ಹೊನ್ನಕಿರಣಗಿಯಲ್ಲಿ 13ರಂದು ಕೂಡ್ಲೂರ ಬಸವಲಿಂಗೇಶ್ವರ ಜಾತ್ರೆ

ಕಲಬುರಗಿ:ಏ.6: ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ಶ್ರೀ ಕೂಡ್ಲೂರ ಬಸವಲಿಂಗೇಶ್ವರರ 46ನೇ ಜಾತ್ರಾ ಮಹೋತ್ಸವ ಜರುಗಲಿದೆ. ಇದೇ ಎಪ್ರಿಲ್ 12ರಂದು ಮಧ್ಯಾಹ್ನ 2ಗಂಟೆಗೆ ಪಲ್ಲಕ್ಕಿ ಮೆರವಣಿಗೆ ಹಾಗೂ ಪುರವಂತರ ಸೇವೆ ಮತ್ತುರ ರಾತ್ರಿ ಅಖಂಡ ಭಜನೆ ನಡೆಯುತ್ತದೆ.
13ರಂದು ಬೆಳಗ್ಗೆ ಶನಿವಾರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ಜರುಗುವುದು. ಸಾಯಂಕಾಲ 5.30ನಿಮಿಷಕ್ಕೆ ಬಹುವಿಜೃಂಭಣೆಯಿಂದ ಸದ್ಗುರು ಶ್ರೀ ಕೂಡ್ಲೂರ ಬಸವಲಿಂಗೇಶ್ವರರ ರಥೋತ್ಸವ ಜರುಗುವುದು. ಅಂದು ರಾತ್ರಿ ಮಹಾಪ್ರಸಾದ ವಿತರಣೆ ಹಾಗೂ ಜನಪದ ಸಾಹಿತ್ಯ ಮತ್ತು ಇನ್ನಿತರ ಮನೋರಂಜನೆ ಕಾರ್ಯಕ್ರಮಗಳು ನಡೆಯುವುದು.
14ರಂದು ರವಿವಾರ ಮುಂಜಾನೆ 8ಗಂಟೆಗೆ ಹಾಗೂ ಸಾಯಂಕಾಲ 5 ಗಂಟೆಗೆ ಸುಪ್ರಸಿದ್ದ ಪೈಲ್ವಾನ್ ಜಂಗಿ ಕುಸ್ತಿಗಳು ನಡೆಯುತ್ತವೆ. ಕಾರ್ಯಕ್ರಮ ನೇತೃತ್ವವನ್ನು ಕೂಡ್ಲೂರ ಬಸವಲಿಂಗೇಶ್ವರ ಮಠದ ಪೀಠಾಧಿಪತಿಗಳಾದ ಡಾ.ಶಿವರಾಜಪ್ಪ ಅಪ್ಪ ವಹಿಸಲಿದ್ದಾರೆ. ಸಕಲ ಸದ್ಬಕ್ತರು ತನು ಮನ ಧನದಿಂದ ಸಹಭಾಗಿಯಾಗಿ ಪೂಜ್ಯ ಶ್ರೀ ಬಸವಲಿಂಗೇಶ್ವರರ ಕೃಪಾರ್ಶೀವಾದ ಪಡೆದು ಪುನೀತರಾಗಬೇಕೆಂದು ವಿನಂತಿ. ಸಕಲ ಸದ್ಬಕ್ತ ಮಂಡಳಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.