ಹೊದಿಕೆ, ಆಹಾರ ಪೊಟ್ಟಣ ವಿತರಣೆ


ಹೊಸಪೇಟೆ, ಅ.31: ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಹೆಚ್.ಎನ್. ಮಹಮ್ಮದ್ ಇಮಾಮ್ ನಿಯಾಜಿಯವರು ನಗರದ ದರ್ಗಾ ಮಸೀದಿ ಹಾಗೂ ನಗರದ ವಿವಿಧೆಡೆಯ ನಿರ್ಗತಿಕರಿಗೆ, ಅಂಗವಿಕಲರಿಗೆ ಹಾಗೂ ವೃದ್ದರಿಗೆ ಹೊದಿಕೆ ಹಾಗೂ ಅಹಾರ ಪೊಟ್ಟಣಗಳನ್ನು ವಿತರಿಸಿ ಪ್ರವಾದಿ ಮೊಹಮ್ಮದ್ ಪೈಗಂಬರ್‍ರವರ ಜನ್ಮದಿನವಾದ ಈದ್ ಮಿಲಾದ್ ಹಬ್ಬವನ್ನು ಮಾನವೀಯತೆ ಮೆರೆಯುವುದರ ಮೂಲಕ ವಿಶಿಷ್ಟವಾಗಿ ಆಚರಿಸಿದರು.
ನಂತರ ಮಾತನಾಡಿ, ಇಂದು ಪ್ರವಾದಿ ಮೊಹಮ್ಮದ್ ಪೈಗಂಬರ್‍ರವರ ಜನ್ಮ ದಿನವಾಗಿದ್ದು, ಇಡಿ ವಿಶ್ವದಾದ್ಯಂತ ಕೋವಿಡ್ ಸಾಂಕ್ರಾಮಿಕ ಸೋಂಕು ಹರಡುವ ಭೀತಿ ಇದೆ. ಆದ್ದರಿಂದ ಹಬ್ಬವನ್ನು ಬಹಳ ಸರಳವಾಗಿ ಆಚರಿಸಲಾಗುತ್ತಿದೆ. ಹಬ್ಬದ ಪ್ರಯುಕ್ತ ನಗರದಲ್ಲಿರುವ ಅನೇಕ ನಿರ್ಗತಿಕರಿಗೆ, ವೃದ್ದರಿಗೆ ಹಾಗೂ ಅಂಗವಿಕಲರಿಗೆ ಸುಮಾರು 100ಕ್ಕೂ ಹೆಚ್ಚು ಹೊದಿಕೆ ಹಾಗೂ ಆಹಾರ ಪೊಟ್ಟಣ ವಿತರಿಸಲಾಗಿದೆ ಎಂದರು.
ಮೈ ತುಂಬಾ ಬಟ್ಟೆ, ಒಂದು ಹೊತ್ತಿನ ಊಟಕ್ಕೂ ಪರದಾಡುವವರು ನಮ್ಮ ನಡುವೆ ಇದ್ದು, ಇಂತಹವರಿಗೆ ಜೀವನದಲ್ಲಿ ಭರವಸೆ ಮೂಡಿಸುವ ಒಂದು ಸಣ್ಣ ಪ್ರಯತ್ನ ನಮ್ಮದಾಗಿದೆ. ಪ್ರವಾದಿಗಳ ಸಂದೇಶವಾದ ಶಾಂತಿ, ಸೌಹಾರ್ದತೆಯೊಂದಿಗೆ ನಾವೆಲ್ಲರೂ ಕೂಡಿ ಬಾಳುವ ಮೂಲಕ ದೇಶವನ್ನು ಸಡೃಢವಾಗಿ ಕಟ್ಟೋಣ ಹಾಗೂ ಎಲ್ಲರೂ ಕೋವಿಡ್ ಸೋಂಕನ್ನು ವಿಶ್ವದಿಂದಲೇ ಶೀಘ್ರ ತೊಲಗಲಿ ಎಂದು ಪ್ರಾರ್ಥಿಸೋಣ ಅಲ್ಲದೇ ಕೋವಿಡ್ ನಿಯಮಗಳನ್ನು ಎಲ್ಲರೂ ಪಾಲಿಸಿ ಹಬ್ಬವನ್ನು ಸರಳವಾಗಿ ಅಚರಿಸೋಣ ಎಂದು ಹೇಳಿದರು.
ಈ ವೇಳೆ ಮುಖಂಡರಾದ ಬಿ.ಅನ್ಸರ್ ಭಾ, ಎನ್.ಎಸ್.ರಫಿಕ್, ತಬರೀಜ್, ಬಣಗಾರ ಬಾಬಾ, ಸೋಮಪ್ಪ, ಮನ್ಸೂರ್ ಅಹಮ್ಮದ್, ಜಫ್ರುಲ್ಲಾ ಖಾನ್, ತಾಜುದ್ದೀನ್ ಹಾಗೂ ಇತರರು ಇದ್ದರು.