ಹೊನಲು ಬೆಳಕಿನ ಅಂತರಾಜ್ಯ ಮಟ್ಟದ ಕಬಡ್ಡಿ ಆಯೋಜನೆ

ವಿಜಯಪುರ, ನ.23-ನಗರದ ಡಾ. ಬಿ.ಆರ್. ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದಲ್ಲಿ ಲೊಯೊಲಾ ಸ್ಪೋಟ್ರ್ಸ್ ಅಕಾಡೆಮಿ, ಆರ್ಮಿ ಕೋಚಿಂಗ್ ಸೆಂಟರ್ ಇವರ ಆಶ್ರಯದಲ್ಲಿ ದಿ. ಪುನೀತ ರಾಜಕುಮಾರ ಇವರ ಸ್ಮರಣಾರ್ಥವಾಗಿ 2 ದಿನಗಳ ಹೊನಲು ಬೆಳಕಿನ 65ಕೆ.ಜಿ. ಅಂತರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ಅತ್ಯಂತ ರೋಚಕವಾಗಿ ಜರುಗಿ ಕ್ರೀಡಾ ಪ್ರೇಮಿಗಳಿಗೆ ರಸದೌತಣ ನೀಡಿದವು.
ಇಂದು ನಡೆದ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರದ ಕೋಲಾಪುರ ತಂಡ ಬಾಗಲಕೋಟ ಜಿಲ್ಲೆಯ ತೆರದಾಳ ತಂಡವನ್ನು 19-14 ಅಂತರದಿಂದ ಗೆಲುವು ಸಾದಿಸಿ ಪ್ರಥಮ ಸ್ಥಾನ ಪಡೆಯಿತು. 25,000 ನಗದು ಟ್ರಾಫಿ ಪ್ರಶಸ್ತಿ ಪತ್ರ ನೀಡಲಾಯಿತು. 2ನೇ ಸ್ಥಾನ ತೆರದಾಳ ತಂಡ 15,000 ನಗದು ಪ್ರಶಸ್ತಿ ಪತ್ರ, ತೃತೀಯ ಸ್ಥಾನ ವಿಜಯಪುರ ಜಿಲ್ಲೆಯ ಲಚ್ಯಾಣ ತಂಡ 10,000 ನಗದು ಪ್ರಶಸ್ತಿ, ಚತುರ್ಥ ಸ್ಥಾನ ವಿಜಯಪುರ ಜಿಲ್ಲೆಯ ಬಬಲೇಶ್ವರ ತಂಡ 5,000 ನಗದು ಪ್ರಶಸ್ತಿ ಪತ್ರ ನೀಡಿ ವಿಜೇತ ತಂಡಗಳಿಗೆ ಗೌರವಿಸಲಾಯಿತು.
ಈ ¥ಂದ್ಯಾವಳಿಯಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರದ 40 ತಂಡಗಳು ಭಾಗವಹಿಸಿದ್ದವು.
ವೇದಿಕೆಯಲ್ಲಿ ಆಲ್ ಇಂಡಿಯಾ ಬಂಜಾರಾ ಸಮಾಜದ ಜಿಲ್ಲಾ ಅಧ್ಯಕ್ಷ ರಾಜು ಜಾಧವ, ಸಮಾಜ ಸೇವಕ ಶಹಜಾನ ಮುಲ್ಲಾ, ಗುತ್ತಿಗೆದಾರ ಅಜೀಮ ಭಕ್ಷಿ, ಯುವಮುಖಂಡರಾದ ಫಜಲ್‍ಅಹ್ಮದ ಬಾಗಲಕೋಟ, ಕದೀರ ಸೈಯದ, ಅಬುಬಕರ ಅಂಬಾರಖಾನೆ, ಶಿವಶಂಕರ ಕನ್ನಾಳ, ಸಲಾವುದ್ದೀನ ಮಳಗಿ, ಅಬುಬಕರ ಸಗರ, ಸಚಿನ ರಾಠೋಡ, ಬೀರೇಶ ಕಳ್ಳಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲಿಗೆ ಲೊಯೊಲಾ ಸ್ಪೋಟ್ರ್ಸ್ ಅಕಾಡೆಮಿ ಕಾರ್ಯದರ್ಶಿ ಎಮ್.ಡಿ. ಪೈಗಂಬರ್ ಸ್ವಾಗತಿಸಿದರು. ಸಿದ್ದು ಬಿದರಿ ವಂದಿಸಿದರು.