ಹೊನ್ನಕಿರಣ ಪ್ರಶಸ್ತಿ ಪ್ರದಾನ

ಫರತಬಾದ,ಮೇ 22 : ತಾಲೂಕಿನ ಹೊನ್ನಕಿರಣಗಿ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಪರ್ಯಂತ ಜಂಗಮವಟುಗಳ ಮಕ್ಕಳಿಗೆ ಶಿಬಿರದಲ್ಲಿ ಬೋಧನೆ ಮಾಡಲಾಯಿತು. 17ನೇ ವರ್ಷದ ರಾಷ್ಟ್ರೀಯ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದಲ್ಲಿಉತ್ತರ ಕರ್ನಾಟಕ ಭಾಗದ ಜಂಗಮರಿಗೆ ಬದುಕು ಕಟ್ಟಿಕೊಟ್ಟ ಶ್ರೇಯಸ್ಸು ಶ್ರೀ ಮಠಕ್ಕೆ ಸಲ್ಲುತ್ತದೆ ಶ್ರೀ ಮಠದಲ್ಲಿ ಧಾರ್ಮಿಕಸಂಸ್ಕಾರ ಶಿಬಿರದಲ್ಲಿ ಸುಮಾರು 200 ಜಂಗಮವಟುಗಳು ಪಾಲ್ಗೊಂಡು ವೇದ ಸಂಸ್ಕøತ ಸಂಗೀತಜ್ಯೋತಿಷ್ಯ ಮತ್ತು ಪಂಚಾಂಗದ ಅಧ್ಯಯನ ಮಾಡಿದವರಿಗೆ ಪ್ರಮಾಣ ಪತ್ರ ವಿತ್ತರಿಸಲಾಯಿತು. ಈ ಶಿಬಿರದ ಅಂಗವಾಗಿಗೋಪೂಜೆ ಮತ್ತು ಕಲ್ಪಭಸ್ಮ ತಯಾರಿಕೆ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಜಂಗಮ ವಟ್ಟುಗಳ ಅಜ್ಜ ಅಜ್ಜಿಯರಪಾದಪೂಜೆ ಮಾಡಿದರು.ಕಾರ್ಯಕ್ರಮದ ಸಾನಿಧ್ಯವನ್ನು ಚಿಟಗುಪ್ಪದ ಗುರುಲಿಂಗ ಶಿವಾಚಾರ್ಯರು ವಹಿಸಿದರು. ರಾಚೋಟೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಚಂದ್ರಗುಂಡ ಶಿವಾಚಾರ್ಯರ ನೇತೃತ್ವ ವಹಿಸಿ ಪಾಲಕರು. ಪೆÇೀಷಕರಾದವರು ಮಕ್ಕಳಿಗೆ ಒಳ್ಳೆ ಮೌಲ್ಯಗಳನ್ನು ಕಲಿಸಬೇಕು ಅಂದಾಗ ಮಾತ್ರ ವಟುಗಳು ಸರಳ ಜೀವನವನ್ನುಸಾಗಿಸಬಹುದು. ಸಾಮಾಜಿಕ ಜೀವನದಲ್ಲಿ ಅವರದೇ ಆದ ಘನತೆ ಗೌರವಗಳನ್ನು ಕಾಪಾಡಬೇಕು ಎಂದು ಹೇಳಿದರು. ಕಲಬುರಗಿತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ, ಶರಣಯ್ಯ ಸ್ವಾಮಿ, ಮಲ್ಲಿಕಾರ್ಜುನ ಬಿರಾದಾರ ವೇದಿಕೆ ಮೇಲೆ ಇದ್ದರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಗುರುಲಿಂಗ ಶಿವಾಚಾರ್ಯರು
ವೇ.ಡಾ.ಕೆ.ಎನ್. ರಾಜಕುಮಾರ ಶಾಸ್ತ್ರಿ,ಪೆÇ್ರ.ಐ.ಬಿ. ಹಿರೇಮಠ,ದೇವಿಂದ್ರಪ್ಪ ಎಸ್. ಸಜ್ಜನಶೆಟ್ಟಿ,ಹಣಮಂತರಾಯ ತುಪ್ಪದ ಅವರಿಗೆ ”ಹೊನ್ನಕಿರಣ ಪ್ರಶಸ್ತಿ” ನೀಡಿ ಗೌರವಿಸಲಾಯಿತು.ಬಸವರಾಜ ಚಟ್ಟಿ ನಿರೂಪಿಸಿ ವೀರೇಶ ಶಾಸ್ತ್ರಿ ಸಾಗರ ವಂದಿಸಿದರು.