ಹೊನ್ನಕಿರಣಗಿ: ಕ್ರೀಡಾಕೂಟ ಯಶಸ್ವಿ

ಕಲಬುರಗಿ,ಆ.5- ತಾಲೂಕಿನ ಹೊನ್ನಕಿರಣಗಿ ಗ್ರಾಮದ ಶ್ರೀ ಶಿವಯೋಗಪ್ಪ ವದ್ಗರ್ಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾಂತರಗತ ಕ್ರೀಡಾಕೂಟ ಯಶಸ್ವಿಯಾಗಿ ಜರಗಿತ್ತು.
ಒಟ್ಟು 10 ಕ್ರೀಡಾಪಟುಗಳ ತಂಡಗಳನ್ನು ರಚಿಸಲಾಯಿತು, ಇದರಲ್ಲಿ ವಾಲಿಬಾಲ್, ಕಬ್ಬಡ್ಡಿ, ಕೊ ಕ್ಕೊ ಎತ್ತರ ಜಿಗಿತ, ಉದ್ದ ಜಿಗಿತ, ಚಕ್ರ ಎಸೆತ, ಬರ್ಚಿ ಎಸೆತ, ಓಟುಗಳು. ವಿವಿಧ ಕ್ರೀಡೆಗಳನ್ನು ನಡೆಸಲಾಯಿತು.
ಕ್ರೀಡಾಪಟುಗಳು ಕ್ರೀಡಾ ಜ್ಯೋತಿಯನ್ನು ಉದ್ಘಾಟಕರಾದ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾದ ಮಲ್ಲಿನಾಥ ಕೆ ಬೂಸಾ ಅವರು ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಇದೇ 2023- 24 ನೇ ಸಾಲಿನ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ ಶಾಲಾಂತರ್ಗತ ಕ್ರೀಡಾಕೂಟವನ್ನು ನಾನು ಇಂದು ತುಂಬಾ ಸಂತೋಷದಿಂದ ಉದ್ಘಾಟಿಸಿದ್ದೇನೆ ಎಂದು ಹೇಳಿದ ಅವರು, ಹಂತ ಹಂತವಾಗಿ ಕುಡಿಯುವ ನೀರಿನ ವ್ಯವಸ್ಥೆ. ರಸ್ತೆಗಳು, ಕೋಣೆಗಳು ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತಿ ಸದಸ್ಯ ಬಾಬು ದಸರಗೋಳ. ಪ್ರಕಾಶ್ ಕಾಬಾ. ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಎಸ್ ಡಿ ಎಂ ಸಿ ಅಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ ಅವರು ಮಾತನಾಡಿ ಶಾಲೆಯ ಅಭಿವೃದ್ಧಿಗೆ ಗ್ರಾಮ ಪಂಚಾಯತಿ ಸಹಕಾರ ಬೇಕು ಶೌಚಾಲಯ, ಕಂಪೌಂಡ್. ಎಲ್ಲರೂ ಕೈ ಜೋಡಿಸಿದಾಗ ಮಾತ್ರ ಅಭಿವೃದ್ಧಿಯಾಗುವುದು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಮುಖ್ಯಗುರುಗಳಾದ ಬಸಪ್ಪ ಬಿರಾದಾರ ಅವರು ಮಾತನಾಡಿ ಗ್ರಾಮದವರು. ಎಸ್ ಡಿ ಎಂ ಸಿ ಅವರು ಗ್ರಾಮ ಪಂಚಾಯತಿಯವರು ಶಾಲಾ ಅಭಿವೃದ್ಧಿಗೆ ಶ್ರಮಿಸಬೇಕು. ಮಕ್ಕಳಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಮಾತನಾಡಿದರು. ದೈಹಿಕ ಶಿಕ್ಷಕ ರಘುನಾಥ ಮಸರಭೋ. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸಿದ್ದಣ್ಣ ನಾಗಬತ್ತಿ. ಮೊಹಮ್ಮದ್ ಖಾಜಾ ಪಟೇಲ್. ಮುಜುಬುದ್ದೀನ್. ಶಿವಸಾಗರ ಕಿಲ್ಲೆದರ. ರಾಘವೇಂದ್ರ ಪವರ್ ನಿರೂಪಣೆಯನ್ನು ಮಲ್ಲಿಕಾರ್ಜುನ್ ವಿ ಕೆ ಸಲಗರ್ ಸ್ವಾಗತವನ್ನು ಚಂದ್ರಕಾಂತ ದೇಶಮುಖ್. ವಂದನಾರ್ಪಣೆಯನ್ನು ಮೊಹಮ್ಮದ್ ಅಬ್ಜಲ್ ಗೈದರು.