ಹೊತ್ತಿ ಉರಿದ ಬುಲೆಟ್ ಬೈಕ್

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಡಿ 07 : ಇದ್ದಕ್ಕಿದ್ದಂತೆ ಹೊತ್ತಿ ಉರಿದ ಬುಲೆಟ್ ಬೈಕ್ ನಗರದ ಸಬ್ ರಿಜಿಸ್ಟರ್ ಕಚೇರಿಯ ಬಳಿಯ ಸ್ಟೇಷನರಸ್ತೆಯಲ್ಲಿ ಸಂಜೆ ನಡೆದ ಘಟನೆ

ಹನುಮಾನ್ ಪೆಟ್ರೋಲ್ ಬಂಕ್ ನಲ್ಲಿ ಹತ್ತು ಲೀಟರ್ ಪೆಟ್ರೋಲ್ ತುಂಬಿಸಿಕೊಂಡ ಹೊರಟಿದ್ದ ಬೈಕ್ ಸವಾರ.ಪೆಟ್ರೋಲ್ ಬಂಕ್ ದಾಟಿ ಅನತಿ ದೂರ ಸಾಗಿದ ಬಳಿಕ ‌ಬೈಕ್ ನಲ್ಲಿ ಕಿಡಿ ಕಾಣಿಸಿಕೊಂಡಿದೆ.
ಬುಲೆಟ್ ಬೈಕ್ ನಿಲ್ಲಿಸಿದ್ದೇ ತಡ ಕ್ಷಣಾರ್ಧದಲ್ಲಿ ಹತ್ತಿ ಉರಿದಿದೆ.
ಬ್ರೂಸ್ ಪೇಟ್ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ‌ ಕ್ರಮ‌ತೆಗೆದುಕೊಂಡಿದ್ದಾರೆ.