ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ

(ಸಂಜೆವಾಣಿ ವಾರ್ತೆ)
ನವಲಗುಂದ,ಜ20 : ಇತಿಹಾಸವಿರುವ ಭಾರತದ ದೇಸೀ ಕ್ರೀಡೆ ಕಬಡ್ಡಿ ಈಗಿನ ಪೀಳಿಗೆಗೆ ಪ್ರಿಯವಾಗಿದ್ದು, ಹೊನಲು ಬೆಳಕಿನ ಕಬಡ್ಡಿ ಪಂದ್ಯವೆಂದರೆ ಈಗಲೂ ಗ್ರಾಮೀಣ ಭಾರತೀಯರಿಗೆ ಅತ್ಯಂತ ಅಚ್ಚುಮೆಚ್ಚು. ಇಂತಹ ಮಹತ್ವದ ಭಾರತೀಯ ಕ್ರೀಡೆಯನ್ನು ಉಳಿಸಿ ಬೆಳೆಸುತ್ತಿರುವ ನಮ್ಮ ಕ್ಷೇತ್ರದ ಕಬಡ್ಡಿ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಪೆÇ್ರೀತ್ಸಾಹಿಸಲು ನಾವು ಸಂಸದ ಕ್ರೀಡಾ ಮಹೋತ್ಸವವನ್ನು ಆಯೋಜಿಸುವ ಮಹತ್ಕಾರ್ಯದಲ್ಲಿ ತೊಡಗಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು

ಶಂಕರ ಕಾಲೇಜು ಮೈದಾನದಲ್ಲಿ ನಡೆಯುತ್ತಿ ರುವ ವಿಧಾನಸಭಾ ಕ್ಷೇತ್ರ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾ ವಳಿ ಉದ್ಘಾಟಿಸಿ ಮಾತನಾಡಿದ ಅವರು ಯುಪಿಎ ಸರ್ಕಾರದ ಕಾಲದಲ್ಲಿ ವಿಶ್ವದಲ್ಲಿಯೇ ಅಶಕ್ತ ರಾಷ್ಟ್ರವಾಗಿದ್ದ ಭಾರತವನ್ನು ಪ್ರಧಾನಿ ಮೋದಿಯವರ 10 ವರ್ಷಗಳ ಆಡಳಿತ ಅವಧಿಯಲ್ಲಿ ದೇಶದ ನಿವಾಸಿಗಳಿಗೆ ಎಲ್ಲ ಸೌಲಭ್ಯ ಒದಗಿಸುವ ಮೂಲಕ ವಿಶ್ವದಲ್ಲಿಯೇ 3ನೇ ಸ್ಥಾನದಲ್ಲಿದೆ. ಭಾರತ ಬರುವ 15 ವರ್ಷಗಳಲ್ಲಿ ವಿಶ್ವದ ನಂ.1 ರಾಷ್ಟ್ರವಾಗಿ ಫಿಟನೆಸ್ ಜತೆಗೆ ವಿಜೃಂಭಿಸಲಿದೆ ಎಂದರು.

ದೇಶ ಫಿಟನೆಸ್ ಆಗಬೇಕಾದರೆ ಯುವ ಕರು ತಮ್ಮ ಬುದ್ದಿಮತ್ತೆಯ ಜತೆಗೆ ಗ್ರಾಮೀಣ ಕ್ರೀಡೆಗಳನ್ನು ಅಳವಡಿ ಸಿಕೊಳ್ಳಬೇಕು. ಮುಂಬರುವ ದಿನಗ ಳಲ್ಲಿ ದೇಶ ಶಾಂತವಾಗಿ ಇರಲು ಉಗ್ರಗಾ ಮಿಗಳನ್ನು, ಸಂಪೂರ್ಣವಾಗಿ ನಿರ್ನಾಮ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಪಾಕಿಸ್ಥಾನದ ಆರ್ಭಟ ಈಗ ಕಡಿಮೆಯಾಗಿದೆ. ಕಿತಾಪತಿ ಮಾಡಿದರೆ ಒಳಹೊಕ್ಕು ಹೊಡೆಯುವ ಶಕ್ತಿ ಸರ್ಕಾರಕ್ಕೆ ಇದೆ ಎಂದರು.

ಇದಕ್ಕೂ ಮೊದಲು ಕಬಡ್ಡಿ ಆಟವಾ ಡುವ ಮೂಲಕ ಎರಡು ವಿಕೆಟ್ ಪಡೆದು ಯುವಕರಲ್ಲಿ ಕ್ರೀಡಾ ಉತ್ಸಾಹ ತುಂಬಿದರು. ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ನಶಿಸಿ ಹೋಗು ತ್ತಿರುವ ದೇಶಿ ಕ್ರೀಡೆಗಳನ್ನು ಉಳಿಸಿ ಪೆÇ್ರೀತ್ಸಾಹಿಸುತ್ತಿರುವ ಸಚಿವರ ಪ್ರಯತ್ನ ಶ್ಲಾಘನೀಯ. ವಿದ್ಯಾರ್ಥಿ ದೆಸೆಯಿಂದಲೇ ಪಠ್ಯದ ಜತೆಗೆ ದೇಶಿ ಆಟಗಳನ್ನು ಮೈಗೂ ಡಿಸಿಕೊಂಡರೆ ಪ್ರತಿಯೊಬ್ಬರೂ ಸಧೃಡ ಆರೋಗ್ಯ ಪಡೆಯಬಹುದು ಎಂದರು.

ಎರಡು ದಿನಗಳವರೆಗೆ ನಡೆಯುವ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ನೂರಕ್ಕು ಹೆಚ್ಚು ತಂಡಗಳು ಭಾಗಿಯಾಗಿದ್ದವು.

ಮಾಜಿ ಸಚಿವ ಕೆ.ಎನ್.ಗಡ್ಡಿ, ಮಾತನಾಡಿದರು. ಶಾಸಕ ಮಹೇಶ್ ಟೆಂಗಿನಕಾಯಿ, ಎಂ.ಆರ್.ಪಾಟೀಲ್, ಮಾಜಿ ಶಾಸಕ ಡಾ.ಆರ್.ಬಿ.ಶಿರಿಯಣ್ಣವ್ವರ, ನಾಗರಾಜ್ ಛಬ್ಬಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ನಾಗಪ್ಪ ಸಂಕದ, ಸಿದ್ದನಗೌಡ ಪಾಟೀಲ್, ಬಸವರಾಜ್ ಕುಂದಗೋಳಮಠ, ಷಣ್ಮುಖ ಗುರಿಕಾರ, ಎ.ಬಿ.ಹಿರೇಮಠ, ಪ್ರಭು ಇಬ್ರಾಹಿಂಪುರ, ಸಂತೋಷ ಜೀವನಗೌಡ್ರ, ನಿಂಗಪ್ಪ ಬಾರಕೇರ, ಸುರೇಶ ಗಾಣಗೇರ, ಶಿವಶಂಕರ ಕಲ್ಲೂರ, ಪ್ರಕಾಶ್ ಅಂಗಡಿ, ಅಡಿವೆಪ್ಪ ಮನಮಿ, ಶಂಕರಗೌಡ ರಾಯನಗೌಡ್ರ, ಬಿ.ಬಿ.ಗಂಗಾಧರಮಠ, ಪವನ ಪಾಟೀಲ, ಅಣ್ಣಪ್ಪ ಬಾಗಿ, ಸುರೇಶ ಬಣವಿ ಇತರರು ಇದ್ದರು.