ಹೊನ್ಕಲ್ ಸಾಹಿತ್ಯ ಸೇವೆಗೆ ಗೌರವ ಪುರಸ್ಕಾರ

ಕಲಬುರಗಿ,ಫೆ.23-ಉತ್ತರ ಪ್ರದೇಶದ ಲಕ್ನೋದ ಕೈಲಾಸನಾಥ ಭಾಗನ ರಾಯ್ ಉಮ್ ನಾಥ್ ಬಾಲಿ ಅಡಿಟೋರಿಯಂನಲ್ಲಿ ಫೆ.25 ರಂದು ಬೆಳಿಗ್ಗೆ 10.30ಕ್ಕೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ನಡೆಯಲಿರುವ 19ನೇ ರಾಷ್ಟ್ರೀಯ ಕನ್ನಡ ಸಂಸ್ಕøತಿ ಸಮ್ಮೇಳನದಲ್ಲಿ ಲೇಖಕ ಸಿದ್ಧರಾಮ ಹೊನ್ಕಲ್ ಸೇರಿದಂತೆ ವಿವಿಧ ಕ್ಷೇತ್ರದ ನಾಲ್ವರು ಸಾಧಕರಿಗೆ ಗೌರವ ಪುರಸ್ಕಾರ ನೀಡಲಾಗುತ್ತಿದೆ.
ಕವಿ ಚೆನ್ನವೀರ ಕಣವಿ ವೇದಿಕೆಯಲ್ಲಿ, ಸಮ್ಮೇಳನದ ಸರ್ವಾಧ್ಯಕ್ಷರಾದ ಹಿರಿಯ ಲೇಖಕ ಸಂಗಮೇಶ ಬಾದವಾಡಗಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮ್ಮೇಳನವನ್ನು ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಸಚಿವÀ ಶಿವರಾಜ ತಂಗಡಗಿಯವರು ಉದ್ಘಾಟಿಸಲಿದ್ದಾರೆ. ನಂತರ ಸಾಹಿತ್ಯ ಕ್ಷೇತ್ರದ ಅಪಾರ ಸಾಧನೆ ಪರಿಗಣಿಸಿ ಲೇಖಕ ಸಿದ್ಧರಾಮ ಹೊನ್ಕಲ್ ಅವರು ಒಳಗೊಂಡಂತೆ ವಿವಿಧ ಕ್ಷೇತ್ರಗಳ ನಾಲ್ವರು ಸಾಧಕರಿಗೆ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಇದೇ ವೇದಿಕೆದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಹಿರಿಯ ಲೇಖಕ ಸಂಗಮೇಶ ಬಾದವಾಡಗಿ ಅವರ ಬದುಕು ಬರಹ ಕುರಿತು ಲೇಖಕ ಸಿದ್ಧರಾಮ ಹೊನ್ಕಲ್ ಮಾತನಾಡಲಿದ್ದಾರೆ.
ಲಕ್ನೋದ ಕನ್ನಡ ಸಂಘದ ಅಧ್ಯಕ್ಷ ಬಾಲು ಕೆಂಚಪ್ಪ, ಕಾರ್ಯದರ್ಶಿ ಸಂಜೀವ ನಾಯಕ ಹಾಗೂ ಹೃದಯವಾಹಿನಿ ಕರ್ನಾಟಕ ಮಂಗಳೂರು ಪತ್ರಿಕೆಯ ಸಂಪಾದಕರಾದ ಮಂಜುನಾಥ ಮತ್ತು ಉತ್ತರ ಪ್ರದೇಶದಲ್ಲಿರುವ ಕನ್ನಡಿಗರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.