ಹೊಡೆದಾಟ: ಮೂವರಿಗೆ ದಂಡ

ಕಲಬುರಗಿ ನ 8: ಯಾದಗಿರಿ ಜಿಲ್ಲೆ ಶಹಪುರ ತಾಲೂಕಿನ ಗೋಗಿ ಪೊಲೀಸ್ ಠಾಣೆ ವ್ಯಾಪ್ತಿಯ ನಡಿಹಾಳ ಗ್ರಾಮದಲ್ಲಿ ಹೊಡೆದಾಟದಲ್ಲಿ ಭಾಗಿಯಾದ ರಾಜು,ಬಸವರಾಜ ಮತ್ತು ಬಸಮ್ಮ ಎಂಬ ಮೂವರಿಗೆ ಹೆಚ್ಚುವರಿ ಜೆಎಂಎಫ್‍ಸಿ ನ್ಯಾಯಾಲಯ 2 ಸಾವಿರ ರೂ.ದಂಡ ವಿಧಿಸಿದೆ.
ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಹೆಚ್ಚುವರಿ ಜೆಎಂಎಫ್‍ಸಿ ನ್ಯಾಯಾಧೀಶ ಕಾಡಪ್ಪ ಹುಕ್ಕೇರಿ ಅವರು ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿ ತಲಾ 2 ಸಾವಿರ ರೂ ದಂಡ ವಿಧಿಸಿದ್ದಾರೆ.ಸರಕಾರದ ಪರವಾಗಿ ಸರ್ಕಾರಿ ಸಹಾಯಕ ಅಭಿಯೋಜಕ ವಿನಾಯಕ ಕೋಡ್ಲಾ ವಾದ ಮಂಡಿಸಿದ್ದರು.