
ಲಿಂಗಸುಗೂರು,ಆ.೦೪-ತಾಲ್ಲೂಕಿನ ಹೊನ್ನಳ್ಳಿ ಗ್ರಾಪಂ ಚುನಾವಣೆ ಇಂದು ನಡೆಯಿತು.
ಅಧ್ಯಕ್ಷ ಸ್ಥಾನದಿಂದ ಸಾಮಾನ್ಯ ಮಹಿಳೆ ಉಮಾದೇವಿ ಗಂಡ ರಂಗಪ್ಪ ಒಬ್ಬರು ನಾಮಪತ್ರ ಸಲ್ಲಿಸಿದ್ದರಿಂದ ಇವರು ಅವಿರೋಧವಾಗಿ ಆಯ್ಕೆಯಾದರು.
ಹೊನ್ನಳ್ಳಿ ಗ್ರಾಮ ಪಂಚಾಯತಿ ಬಿಜೆಪಿ ತೆಕ್ಕೆಗೆ ಹಾಗುವ ಸಾಧ್ಯತೆ ಇದೆ.
ಹೊನ್ನಳ್ಳಿ ಗ್ರಾಪಂ ಒಟ್ಟು ೧೮ ಸದಸ್ಯರು ಇದ್ದಾರೆ.
ಉಪಾಧ್ಯಕ್ಷ ಅಧ್ಯಕ್ಷ ಸ್ಥಾನದಿಂದ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ ಇಬ್ಬರಲ್ಲಿ ಯಾರು ಜಯಶಾಲಿ ಯಾಗುತ್ತಾರೆ ಕಾದೂ ನೋಡಬೇಕು.
ಈ ಸಂದರ್ಭದಲ್ಲಿ ಚುನಾವಣೆ ಅಧಿಕಾರಿ ಸಿಡಿಪಿಒ ಗೋಕೊಲ್, ಪಿಡಿಒ ಬಸವರಾಜ, ಮುಖಂಡರಾದ ಅಯ್ಯಪ್ಪ ವಕೀಲ, ಹುಸೇನಪ್ಪ ಯರಡೋಣಿ, ಯಂಕನಗೌಡ ಸೇರಿ ಸದಸ್ಯರು ಇದ್ದರು.