ಹೊನ್ನಕಿರಣಗಿ ಕರಿಬಸವೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಪ್ರಶಸ್ತಿ

ಕಲಬುರಗಿ:ಜು.24: ನಗರದ ಎಸ್.ಎಮ್ ಪಂಡಿತ ರಂಗಮಂದಿರದಲ್ಲಿ
ಲಿಂ.ಶ್ರೀ.ಚಂದ್ರಶೇಖರ ಪಾಟೀಲ ರೇವೂರ ಫೌಂಡೇಶನ್ ಹಾಗೂ ಕ್ಷೇತ್ರ
ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಲಬುರಗಿ ದಕ್ಷಿಣ ವಲಯ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ 625/613 ಅಂಕಗಳ ಮೇಲೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ವಿಷಯವಾರು 100ಕ್ಕೆ 100ರಷ್ಟು ಅಂಕ ಪಡೆಯಲು ಮಾರ್ಗದರ್ಶನ ಮಾಡಿದ ಶಿಕ್ಷಕರಿಗೆ ಉತ್ತಮ ಶಿಕ್ಷಕ ಹಾಗೂ ಪ್ರತಿಶತ 100% ದಾಖಲೆಯ ಫಲಿತಾಂಶ ಪಡೆದ ಶಾಲೆಗೆ ಉತ್ತಮ ಶಾಲಾ ಪ್ರಶಸ್ತಿ ಪಡೆದಿದ್ದಕ್ಕೆ ಅಭಿನಂದನಾ ಸಮಾರಂಭದ ಪ್ರಯುಕ್ತ ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದ ಶ್ರೀ ಕರಿಬಸವೇಶ್ವರ ಪ್ರೌಢಶಾಲೆಗೆ ಶಾಲಾ ಪ್ರಶಸ್ತಿ ಮತ್ತು ಕನ್ನಡ ಮತ್ತು ಸಮಾಜ ವಿಜ್ಞಾನ ವಿಷಯದಲ್ಲಿ 100 ಅಂಕ ಪಡೆಯಲು ಮಾರ್ಗದರ್ಶನ ಮಾಡಿದ ಶಿಕ್ಷಕರಾದ ಕಾಶಿನಾಥ.ಎಸ್.ಬೆನಕನಹಳ್ಳಿ ಹಾಗೂ ಹಿಂದಿ ವಿಷಯದಲ್ಲಿ 100 ಅಂಕ ಪಡೆಯಲು ಮಾರ್ಗದರ್ಶನ ಮಾಡಿದ ಶ್ರೀ ಶಿವಕುಮಾರ ಪಾಟೀಲ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮಾರಂಭದಲ್ಲಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ಅಂಬರೀಷ.ಬಿ.ಬಂಗಾರಶೆಟ್ಟಿ ಹಾಗೂ ಸಹ ಶಿಕ್ಷಕರಾದ ಶ್ರವಣಕುಮಾರ ಗಂಧದಮಠ, ಲಕ್ಷ್ಮೀಕಾಂತ ಬುಸ್ಸಾ ಹಾಜರಿದ್ದರು. ಪ್ರಶಸ್ತಿ ಪಡೆದ ಶಿಕ್ಷಕರಿಗೆ ಶ್ರೀ ರಾಚೋಟೇಶ್ವರ ಶಿಕ್ಷಣ ಟ್ರಸ್ಟ್ ಅಧ್ಯಕ್ಷರಾದ ಶ್ರೀ.ಷ.ಬ್ರ.ಚಂದ್ರಗುಂಡ ಶಿವಾಚಾರ್ಯರು ಮತ್ತು ಆಡಳಿತ ಮಂಡಳಿಯ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ತು ಕಲಬುರಗಿ ತಾಲೂಕು ಅಧ್ಯಕ್ಷರಾದ ಗುರುಬಸಪ್ಪ ಸಜ್ಜನಶೆಟ್ಟಿ ಅಭಿನಂದಿಸಿದರು.