ನಿರ್ದೇಶಕ ಯೋಗರಾಜ್ ನಿರ್ದೇಶನ ಮಾಡಿರುವ “ಗರಡಿ “ಚಿತ್ರದ ಹೊಡಿರೆಲೆ ಹಲಗಿ” ಹಾಡು ಬಿಡುಗಡೆಯಾಗಿದ್ದು ವೈರಲ್ ಆಗಿದೆ. ವನಜಾ ಪಾಟೀಲ್ ನಿರ್ಮಿಸಿರುವ ಚಿತ್ರಕ್ಕೆ ಯೋಗರಾಜ್ ಭಟ್ ನಿರ್ದೇಶನ ಮಾಡಿದ್ದಾರೆ.
“ಗರಡಿ” ಚಿತ್ರದ “ಹೊಡಿರೆಲೆ ಹಲಗಿ” ಮೊದಲ ಹಾಡು . ಈ ಹಾಡು ಕೆಲವೇ ದಿನಗಳಲ್ಲಿ ಲಕ್ಷ ಲಕ್ಷ ವೀಕ್ಷಣೆ ಪಡೆದಿದೆ. ಯೋಗರಾಜ್ ಭಟ್ ಅವರು ಬರೆದಿರುವ ಹಾಡಿನ ಮಾಧುರ್ಯಕ್ಕೆ ಕನ್ನಡಿಗರು ಮನ ಸೋತ್ತಿದ್ದಾರೆ.
ಮುಂದಿನ ಹಾಡು ಯಾವಾಗ ಬಿಡುಗಡೆ ಎನ್ನುವ ಕುತೂಹಲ ಹೆಚ್ಚು ಮಾಡಿದೆ. ಮೊದಲ ಹಾಡಿಗೆ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆಗೆ “ಗರಡಿ” ತಂಡ ಸಂತಸ ವ್ಯಕ್ತಪಡಿಸಿದೆ. ಯೋಗರಾಜ್ ಭಟ್ ಬರೆದಿರುವ ಹಾಡನ್ನು ಉತ್ತರ ಕರ್ನಾಟಕದ ಪ್ರತಿಭೆ ಮೇಘನಾ ಹಳಿಯಾಳ್ ಹಾಡಿದ್ದಾರೆ. ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ನಿಶ್ವಿಕಾ ನಾಯ್ಡು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಸೂರ್ಯ, ಸೋನಾಲ್ ಮಾಂಟೆರೊ, ಬಿ.ಸಿ.ಪಾಟೀಲ್, ಸುಜಯ್, ರಾಘವೇಂದ್ರ, ಧರ್ಮಣ್ಣ ಮುಂತಾದವರು “ಗರಡಿ” ಚಿತ್ರದಲ್ಲಿ ಅಭಿನಯಿಸಿದ್ದಾರೆ.