ಹೊನ್ಕಲ್ ಕೃತಿಗೆ ಕಾವ್ಯ ಮಾಣಿಕ್ಯ ರಾಜ್ಯ ಪ್ರಶಸ್ತಿ

ಕಲಬುರಗಿ,ನ.18-ಹಾಸನದ ಮಾಣಿಕ್ಯ ಪ್ರಕಾಶನ ಪ್ರತಿ ವರ್ಷ ಕೊಡಮಾಡುವ 2021ನೇ ಸಾಲಿನ ಕಾವ್ಯ ಮಾಣಿಕ್ಯ ರಾಜ್ಯ ಪ್ರಶಸ್ತಿಗೆ ಯಾದಗಿರಿಯ ಹಿರಿಯ ಕವಿ ಸಿದ್ಧರಾಮ ಹೊನ್ಕಲ್ ಅವರ “ನಿನ್ನ ಪ್ರೇಮವಿಲ್ಲದೇ ಸಾಕಿ” (ಎರಡು ಸಾವಿರ ರೂ ನಗದು, ಪ್ರಶಸ್ತಿ ಹಾಗೂ ಪ್ರಕಾಶನದ ಗೌರವ ಸನ್ಮಾನ) ಆಯ್ಕೆಯಾಗಿದೆ ಎಂದು ಪ್ರಕಾಶಕಿ ದೀಪಾ ಉಪ್ಪಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ತಿಂಗಳು 28 ರಂದು ಹಾಸನದ ಸಂಸ್ಕೃತ ಭವನದಲ್ಲಿ ನಡೆಯಲಿರುವ ಪ್ರಕಾಶನದ ಐದನೇ ವರ್ಷದ ವಾರ್ಷಿಕೋತ್ಸವ ಹಾಗೂ ರಾಜ್ಯ ಮಟ್ಟದ ಕವಿಕಾವ್ಯ ಸಂಭ್ರಮದಲ್ಲಿ ಪ್ರಶಸ್ತಿ ಪ್ರದಾನÀ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.