ಹೊನ್ನಕಿರಣಗಿಯಲ್ಲಿ ನ. 12ರಂದು ತಾಲ್ಲೂಕು ಮಟ್ಟದ 7ನೇ ಕನ್ನಡ ಸಾಹಿತ್ಯ ಸಮ್ಮೇಳನ

ಕಲಬುರಗಿ:ನ.6: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ತಾಲ್ಲೂಕು ಮಟ್ಟದ 7 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶತಾಯುಷಿ ಶ್ರೀ ಕರಿಬಸವೇಶ್ವರ್ ಶಿವಾಚಾರ್ಯರ ವೇದಿಕೆಯಲ್ಲಿ ನವೆಂಬರ್ 12ರಂದು ತಾಲ್ಲೂಕಿನ ಹೊನ್ನಕಿರಣಗಿ ಗ್ರಾಮದ ಶ್ರೀ ರಾಚೋಟೇಶ್ವರ್ ಸಾಂಸ್ಕøತಿಕ ಭವನದಲಿ ್ಲಆಯೋಜಿಸಲಾಗಿದೆ ಎಂದು ಪರಿಷತ್ ತಾಲ್ಲೂಕು ಅಧ್ಯಕ್ಷ ಗುರುಬಸಪ್ಪ ಎಸ್. ಸಜ್ಜನಶೆಟ್ಟಿ ಅವರು ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, ನಾವು ಪಾಂಡಿತ್ಯವುಳ್ಳವರಾದರೂ ನಮ್ಮತನವನ್ನು, ಕನ್ನಡ ನಾಡಿನ ಸಂಸ್ಕøತಿಯನ್ನು ನಾವು ಎಂದಿಗೂ ಮರೆಯಬಾರದು. ಅಂದಾಗ ಮಾತ್ರ ನಮ್ಮ ನಾಡಿನ ಸಂಸ್ಕøತಿಯ ರಕ್ಷಣೆ ಸಾಧ್ಯವಾಗುತ್ತದೆ. ನಮ್ಮ ಕನ್ನಡ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾದರಿಯಾಗಿ ನಡೆಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಎಲ್ಲ ಜಾತಿ, ಧರ್ಮದವರನ್ನು ಒಗ್ಗೂಡಿಸುವ ಮತ್ತು ಒಂದುಗೂಡಿಸುವ ಶಕ್ತಿ ಇರೋದು ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿಗೆ ಮಾತ್ರ. ಹಾಗಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಅವರ ನೇತೃತ್ವದಲ್ಲಿ ಎಲ್ಲ ವರ್ಗದ ಕವಿ, ಸಾಹಿತಿಗಳು, ಸಂಘಟಕರು, ಪ್ರಮುಖರಗಳನ್ನೊಳಗೊಂಡ ಮಾದರಿ ಸಮ್ಮೇಳನ ಇದಾಗಿದ್ದು, ಇದಕ್ಕಾಗಿ ಕನ್ನಡ ಭಾಷೆ, ಸಂಸ್ಕøತಿ ಬೆಳೆಸಿ ಉಳಿಸಲು ಪ್ರಜೆಗಳ ಆಶ್ರಯ ಅಗತ್ಯವಿದೆ. ತಾಲೂಕಿನ ಜನತೆ ಸಾಹಿತ್ಯ ಮತ್ತು ಸಾಂಸ್ಕøತಿಕ ಬೆಳವಣಿಗೆಗೆ ಕೈ ಜೋಡಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.
ಹಿರಿಯ ಸಾಹಿತಿ ಡಾ. ನಾಗೇಂದ್ರ ಮಸೂತಿ ಅವರ ಸರ್ವಾಧ್ಯಕ್ಷತೆಯಲ್ಲಿ ನವೆಂಬರ್ 12ರಂದು ಬೆಳಿಗ್ಗೆ 7.30ಕ್ಕೆ ಧ್ವಜಾರೋಹಣ ಜರುಗಲಿದ್ದು, ಬೆಳಿಗ್ಗೆ 8.30ಕ್ಕೆ ಜರುಗಲಿರುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಹೊನ್ನಕಿರಣಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ್ ಚಿಂಚೋಳಿ ಅವರು ಚಾಲನೆ ನೀಡಲಿದ್ದು, ಅನೇಕ ಕಲಾತಂಡಗಳು ಸೇರಿದಂತೆ ಗಣ್ಯರು ಉಪಸ್ಥಿರಿರುವರು ಎಂದು ಅವರು ಹೇಳಿದರು.
ಬೆಳಿಗ್ಗೆ 10.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಹೊನ್ನಕಿರಣಗಿಯ ಶ್ರೀ ರಾಚೋಟೇಶ್ವರ್ ಸಂಸ್ಥಾನಮಠದ ಚಂದ್ರಗುಂಡ ಶಿವಾಚಾರ್ಯರು, ಫಿರೋಜಾಬಾದ್‍ನ ಅನ್ನದಾನೇಶ್ವರ ಮಠದ ಗುರುಬಸವ ಮಹಾಸ್ವಾಮಿಗಳು ವಹಿಸುವರು. ಶಾಸಕ ಎಂ.ವೈ. ಪಾಟೀಲ್ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಪರಿಷತ್ ಜಿಲ್ಲಾ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಅವರು ಆಶಯ ನುಡಿಗಳನ್ನಾಡಲಿದ್ದು, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ. ಮಾನು ಸಗರ್, ಸಮ್ಮೇಳನಾಧ್ಯಕ್ಷ ಡಾ. ನಾಗೇಂದ್ರ ಮಸೂತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದಿಲೀಪ್ ಆರ್. ಪಾಟೀಲ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ಕೌಲಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರೆಮ್ಮಾ ಡವಳಗಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಾಯಬಣ್ಣಾ ನೀಲಪ್ಪಗೋಳ್, ಜಿಲ್ಲಾ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ಸುರೇಶ್ ಆರ್. ಸಜ್ಜನ್, ಹಿರಿಯ ಪತ್ರಕರ್ತ ವಾದಿರಾಜ್ ವ್ಯಾಸಮುದ್ರ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ, ಈಶ್ವರಗೌಡ ಪಾಟೀಲ್, ಡಾ. ಅಂಬಾರಾಯ್ ರುದ್ರವಾಡಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಾಹಿತಿ ಡಾ. ಶಿವರಂಜನ್ ಸತ್ಯಂಪೇಟೆ ಸಂಪಾದಿತ `ಹೊನ್ನ ನೇಸರ’ ಸ್ಮರಣ ಸಂಚಿಕೆಯನ್ನು ರಾಜ್ಯ ವಿಧಾನ ಪರಿಷತ್ ಸದಸ್ಯ ಡಾ. ಬಿ.ಜಿ. ಪಾಟೀಲ್ ಅವರು ಬಿಡುಗಡೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಅಂದು ಬೆಳಿಗ್ಗೆ 11.30ಕ್ಕೆ ಜನಪರ ಹೋರಾಟಗಾರ್ತಿ ಸೋನುಬಾಯಿ ಜೆ. ಕೋಣಿನ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಗೋಷ್ಠಿಯಲ್ಲಿ ಜಿಲ್ಲೆಯ ತತ್ವಪದಕಾರರು ವಿಷಯದ ಕುರಿತು ಸಿಂಡಿಕೇಟ್ ಸದಸ್ಯ ಡಾ. ಧರ್ಮಣ್ಣ ಕೆ. ಬಡಿಗೇರ್, ನೈತಿಕ ಬದುಕೆ-ನೈಜ ಬದುಕು ವಿಷಯದ ಕುರಿತು ಸಾಹಿತಿ ಸಿ.ಎಸ್. ಆನಂದ್ ಅವರು ಮಾತನಾಡಲಿದ್ದಾರೆ. ಅನೇಕ ಕವಿ-ಸಾಹಿತಿಗಳು, ಪ್ರಮುಖರು ಉಪಸ್ಥಿತರಿರುವರು. ಮಧ್ಯಾಹ್ನ 1 ಗಂಟೆಗೆ ನಡೆಯುವ ಸಮ್ಮೇಳನಾಧ್ಯಕ್ಷರ ಬದುಕು-ಬರಹದ ಕುರಿತು ಕಾಳಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಶಿವಶರಣಪ್ಪ ಮೋತಕಪಳ್ಳಿ ಅವರು ಮಾತನಾಡಲಿದ್ದಾರೆ ಎಂದು ಅವರು ಹೇಳಿದರು.
ಮಧ್ಯಾಹ್ನ 2 ಗಂಟೆಗೆ ಹಿರಿಯ ಸಾಹಿತಿ ಶಿವಕವಿ ಜೋಗೂರ್ ಅವರ ಅಧ್ಯಕ್ಷತೆಯಲ್ಲಿ ಜರುಗಲಿರುವ ಕವಿಗೋಷ್ಠಿಯಲ್ಲಿ ಲೇಖಕ ಡಾ. ರಾಜಶೇಖರ್ ಮಾಂಗ್ ಅವರು ಆಶಯ ನುಡಿಗಳನ್ನಾಡಲಿದ್ದು, ಪರಿಷತ್ ತಾಲ್ಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಸಿ.ಎಸ್. ಮಾಲಿಪಾಟೀಲ್ ಅವರು ಉಪಸ್ಥಿತರಿರುವರು. ಅನೇಕ ಹಿರಿಯ-ಕಿರಿಯ ಕವಿಗಳು ತಮ್ಮ ಸ್ವ ರಚಿತ ಕವನಗಳು ವಾಚಿಸಲಿದ್ದಾರೆ. ಮಧ್ಯಾಹ್ನ 4ಕ್ಕೆ ನಡೆಯುವ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವನ್ನು ಹಾಗರಗುಂಡಗಿ ವಿರಕ್ತ ಮಠದ ಶಿವಾನಂzದ್ ದೇವರು, ಹೊನ್ನಕಿರಣಗಿ ಕೂಡಲೂರು ಬಸವಲಿಂಗೇಶ್ವರ್ ಮಠದ ಡಾ. ಶಿವರಾಜಪ್ಪ ಅಪ್ಪ ಅವರು ವಹಿಸಲಿದ್ದಾರೆ. ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ್ ಅವರು ಅಧ್ಯಕ್ಷತೆ ವಹಿಸಲಿದ್ದು, ಪ್ರಸಿದ್ಧ ಚಿತ್ರಕಲಾವಿದ ಡಾ. ವಿ.ಜಿ. ಅಂದಾನಿ ಅವರು ನೇತೃತ್ವ ವಹಿಸಲಿದ್ದಾರೆ. ಅನೇಕ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸಮಾಜದ ವಿವಿಧ ರಂಗಗಳಲ್ಲಿ ವಿಶೇಷ ಕೊಡುಗೆ ನೀಡುತ್ತಿರುವ ಶರಣಮ್ಮ ಎಂ., ವಿದ್ಯಾಶ್ರೀ ಬಸ್ತಾಳ್, ಸಂಪತ್ ವಿ. ಪಾಟೀಲ್, ರಾಜಮಹೇಂದ್ರ ಸೂಗೂರ್, ಡಾ. ಗುರುಮೂರ್ತಿ ಆರ್. ಬಡಿಗೇರ್, ಡಾ. ಅಂಬಾರಾಯ್ ರುದ್ನೂರ್, ಡಾ. ಎಸ್.ಎಸ್. ಪಾಟೀಲ್, ಡಾ. ವಿನೋದ್ ಕೌಲಗಿ, ಡಾ. ದತ್ತು ಜೋಶಿ, ಲಾಲಬಾ ಜಮಾದಾರ್, ಕಲ್ಲಪ್ಪ ಪ್ಯಾಟಿ ಫಿರೋಜಾಬಾದ್, ಸುಧೀರ್ ಮಂಗಾಣಿ, ಮಲ್ಲಿಕಾರ್ಜುನ್ ಧೂಳಬಾ, ಮಲ್ಲಿಕಾರ್ಜುನ್ ಪೂಜಾರಿ ಹಾಗರಗುಂಡಗಿ, ಶಿವಾನಂದ್ ಹಾಗರಗುಂಡಗಿ, ಸದಾಶಿವ ಹರಳಯ್ಯ, ಅಶೋಕ್ ಕಂತೆಗೋಳ್, ಧರ್ಮಣ್ಣ ಚಿಂಚೋಳಿ, ಸಿದ್ದಪ್ಪ ಬಂಡಿ, ಸಿದ್ರಾಮಯ್ಯ ಮಠಪತಿ, ಗಂಗಾಬಾಯಿ ಅಂದಾನಿ, ಗಂಗಾಬಯಿ ಪರೀಟ್, ಪ್ರಕಾಶ್ ಸರಡಗಿ, ಶಿವರಾಯ್ ಹಡಪದ, ಸಿದ್ದಪ್ಪ ಬೂಸಾ, ಸಿದ್ದಪ್ಪ ಪರೀಟ್, ಶರಣಪ್ಪ ಅಂದಾನಿ ಅವರನ್ನು ವಿಶೇಷವಾಗಿ ಸತ್ಕರಿಸಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶರಣಬಸಪ್ಪ ನರೂಣಿ, ತಾಲ್ಲೂಕು ಘಟಕದ ಗೌರವ ಕಾರ್ಯದರ್ಶಿಗಳಾದ ವಿಶ್ವನಾಥ್ ತೊಟ್ನಳ್ಳಿ, ಮೋನಪ್ಪ ಕೆ.ಬಡಿಗೇರ್, ಪ್ರಭವ್ ಪಟ್ಟಣಕರ್, ಕವಿತಾ ಕಾವಳೆ, ಮಲ್ಲಿಕಾರ್ಜುನ್ ಇಬ್ರಾಹಿಂಪುರ, ಶಿವಶರಣ ಪರಪ್ಪಗೋಳ್ ಮುಂತಾದವರು ಉಪಸ್ಥಿತರಿದ್ದರು.