ಹೊನವಾಡ ಎಂದರೇ ಬಂಗಾರದಂತಹ ಮನಸ್ಸು ಇರುವ ಊರು

ತಿಕೋಟಾ, ಜ.7-ಹೊನ್ನ ಅಂದರೇ ಬಂಗಾರವಾಡ ಎಂದರೇ ಜನ ವಸತಿ ಪ್ರದೇಶ ಹೊನವಾಡ ಎಂದರೇ ಬಂಗಾರದಂತಹ ಮನಸ್ಸು ಇರುವ ಊರು ಎಂದು ವಿಜಯಪುರ ಜ್ಞಾನ ಯೋಗ ಆಶ್ರಮದ ಪೂಜ್ಯ ಸಿದ್ದೇಶ್ವರ ಶ್ರೀಗಳು ಹೇಳಿದರು
ಅವರು ಸೋಮವಾರ ತಾಲೂಕಿನ ಹೊನವಾಡ ದ ಜೈ ಹನುಮಾನ ಸ್ಟೋರ್ಸ್ ಪ್ರಾರಂಭೋತ್ಸವ ಸಮಾರಂಭದಲ್ಲಿ ಮಾತನಾಡಿ ಬೇರೆಯವರನ್ನು ಕಂಡಾಗ ಸಂತೋಷ ಪಡಬೇಕು ಮೈ ಬಂಗಾರ ಆಗಬಾರದು ಮನಸ್ಸು ಬಂಗಾರ ಆಗಬೇಕು ಬಿಸಿ ನೀರಿನಲ್ಲಿ ಕಣ್ಣಿಗೆ ಬೆಂಕಿ ಕಾಣುವುದಿಲ್ಲ ಮಾವಿನ ಸಸಿಯಲ್ಲಿ ರಸ ಕಾಣುವುದಿಲ್ಲ ನಮ್ಮ ಎದೆಯ ಭಾವ ಜಲದ ತುಂಬೆಲ್ಲ ದೇವರ ನಿಲುವಿದೆ ನಮ್ಮ ಮನಸ್ಸನ್ನು ಚನ್ನಾಗಿತ್ತುಕೊಂಡಿರಬೇಕು ನಮ್ಮ ಹೃದಯ ಸುಂದರವಾಗಿರಬೇಕು ಆಗ ದೇವರು ಬಂದು ವಾಸ ಮಾಡುತ್ತಾನೆ ಎಂದು ವಿವರಿಸಿದರು.
ಯುವಕರು ಚನ್ನಾಗಿ ದುಡಿಯಬೇಕು ಮನೆ ಶ್ರೀಮಂತ ಆಗಬೇಕು ಜೊತೆಗೆ ಮನಸ್ಸು ಶ್ರೀಮಂತ ಆಗಬೇಕು ಜೊತೆಗೆ ಯುವಕರಿಗೆ ಕುಡಿತ, ತಿನ್ನುವುದು, ಸೇದುವುದು ಹಾಗೂ ಆಡುವುದು ಎಂಬ ನಾಲ್ಕು ಚಟಗಳು ಇರಬಾರದು ಎಂದು ಕಿವಿ ಮಾತು ಹೇಳಿದರು.
ತಿಕೋಟಾ ವಿರಕ್ತ ಮಠದ ಚನ್ನ ಮಲ್ಲಿಕಾರ್ಜುನ ಸ್ವಾಮಿಗಳು, ಚಡಚಣ ದ ಯೋಗಾನಂದ ಸ್ವಾಮಿಗಳು ನಾಗಠಾಣ ದ ಗುರುಲಿಂಗ ಸ್ವಾಮಿಗಳು ಶಿವಣಗಿ ಯ ಶಿವಲಿಂಗ ಸ್ವಾಮಿಗಳು ರೇ.ಸಿ.ಪಾಟೀಲ ಲಕ್ಕುಂಡಿಮಠ ತಾಲೂಕ ಕ ಸಾ ಪ ಅಧ್ಯಕ್ಷ ಸೋಮಶೇಖರ ದಾ. ಜತ್ತಿ ಮುಂತಾದವರು ಇದ್ದರು.
ಸಿದ್ದಣ್ಣ ಮಂಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿ ಸಿದ್ದೇಶ್ವರ ಶ್ರೀಗಳು ಶಂಕರಾಚಾರ್ಯರು ಬುದ್ಧ ಹಾಗೂ ಬಸವಣ್ಣ ಈ ಮೂರು ವ್ಯಕ್ತಿಗಳ ಸಂಗಮ ದಂತೆ ಇದ್ದಾರೆ ಅವರ ಸ್ಪರ್ಶದಿಂದ ಈ ನೆಲ ಪಾವನವಾಯಿತು ಎಂದು ಹೇಳಿದರು. ಬಾಪುರಾಯ ದೇವನಾಯಕ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.