ಹೊನ್ನಕಿರಣಗಿಯಲ್ಲಿ ಮರಗಮ್ಮ ದೇವಿಯ ಧ್ವನಿ ಸುರುಳಿ ಬಿಡುಗಡೆ

ಫರತಾಬಾದ:ಜ.30: ಕಲಬುರಗಿ ತಾಲೂಕಿನ ಹೊನ್ನಕಿರಣಗಿಯ ಗ್ರಾಮದೇವತೆ ಶ್ರೀ ಮರಗಮ್ಮ ದೇವಿಯ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮವನ್ನು ದಿ.2 ಫೆಬ್ರವರಿ ರಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಮರಗಮ್ಮ ದೇವಿ ಆವರಣದಲ್ಲಿ ನಡೆಯಲಿದೆ.
ದಿವ್ಯ ಸಾನಿಧ್ಯವನ್ನು ಹೊನ್ನಕಿರಣಗಿ ರಾಚೋಟೇಶ್ವರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ.ಷ.ಬ್ರ.ಚಂದ್ರಗುಂಡ ಶಿವಾಚಾರ್ಯರು ವಹಿಸುವರು. ಸಾನಿಧ್ಯವನ್ನು ಮರಗಮ್ಮ ದೇವಿಯ ಅರ್ಚಕರಾದ ಮರೆಪ್ಪ ಪೂಜಾರಿ ವಹಿಸುವರು. ಅಫಜಲಪೂರ ಶಾಸಕರಾದ ಶ್ರೀ ಎಂ ವೈ ಪಾಟೀಲ ಅವರು ಧ್ವನಿ ಸುರುಳಿ ಬಿಡುಗಡೆ ಮಾಡುವರು. ಧ್ವನಿ ಸುರುಳಿ ಭಕ್ತಿ ಸೇವೆಯನ್ನು ಕೆಪಿಪಿಸಿ ಸದಸ್ಯರಾದ ಶ್ರೀಮತಿ ಜ್ಯೋತಿ ಅರುಣಕುಮಾರ ಎಂ ವೈ ಪಾಟೀಲ ಮಾಡುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಹಿರಿಯ ಮುಖಂಡರಾದ ಬದ್ರಿನಾಥ ಬಿ ಸಜ್ಜನ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಸಾಯಬಣ್ಣ ನೀಲಪಗೊಳ, ಮಾಜಿ ಜಿಲ್ಲಾ ಸದಸ್ಯರಾದ ಶ್ರೀಮತಿ ಸೋನುಬಾಯಿ ಜಯಕುಮಾರ ಕೋಣಿನ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಲ್ಲಿನಾಥ ಬುಸಾ, ಫರತಾಬಾದ ಪೋಲೀಸ್ ಸ್ಟೇಷನ್ ವೃತ್ತ ನಿರೀಕ್ಷಕರಾದ ಮಲ್ಲಿಕಾರ್ಜುನ ಇಕ್ಕಳಕಿ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಅಧ್ಯಕ್ಷರಾದ ಗುರುಬಸಪ್ಪ ಸಜ್ಜನಶೆಟ್ಟಿ ಇವರು ಆಗಮುಸುವರು. ಧ್ವನಿ ಸುರುಳಿ ಸಾಹಿತ್ಯವನ್ನು ಶ್ರೀಮತಿ ಈರಮ್ಮ ಗುರುಸ್ವಾಮಿ ಅವರು ರಚಿಸಿದ್ದಾರೆ. ಸಂಗೀತ ಸೇವೆಯನ್ನು ಮಲ್ಲಿಕಾರ್ಜುನ ಮಣ್ಣೂರ ಫರತಾಬಾದ ಮಾಡಲಿದ್ದಾರೆ ಎಂದು ದೇವಸ್ಥಾನದ ಭಕ್ತರಾದ ಅಶೋಕಕುಮಾರ ಕಂತೆಗೋಳ ಅವರು ತಿಳಿಸಿದ್ದಾರೆ,