ಹೊನಿಗೇರಾ: ಕೋವಿಡ್ ಜನಜಾಗೃತಿ ಕಾರ್ಯಕ್ರಮ ಯಶಸ್ವಿ

ಯಾದಗಿರಿ: ಡಿ.2:ಗಿರಿನಗರ ಸಾಂಸ್ಸøತಿಕ ಕಲಾವಿದರ ಸಂಘ ಹಾಗೂ ಹೊನಿಗೇರಾ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಕೋವಿಡ್ ಜನಜಾಗೃತಿ ಮೂಡಿಸುವ ಜನಪದ ಸಂಗೀತ ಕಾರ್ಯಕ್ರಮ ಹೊನಿಗೇರಾ ಗ್ರಾಮದಲ್ಲಿ ಮಂಗಳವಾರ ಜರುಗಿತು.
ಹೊನಿಗೇರಾ ಗ್ರಾಪಂ ಅಧ್ಯಕ್ಷ ಮವ್ಮತಾ ಸಾಯಿಬಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸೊಪ್ಪಿಮಠದ ಶ್ರೀ ಚೆನ್ನವೀರ ದೇವರು ಸಾನ್ನಿಧ್ಯ ವಹಿಸಿದ್ದರು. ಅದ್ಯಕ್ಷತೆಯನ್ನು ಗಿರಿನಗರ ಸಾಂಸ್ಸøತಿಕ ಕಲಾವಿದರ ಸಂಘದ ಅಧ್ಯಕ್ಷ ಶಂಕರಶಾಸ್ತ್ರಿ ವಹಿಸಿದ್ದರು.

ಈಶಪ್ಪ ಬಸವರಾಜಪ್ಪ, ಶರಣಪ್ಪ ಸಾಬಣ್ಣ, ರೇಣುಕಾ ಸಹಾದೇವಪ್ಪ, ಮಲ್ಲಿಕಾರ್ಜುನ ಬಂದಳ್ಳಿ, ಜಲಾಲ್ ಸಾಬ, ಸಾಬಣ್ಣ ಗುಡೆಬಲ್ಲೂರು, ಈಶಪ್ಪ ಸಾಹುಕಾರ, ಇನ್ನಿತರರು ಇದ್ದರು.

ನಂತರ ಸ್ವಚ್ಛ ಭಾರತ ಹಾಗೂ ಕೋವಿಡ್-19 ಹಾಗೂ ಪರಿಸರದ ಬಗ್ಗೆ ಜನ ಜಾಗೃತಿ ಮೂಡಿಸುವ ಜಾನಪದ ಸಂಗೀತ ಕಾರ್ಯಕ್ರಮ ಜರುಗಿತು.