ಹೊನ್ನಕಿರಣಗಿ : ರಕ್ತದಾನ ಶಿಬಿರ

ಕಲಬುರಗಿ:ಸೆ.25: ಇಲ್ಲಿಗೆ ಸಮೀಪದ ಹೊನ್ನಕಿರಣಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 75 ನೇ ಸ್ವಾತಂತ್ರ್ಯೋತ್ಸ ದಿನದ ಅಮೃತಮಹೋತ್ಸವ ನಿಮಿತ್ಯ ಕರ್ನಾಟಕ ರಾಜ್ಯ ಎಡ್ಸ ಪ್ರಿವೆನಷನ ಸೊಸೈಟಿ ಬೆಂಗಳೂರು, ಜಿಲ್ಲಾ ಪಂಚಾಯತಿ ಕಲಬುರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ರಕ್ತ ನಿಧಿ ಕೇಂದ್ರ ಜಿಮ್ಸ ಆಸ್ಪತ್ರೆ ಹಾಗೂ ಸರ್ಕಾರಿ ಸರ್ಕಾರೇತರ ಸಂಘ ಸಂಸ್ಥೆಗಳು ರೆಡ್ ರಿಬ್ಬನ ಕ್ಲಬ /ರೆಡ್ ಕ್ರಾಸ ಸೋಸೈಟಿ ಇವರ ಸಂಯುಕ್ತಾಶ್ರಯದಲ್ಲಿ ಬೃಹತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.

ಗ್ರಾಮದ ಯುವಕರು ಈ ಶಿಬಿರದಲ್ಲಿ ಪಾಲ್ಗೋಂಡು ರಕ್ತದಾನವನ್ನು ಮಾಡಿದರು.

ಈ ಶಿಬಿರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|| ಗೀತಾ ಕಲಬುರಗಿ ರಕ್ತನಿಧಿ ಕೇಂದ್ರದ ಜಿಮ್ಸ್ ವೈದ್ಯಾಧಿಕಾರಿ ಡಾ|| ಸುಧಾರಾಣಿ, ಹಾಗೂ ರಕ್ತನಿಧಿ ಸಿಬ್ಬಂದಿಗಳಾದ ಉತ್ತರದೇವಿ, ಅಶ್ವಿನಿ, ಗಿರಿಜಾಬಾಯಿ, ವಿಶ್ವನಾಥ, ಎಚ್.ಐ.ಓ, ಆದಿಲಿಂಗಯ್ಯ ಮಲ್ಲಿಕಾರ್ಜುನ ಪರೀಟ, ಜಾಕಿರ ಹುಸೇನ, ಗುರುನಾಥ, ಬಾಬುರಾವ ಸಿರನೂರ, ಗ್ರಾಮದ ಆಶಾ ಕಾರ್ಯಕರ್ತೆಯರು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಇನ್ನು ಮುಂತಾದವರು ಭಾಗವಹಿಸಿದರು.