ಆಹಾರ ಸೇವನೆ ಮಾಡದೆ ಇದ್ದಾಗ ಮತ್ತಷ್ಟು ಸಮಸ್ಯೆ ಕಾಡಲು ಆರಂಭಿಸುತ್ತದೆ. ಹೊಟ್ಟೆ ಸರಿ ಇಲ್ಲದೆ ಇರುವಾಗ ಏನಾದರೂ ತಿನ್ನದೆ ಇದ್ದಾಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವುದರಲ್ಲಿ ಸಂಶಯವೇ ಇಲ್ಲ.
ಹೊಟ್ಟೆ ಸರಿ ಇಲ್ಲದೆ ಇರುವಾಗ ಘನ ಆಹಾರ ಸೇವನೆ ಮಾಡಬಾರದು. ಇದರಿಂದ ಸಮಸ್ಯೆಯಾಗುತ್ತದೆ. ಆದರೆ ದ್ರವ ಆಹಾರ ಸೇವನೆ ಮಾಡಿದರೆ ಯಾವುದೇ ತೊಂದರೆಯಿಲ್ಲ.
ಸಕ್ಕರೆ ಹಾಗೂ ಉಪ್ಪಿನ ನೀರು. ಇದನ್ನು ಹಿಂದಿನ ಕಾಲದಿಂದಲೂ ಬಳಸಿಕೊಂಡು ಬರಲಾಗುತ್ತಿದೆ. ಸಕ್ಕರೆ ಹಾಗೂ ಸ್ವಲ್ಪ ಉಪ್ಪು ಬೆರೆಸಿರುವ ನೀರನ್ನು ಕುಡಿದರೆ ದೇಹದಲ್ಲಿ ನೀರಿನಾಂಶವು ಸರಿಯಾಗಿರುತ್ತದೆ ಮತ್ತು ವಾಂತಿ, ಭೇದಿಯಿಂದ ಉಂಟಾಗಿರುವ ನಿಶ್ಯಕ್ತಿಯಿಂದ ಪಾರಾಗಬಹುದು.
ತಾಜಾ ಮೊಸರು ಹಾಗೂ ಸ್ವಲ್ಪ ಉಪ್ಪು ಹಾಕಿ ಮಾಡಿರುವಂತಹ ಮಜ್ಜಿಗೆಯನ್ನು ಸೇವನೆ ಮಾಡಿದರೆ ಹೆಚ್ಚಿನ ಆರಾಮ ಪಡೆಯಬಹುದು. ಇದು ಹೊಟ್ಟೆಯನ್ನು ತಂಪಾಗಿಸುವುದು ಮಾತ್ರವಲ್ಲದೆ ಹೊಟ್ಟೆಯ ಆಮ್ಲವನ್ನು ತಟಸ್ಥಗೊಳಿಸಿ ಕರುಳುಗಳ ಕಾರ್ಯವನ್ನು ಸುಧಾರಿಸುತ್ತದೆ.
ಅತಿಸಾರ ಮತ್ತು ನಿರ್ಜಲೀಕರಣದಿಂದ ಪರಿಹಾರ ಪಡೆಯಲು ಮತ್ತೊಂದು ಆರೋಗ್ಯಕರ ಹಾಗೂ ಪೋಷಕಾಂಶಯುಕ್ತ ಪಾನೀಯವೆಂದರೆ ಎಳನೀರು. ಕಳಕೊಂಡಿರುವ ವಿದ್ಯುದ್ವಿಚ್ಛೇದ್ಯಗಳನ್ನು ಮರುಹೊಂದಿಸುವುದು ಮಾತ್ರವಲ್ಲದೆ ಹೊಟ್ಟೆಯಲ್ಲಿ ಪಿಎಚ್ ಮಟ್ಟವನ್ನು ಕಡಿಮೆ ಮಾಡಿ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಶಾಂತವಾಗಿಡುತ್ತದೆ. ಬೆಳ್ಳಂ ಬೆಳಿಗ್ಗೆ ಎದ್ದು ಎಳೆ ನೀರು ಕುಡಿಯಿರಿ, ಆರೋಗ್ಯ ಪಡೆಯಿರಿ
ಒಂದು ಲೋಟ ನೀರಿಗೆ ಒಂದು ಚಮಚ ಕೋಕಮ್ ಜ್ಯೂಸ್, ಸ್ವಲ್ಪ ಸಕ್ಕರೆ ಹಾಗೂ ಉಪ್ಪನ್ನು ಹಾಕಿ ಬೆರೆಸಿಕೊಳ್ಳಿ. ಇದರಲ್ಲಿ ಉರಿಯೂತ ಶಮನಕಾರಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆ?ಯಂಟಿಆಕ್ಸಿಡೆಂಟ್ ಗುಣ ಹೊಂದಿರುವ ಗಾರ್ಸಿನೊಲ್ ಇರುವುದರಿಂದ ಹೊಟ್ಟೆ ಸರಿಯಿಲ್ಲದಾಗ ಇದನ್ನು ಕುಡಿಯಿರಿ