ಹೊನಗನಹಳ್ಳಿ ಗ್ರಾಮ ಪಂಚಾಯಿತಿ ಹೈಟೆಕ್ ಸ್ಪರ್ಶ

ವಿಜಯಪುರ, ಸೆ.9-ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊನಗನಹಳ್ಳಿ ಗ್ರಾಮ ಪಂಚಾಯತ ಕಾರ್ಯಾಲಯ ಪಂಚಾಯಿತಿ ಪಿಡಿಓ ಅಧಿಕಾರಿಗಳು ತಮ್ಮದೆ ಪರಿಕಲ್ಪನೆಯಲ್ಲಿ ಜನಸ್ನೇಹಿಯಾಗಿ ರೂಪಿಸಿದ್ದಾರೆ. ಒಳಾವರಣವನ್ನು ಬ್ಯಾಂಕಗಳ ಮಾದರಿಯಲ್ಲಿಯೇ ವ್ಯವಸ್ತಿತವಾಗಿ ರೂಪಿಸಲಾಗಿದೆ.
ವಿವಿದ ಕೆಲಸಗಳಿಗಾಗಿ ಪ್ರತಿನಿತ್ಯ ಆಗಮಿಸಿವ ಸಾರ್ವಜನಿಕರು ಪಂಚಾಯಿತಿ ವಿನ್ಯಾಸ ಮಾದರಿಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಚೇರಿಗೆ ಆಗಮಿಸುವ ಜನರಿಗೆ ಆಸನದ ವ್ಯವಸ್ಥೆ ಅಳವಡಿಸಲಾಗಿದೆ. ಪಿಡಿಓ, ಅದ್ಯಕ್ಷ-ಉಪಾಧ್ಯಕ್ಷರಿಗೆ ಸುಸಜ್ಜಿತವಾದ ಪ್ರತ್ಯೇಕ ಕೋಠಡಿಗಳು ಇದ್ದು ಗುಣಮಟ್ಟದ ಆಸನದ ಅಳವಡಿಸಿ ಜನಪ್ರತಿನಿಧಿಗಳಿಗೆ ಗೌರವ ಸ್ಥಾನ ನೀಡಲಾಗಿದೆ. ಪಂಚಾಯಿತಿ ಸಭಾಂಗಣವನ್ನು ಹೈಟೆಕ್ ಮಾಡಿದ್ದು ಸಂಪೂರ್ಣವಾಗಿ ಪಿಓಪಿ ಮಾಡಿಸಲಾಗಿದೆ. ಪ್ರೋಜೆಕ್ಟರ, ಮತ್ತು ಟಿವಿ ಅಳವಡಿಸಿಲಾಗಿದೆ ಸಾಮಾನ್ಯ ಸಭೆ ವಿಶೇಷ ಸಭೆಗಳು ಇನ್ನಿತರ ಸಭೆಗಳು ಕಂಗೊಳಿಸುವಂತಾಗಿದೆ. ಅಮೃತ ಮಹೋತ್ಸವದ ಸವಿನೆನಪಿಗಾಗಿ ಗ್ರಾಮವಿಕಾಸಯೋಜನೆ ಮತ್ತು 15 ನೇ ಹಣಕಾಸಿನ ಯೋಜನೆಯ ಅನುಧಾನ ಬಳಕೆ ಮಾಡಿಕೊಂಡು ರಾಷ್ಟ್ರದ್ವಜದ ಕಟ್ಟೆಯನ್ನು ನಿರ್ಮಾಣಮಾಡಲಾಗಿದೆ.
ಹಸಿರು ಹೊದಿಕೆಯಿಂದ ಆಕರ್ಷನಿಯ ಕೇಂದ್ರಃ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರೀ ಯೋಜನೆ ಅಡಿ ಗ್ರಾಪಂ ಆವರಣದಲ್ಲಿ 748 ಮಾನವದಿನಗಳ ಸೃಜನೆಮಾಡಿ ಸುಮಾರು 09 ಲಕ್ಷ ಅನುಧಾನದಲ್ಲಿ ಸುಂದರವಾದ ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಹಚ್ಚು ಹಸಿರಿನ ಹುಲ್ಲಿನ ಹೊದಿಕೆಯಿಂದ ಗ್ರಾಪಂ ಆವರಣ ನಳನಳಿಸತ್ತಿದೆ.ವಿವಿದ ಜಾತಿಯ ಸಸ್ಯಗಳು ಮತ್ತು ಹೂವಿನ ಗಿಡಗಳನ್ನು ಸಹ ಬೆಳಸಲಾಗಿದೆ. ಆವರಣದಲ್ಲಿ ಪೇವರ್ಸ ಜೋಡಸಿಲಾಗಿದೆ. ಗ್ರಾ.ಪಂ ಮುಂಬಾಗದಲ್ಲಿ ಅಳವಡಿಸಿರುವ ಕಾರಂಜಿಯ ಉದ್ಯಾನ ಎಲ್ಲರ ಆಕರ್ಷಣಿಯ ಕೇಂದ್ರವಾಗಿದೆ. ನರೇಗಾ ಯೋಜನೆ ಅಡಿ ಮಳೆ ನೀರಿನ ಕೊಯ್ಲ ಘಟಕ ಮಾಡಿದ್ದು ಮಳೆನೀರು ಸಂಗ್ರಹಿಸಿ ಉದ್ಯಾನವನಕ್ಕೆ ಬಳಕೆಮಾಡಕೊಳ್ಳಲಾಗುತ್ತಿದೆ.
ಏನೇನು ಅಭಿವೃದ್ದಿಗಳುಃ ಉದ್ಯಾನವನ, ಸಭಾಂಗಣ, ದ್ವಜದ ಕಟ್ಟೆ, ಪೀಟೋಪಕರಣ ಮತ್ತು ಕೌಂಟರಗಳು, ಗ್ರಂಥಾಲಕ್ಕೆ ಕಂಪ್ಯೂಟರ್ ವ್ಯವಸ್ಥೆ, ಸುಜಜ್ಜಿತ ಕಂಪೌಂಡ.

ಗ್ರಾಮ ಪಂಚಾಯಿತಿ ಅಭಿವೃದ್ದಿಗೆ ಸದಸ್ಯರ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ಸಹಾಯಕ ನಿರ್ದೆಶಕರ ಸ್ಫೂರ್ತಿ. ಅಧ್ಯಕ್ಷರ ಮತ್ತು ಆಡಳಿತ ಮಂಡಳಿಯ ಸಹಕಾರದಿಂದ ಪಂಚಾಯಿತಿಗೆ ಹೊಸ ಸ್ಪರ್ಶ ನೀಡಿದ್ದೇವೆ. ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ಬಂದು ಖುಷಿ ವ್ಯಕ್ತಪಡಿಸುತ್ತಿದ್ದಾರೆ.”
ಜಯಶ್ರೀ ಆರ್. ಪವಾರ -ಪಿಡಿಓ ಅಧಿಕಾರಿಗಳು.ಹೊನಗನಹಳ್ಳಿ

ನಮ್ಮ ಗ್ರಾಮ ಪಂಚಾಯಿತಿ ಅಭಿವೃದ್ದಿಮಾಡಬೇಕೆಂಬ ಕನಸು ಇತ್ತು. ನಮ್ಮ ಆಶೆಯದಂತೆ ಅಭಿವೃದ್ದಿ ಪಡಿಸಿದ್ದೆವೆ. ಎಲ್ಲ ಸದಸ್ಯರ ಸಹಕಾರದಿಂದ ಪಂಚಾಯಿತಿಯಲ್ಲಿ ಮೂಲ ಸೌಕರ್ಯ ಕಲ್ಪಿಸಿಲಾಗಿದೆ. ನಮ್ಮಗೆಲ್ಲರಿಗೂ ಹರ್ಷ ತರಿಸಿದೆ.”
ಮಲ್ಲನಗೌಡ. ವಿ ಪಾಟೀಲ್ -ಹೊನಗನಹಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷರು