ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ

ಶಿಡ್ಲಘಟ್ಟ,ಮಾ,೧೨:ಇದೇ ಮೊದಲ ಬಾರಿಗೆ ನಮ್ಮ ಗ್ರಾಮದಲ್ಲಿ ಗ್ರಾಮೀಣ ಮಟ್ಟದ ಕ್ರೀಡೆಯನ್ನು ಆಯೋಜಿಸಿರುವ ಯುವಕರಿಗೆ ಅಭಿನಂದನೆಗಳು ಯುವಕರು ಕೆಟ್ಟ ಚಟಗಳಿಗೆ ದಾಸ್ಯರಾಗದೇ ಕ್ರೀಡೆಗೆ ಉತ್ತೇಜನ ನೀಡುತ್ತಿರುವುದಕ್ಕೆ ಬಹಳ ಸಂತೋಷ ಆಗುತ್ತಿದೆ. ಕ್ರೀಡಾ ಪಟುಗಳು ಮುಂದಿನ ದಿನಗಳಲ್ಲಿ ನಮ್ಮ ಗ್ರಾಮದ ಯುವಕರು ಮಾತ್ರ ಟೂರ್ನಮೆಂಟ್ ಆಯೋಜನೆ ಮಾಡಿಕೊಂಡು ಹಾಡಿದರೆ ಚೆನ್ನಾಗಿರುತ್ತದೆ. ಎಂದು ಶಿಕ್ಷಕ ಶ್ರೀನಿವಾಸ್ ಕಿವಿ ಮಾತು ಹೇಳಿದರು.
ತಾಲ್ಲೂಕಿನ ಗೊರಮಡಗು ಗ್ರಾಮದ ಯುವಕರು ಆಯೋಜನೆ ಮಾಡಲಾಗಿದ್ದ ಗೊರಮಡಗು ಪ್ರೀಮಿಯರ್ ಲೀಗ್ ವಾಲಿಬಾಲ್ ಟೂರ್ನಮೆಂಟ್ ಅನ್ನು ಮಹಾಶಿವರಾತ್ರಿಯ ಹಬ್ಬದ ಪ್ರಯುಕ್ತ ಗ್ರಾಮ ಮಟ್ಟದ ವಾಲಿಬಾಲ್ ಪಂದ್ಯಾವಳಿಗಳನ್ನು ಗಣ್ಯ ವ್ಯಕ್ತಿಗಳು ಉದ್ಘಾಟಿಸಿದರು.
ವಕೀಲರು ನಾಗರಾಜ್ ಮಾತನಾಡಿ ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿರುವ ದಿನಗಳಲ್ಲಿ ನಮ್ಮ ಗ್ರಾಮದ ಯುವಕರು ವಾಲಿಬಾಲ್ ಮಾತ್ರವಲ್ಲದೆ ಗ್ರಾಮೀಣ ಕ್ರೀಡೆಗಳಾದ ಕಬ್ಬಡ್ಡಿ , ಕೋಕೋ, ಕ್ರಿಕೆಟ್, ಕುಸ್ತಿ ಪಂದ್ಯಗಳು ಸಹ ಆಡಿದರೆ ಉತ್ತಮ ಅದಕ್ಕೆ ಏನೇ ಸಹಾಯ ಸಹಕಾರ ಬೇಕಿದ್ದರು ನಾವು ಮಾಡುತ್ತೇವೆ ಎಂದರು.
ಟೂರ್ನಮೆಂಟ್ ನಡೆಯಲು ಮುಖ್ಯ ಕಾರಣೀಭೂತರಾದ ಶಿಕ್ಷಕರಾದ ಶ್ರೀನಿವಾಸ್, ವಕೀಲ ರಾಮಕೃಷ್ಣ, ನಾಗರಾಜ್, ಪತ್ರಕರ್ತ ಮೈತ್ರಿ ಲೋಕೇಶ್, ಪೋಲಿಸ್ ಪೇದೆ ಪೂಜಪ್ಪ ರವರಿಗೆ ಸನ್ಮಾನ ಮಾಡಿ ಗೌರವ ಸೂಚಿಸಿದ ಕ್ರೀಡಾ ಪಟುಗಳು.
ಪಂದ್ಯಾವಳಿಗಳು ನಡೆಯುವಾಗ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಆಗಿ ಗ್ರಾಮದ ಯುವಕರು ಕಟ್ಟುನಿಟ್ಟಿನ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾಮದ ಮುನಿನಾರಾಯಸ್ವಾಮಿ, ನಾರಾಯಣಸ್ವಾಮಿ, ಶ್ರೀನಿವಾಸ್, ನಾಗರಾಜ್, ರಾಮಕೃಷ್ಣ, ಶಿವರಾಜ್ ಅಣ್ಣಾಬಾಂಡ್,ಡೀಶ್ ಮಂಜುನಾಥ್,ಮುನಿತಿರುಮಳಪ್ಪ,ಮುಖಂಡರು ಪ್ರೇಕ್ಷಕರು ಹಾಗೂ ಕ್ರೀಡಾ ಅಭಿಮಾನಿಗಳು ಭಾಗವಹಿಸಿದ್ದರು.