ಹೊನಟಗಿ ಗ್ರಾಮ ಅಭಿವೃದ್ದಿ ಪಡಿಸದಿದ್ದರೆ ಚುನಾವಣೆ ಬಹಿಷ್ಕಾರ

ರಾಯಚೂರು,ಫೆ.೨೮- ೨೦೧೮-೧೯ ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಆದರ್ಶ ಗ್ರಾಮವೆಂದು ಆಯ್ಕೆಯಾದ ದೇವದುರ್ಗ ತಾಲೂಕಿನ ಹೊನಟಗಿ ಗ್ರಾಮ ಆದರ್ಶ ಗ್ರಾಮವಾಗಲು ಯಾವುದೆ ಕಾಮಗಾರಿ ನಡೆಯದಿರುವುದರಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರಿಸಲು ತೀರ್ಮಾನ ಮಾಡಲಾಗಿದೆ ಎಂದು ಗ್ರಾಮದ ನಿವಾಸಿ ಶಾಂತಕುಮಾರ ಹೊನ್ನಟಗಿ ಹೇಳಿದರು.
ಅವರಿಂದು ನಗರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ದೇಶದ ೭೫ನೇ ವರ್ಷದ ಅಮೃತ ಮಹೋತ್ಸವದ ಆಚರಿಸಿದರು ಮಹಾತ್ಮ ಗಾಂಧೀಜಿಯವರು ಗ್ರಾಮ ಸ್ವರಾಜ್ಯದ ಪರಿ ಕಲ್ಪನೆಯಲ್ಲಿ ಹಳ್ಳಿಗಳ ಸಮಗ್ರ ಅಭಿವೃದ್ಧಿ ದೇಶದ ಅಭಿವೃದ್ಧಿಯೆಂಬ ದೂರು ದೃಷ್ಠಿಯ ಕಲ್ಪನೆಯಿಂದ ಪ್ರಧಾನ ಮಂತ್ರಿ ಆದರ್ಶ ಗ್ರಾಮವೆಂದು ಆಯ್ಕೆಯಾದ ದೇವದುರ್ಗ ತಾಲೂಕಿನ ಗಟ್ಟೂರು ಹೋಬಳಿಯ ಹೇಮನಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಹೊನ್ನಟಗಿ ಗ್ರಾಮ ಬರೀ ಭಾಷಣ ಹಾಗೂ ಆದೇಶಕ್ಕೆ ಮಾತ್ರ ಸೀಮೀತವಾಗಿದೆ ಹೊರತು ಯಾವುದೇ ಅಭಿವೃದ್ದಿ ಆಗಿಲ್ಲ ಎಂದರು.
ಗ್ರಾಮದ ಜನರು ಆರೋಗ್ಯ, ಶಿಕ್ಷಣ, ಹಾಗೂ ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದಾರೆ.
ಜಿಲ್ಲಾಡಳಿತ ಹಾಗೂ ಅನುಷ್ಠಾನ ಮಾಡುವ ಕಾರ್ಯಾಂಗ ಇಲ್ಲಿಯವರೆಗು ಯಾವುದೇ ಕಾಮಗಾರಿ ಕೈಗೊಳ್ಳದೆ ಕಾಲಹರಣ ಮಾಡುವುದು ದುರಂತ ಗ್ರಾಮಸ್ತರ ಆದರ್ಶ ಗ್ರಾಮದ ಕನಸು ಸಮಗ್ರ ಅಭಿವೃದ್ಧಿಯಾಗಿ ನನಸಾಗುವ ಬರವಸೆ ಹುಸಿಯಾಗಿರುವುದರಿಂದ ೨೦೨೩ರಲ್ಲಿ ನಡೆಯುವ ವಿಧಾನ ಸಭೆ ಚುನಾವಣೆ ಒಳಗೆ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡಲು ನಿರ್ಧಾರಿಸಲಾಗುದೆ ಎಂದರು.
ಈ ಸಂದರ್ಭದಲ್ಲಿ ಸೂಗಪ್ಪಗೌಡ, ರೆಡ್ಡಿಪ್ಪಗೌಡ,ಶಾಂತಕುಮಾರ ಹೊನ್ನಟಗಿ, ಹುಲಿಗೆಪ್ಪ ಹೊನ್ನಟಗಿ ಇದ್ದರು.