ಹೊನ್ನಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸರಸ್ವತಿ ಪೂಜೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.10: ತಾಲೂಕಿನ ಹಲಕುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹೊನ್ನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ವಿದ್ಯಾರ್ಥಿಗಳು ಸರಸ್ವತಿ ಪೂಜಾ ಸಮಾರಂಭವನ್ನು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಿದರು.
ಶಾಲೆಯ ಅಂತಿಮ ವರ್ಷದ ವ್ಯಾಸಂಗ ವನ್ನು ನಡೆಸುವ ವಿದ್ಯಾರ್ಥಿಗಳಿಗೆ  ವಿದ್ಯಾಶಾಲಾ ದಿನಗಳನ್ನೂ ಮೆಲುಕು ಹಾಕಿದುದು ವಿಶೇಷವಾಗಿತ್ತು.
ಈ ಕಾರ‌್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಶಾಲಾ ಶಿಕ್ಷಕರು ಒಂದುಗೂಡಿಸಿಕೊಂಡು ಸಮಾರಂಭ ಆಯೋಜಿಸಿದ್ದರು. ಗುರು- ಶಿಷ್ಯರ ನಡುವಿನ ಸಂಬಂಧ ಹಾಗೂ ಬಾಂಧವ್ಯತೆಯನ್ನು ಬಲಗೊಳಿಸಲು ಇದು ಸಹಕಾರಿ.
ಸರಸ್ವತಿ ದೇವಿಯ ಭಾವಚಿತ್ರಕ್ಕೆ ವಿದ್ಯಾರ್ಥಿ ಹಾಗೂ ಶಿಕ್ಷಕರು ಪೂಜೆ ಸಲ್ಲಿಸಿದರು. ವಿದ್ಯಾರ್ಥಿಗಳು ತಮ್ಮ ಶಾಲೆಯ ಬಗ್ಗೆ ಮತ್ತು ಅನುಭವವನ್ನು ಹಂಚಿಕೊಂಡರು.
ಹುಡುಗರು ದೋತಿ,ಬಿಳಿ ಅಂಗಿ ತೊಟ್ಟು ಮಿಂಚಿದರೆ, ಹೆಣ್ಣು ಮಕ್ಕಳು ಸೀರೆ ಉಟ್ಟು ಬಂದಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಹಾಡು,ನೃತ್ಯಗಳು ನೋಡುಗರ ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ನೆರೆದ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿಯರಾದ ಉಮಾದೇವಿ,ಶಿಕ್ಷಕಿಯರಾದ ಪಾರ್ವತಿ,ಶಕುಂತಲಾ ಬಾಯಿ, ಶಕೀನ ಬೇಗಂ,ಜಾನಮ್ಮಾ,ಸಹ ಶಿಕ್ಷಕಿಯರಾದ ತಿರುಮಲ,ಶಿಲ್ಪ,ಶಿಕ್ಷಕರಾದ, ಹೊನ್ನುರಪ್ಪ, ಊರಿನ ಮುಖಂಡರಾದ ಶಿವಣ್ಣ, ಎರ್ರಿಸ್ವಾಮಿ,ಶೇಖಪ್ಪ,ಸಯ್ಯದ್ ರಜಾಕ್ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮುಖಂಡರಾದ ರಾಜಶೇಖರಗೌಡ, ಎಸ್.ಡಿ.ಎಮ್. ಸಿ. ಅಧ್ಯಕ್ಷರಾದ ಹನುಮಂತ(ಬಬ್ಬು) ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು