ಹೊನಗುಂಟಾ ಗ್ರಾಪಂ. ಅಧ್ಯಕ್ಷರಾಗಿ ಮಹಿಬೂಬ ಪಟೇಲ ಆಯ್ಕೆ

ಶಹಾಬಾದ:ಆ.4:ತಾಲೂಕಿನ ಹೊನಗುಂಟಾ ಗ್ರಾಪಂ. ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಮಹಿಬೂಬ ಪಟೇಲ ಆಯ್ಕೆಯಾದರು, ಉಪಾಧ್ಯಕ್ಷರಾಗಿ ಇಂದುಬಾಯಿ ದೇಸಾಯಿ ಅವಿರೋಧವಾಗಿ ಆಯ್ಕೆಯಾದರು. ಚುನಾವಣೆಯಲ್ಲಿ ಒಟ್ಟು 17 ಸದಸ್ಯ ಬಳದ ಗ್ರಾಪಂ.ನಲ್ಲಿ ಮಹಿಬೂಬ ಪಟೇಲ 11 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಶಿವಪ್ಪ ಸಾಬಣ್ಣಾ 6 ಮತಗಳನ್ನು ಪಡೆದರು. ಉಪಾಧ್ಯಕ್ಷ ಸ್ಥಾನ ಅವಿರೋಧವಾಗಿ ಆಯ್ಕೆಯಾಗಿತ್ತು.

ಚುನಾವಣೆ ಆಯ್ಕೆ ಘೋಷಿಸುತ್ತಿದ್ದಂತೆ ಪಟೇಲ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸ, ಸಿಹಿ ಹಂಚಿ ಗ್ರಾಮದ ಪ್ರಮುಖ ಬೀದಿಯಲ್ಲಿ ವಿಜಯೋತ್ಸವ ಅಚರಿಸಿದರು. ಪಕ್ಷದ ಮುಖಂಡರಾದ ಜಿಪಂ.ಮಾಜಿ ಸದಸ್ಯರಾದ ಶಿವಾನಂದ ಪಾಟೀಲ, ಮಲ್ಲಿಕಾರ್ಜುನ ಪೂಜಾರಿ, ಅಜೀಜ ಸೇಠ, ಮುಖಂಡರಾದ ಅಜಿತ ಕುಮಾರ ಪಾಟೀಲ, ಭೀಮಶಂಕರ ಖೇಣಿ, ಮರೆಪ್ಪ ಹಳ್ಳಿ, ಪೀರ ಪಾಶಾ ಹೊನಗುಂಟಾ, ರುದ್ರಗೌಡ ಪಾಟೀಲ, ರಾಜು ಆಡಿನ್, ರಾಜು ಮರಗೋಳ, ದೇವೆಂದ್ರ ಕಾರೊಳ್ಳಿ, ರಾಯಪ್ಪ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.