ಹೊನಗುಂಟ ಗ್ರಾಮಕ್ಕೆ ಬಸ್ ಸೌಲಭ್ಯ ಒದಗಿಸಲು ಆಗ್ರಹ

ಶಹಾಬಾದ,ನ.14-ತಾಲ್ಲೂಕಿನ ಹೊನಗುಂಟ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಶಹಾಬಾದ ಸ್ಥಳೀಯ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಬಸ್ ನಿಯಂತ್ರಣಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು.
ಹೊನಗುಂಟ ಗ್ರಾಮದಿಂದ ನಿತ್ಯ ಹಲವಾರು ವಿದ್ಯಾರ್ಥಿಗಳು ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ ಹಾಗೂ ಸಾವiನ್ಯ ಜನರು ತಮ್ಮ ದಿನ ನಿತ್ಯದ ಕೆಲಸಕ್ಕಾಗಿ ಶಹಾಬಾದ ಪಟ್ಟಣಕ್ಕೆ ಆಗಮಿಸುತ್ತಾರೆ.
ಲಾಕ್ ಡೌನ್ ಮುಗಿದ ನಂತರ ಶಾಲಾ-ಕಾಲೇಜುಗಳು ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಬೇಕಾದ ಅವಶ್ಯಕತೆ ಇದೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಹಾಗೂ ನಗರದ ಬಹುತೇಕ ವಿದ್ಯಾರ್ಥಿಗಳು ಬಸ್ ಮೂಲಕ ಪ್ರಯಣಿಸುತ್ತಾರೆ. ಹೀಗಾಗಿ ವಿದ್ಯಾರ್ಥಿಗಳು ಸರಿಯಾಗಿ ಶೈಕ್ಷಣಿಕ ವಿದ್ಯಾಭ್ಯಾಸ ಮಾಡಬೇಕಾದರೇ ಅವರಿಗೆ ಸಾರಿಗೆ ಅನುಕೂಲ ಪ್ರಮುಖ ಪಾತ್ರ ವಹಿಸುತ್ತದೆ. ಹೊನಗುಂm ಗ್ರಾಮದ ವಿದ್ಯಾರ್ಥಿಗಳು ಅಲ್ಲಿಯೇ ಪ್ರೌಢ ಶಿಕ್ಷಣ ಮುಗಿಸಿಕೊಂಡು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಶಹಾಬಾದ, ಜೇವರ್ಗಿ,ಚಿತ್ತಾಪೂರ, ಕಲಬುರಗಿ ನಗರಕ್ಕೆ ಬರುತ್ತಿದ್ದಾರೆ. ಅವರ ಬಳಿ ಬಸ್ ಪಾಸ್ ಇದ್ದರು ಕೂಡ ಸರಿಯಾದ ಸಮಯಕ್ಕೆ ಬಸ್ ಬಾರದ ಕಾರಣ ಅವರು ಖಾಸಗಿ ವಾಹನಗಳಿಗೆ ದಿನಾಲೂ ಹಣ ಕೊಟ್ಟು ಹೋಗಬೇಕಾಗಿದೆ. ದಿನಾಲೂ ಬಸ್ ಬರುತ್ತಿದ್ದರು ವಿದ್ಯಾರ್ಥಿಗಳಿಗೆ ಅನುಕೂಲವಾಗಿಲ್ಲ. ಬಳಗ್ಗೆ 6:00 ಗಂಟೆಗೆ ಒಂದು ಬಸ್ ಊರಿಂದ ಬಂದರೆ ಮತ್ತೆ 10:00 ಗಂಟೆವರೆಗೂ ಯಾವ ಬಸ್ ಇಲ್ಲ. ಮತ್ತೆ ಮಧ್ಯಾಹ್ನ 3:00 ಗಂಟೆಗೆ ಶಹಾಬಾದದಿಂದ ಬಿಡುತ್ತೆ ವಾಪಸ್ ಹೊಗುವಾಗಲು ಬಸ್ ಸಿಗದೆ ಅನಿರ್ವಾವಾಗಿ ಖಾಸಗಿ ವಾಹನಗಳಿಗೆ ಹೋಗುವ ಪರಿಸ್ಥಿತಿ ಬಂದಿದೆ. ಊರಿನ ನಾಗರಿಕರು ವಿದ್ಯಾರ್ಥಿಗಳು ಬಸ್ ಸಮಸ್ಯೆ ಬಗ್ಗೆ ಹಲಾವಾರೂ ಸಲ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಆದಕಾರಣ ಅಧಿಕಾರಿಗಳು ಇದರ ಬಗ್ಗೆ ಗಮನವಹಿಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸಮಯಕ್ಕೆ ಬಸ್ ಸೌಲಭ್ಯ ಕಲ್ಪಿಸುವಂತೆ ಬಸ್ ನಿಯಂತ್ರಣಾಧಿಕಾರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಬೆಳಗ್ಗೆ 6:00 ಗಂಟೆಗೆ ಹಾಗೂ 8:00 ಗಂಟೆಗೆ ಹೊನಗುಂಟದಿಂದ ಶಹಾಬಾದ ಗೆ ಬಸ್ ಸೌಲಭ್ಯ ಒದಗಿಸಬೇಕು, ಮಧ್ಯಾಹ್ನ 1:30 ಗಂಟಗೆ, 4:30 ಹಾಗೂ ರಾತ್ರಿ 8:00 ಗಂಟಗೆ ಶಹಾಬಾದನಿಂದ ಹೊನಗುಂಟಗೆ ಬಸ್ ಸೌಲಭ್ಯ ಒದಗಿಸಲು ಮನವಿ ಮಾಡಲಾಗಿದೆ.
ಎ.ಐ.ಡಿ.ಎಸ್.ಓ ಜಿಲ್ಲಾ ಸಮಿತಿ ಸದಸ್ಯ ತುಳಜರಾಮ ಎನ್ ಕೆ, ಶಹಾಬಾದ ಅಧ್ಯಕ್ಷÀ ಕಿರಣ್ ಜಿ ಮಾನೆ, ಕಾರ್ಯದರ್ಶಿ ಅಜಯ್ ಎ ಜಿ, ಉಪಾಧ್ಯಕ್ಷÀ ದೇವರಾಜ ಹೊನಗುಂಟ, ವಿದ್ಯಾರ್ಥಿಗಳಾದ ಸಿದ್ದು ಕೊಲೆ, ಭಾಗ್ಯಶ್, ಮೌನೇಶ್,ರಾಕೇಶ್, ಕೃಷ್ಣ, ಮಲ್ಲು, ಇತರರು ಭಾಗವಹಿಸಿದ್ದರು