ಕೆ.ಜಿ ಹಣ್ಣುಗಳನ್ನು ಹಾಗೂ ವಿಜ್ಞೇಶ್ವರ ಮೆಡಿಕಲ್ಸ್ನ ಶಿವಾನಂದ್ ಅವರು ಸೋಂಕಿತರಿಗೆ ಸರ್ಜಿಕಲ್ ಹಾಗೂ ಎನ್95 ಮಾಸ್ಕ್ ಹಾಗೂ ಸ್ಯಾನಿಟೈಸರ್ ಅನ್ನು ಶಾಸಕರ ಮೂಲಕ ಸೋಂಕಿತರಿಗೆ ವಿತರಿಸಿ ಆತ್ಮಸ್ಥೆöÊರ್ಯ ತುಂಬಿದರು.ಈ ಸಂದರ್ಭದಲ್ಲಿ ಸುಮಾ ರೇಣುಕಾಚಾರ್ಯ, ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್ ಸೇರಿದಂತೆ ಮತ್ತಿತರರಿದ್ದರು.